ಭಾರತದ ಈ ದೇವಾಲಯದಲ್ಲಿಯೇ ಸ್ವರ್ಗದ ಬಾಗಿಲು, ಈ ಬಾಗಿಲ ಮೂಲಕವೇ ವಿಷ್ಣು ಭೂಲೋಕಕ್ಕೆ ಪಾದಾರ್ಪಣೆ ಮಾಡಿದ್ದು !. ಎಲ್ಲಿ ಗೊತ್ತಾ?

ನಮಸ್ಕಾರ ಸ್ನೇಹಿತರೇ ತಿರುಪತಿಗೂ ಮತ್ತು ಅನ್ಯಗ್ರಹ ವಾಸಿಗಳಿಗು ನಂಟು ಇದೆಯಾ, ಆಗಾಗ ಅನ್ಯಜೀವಿಗಳು ತಿರುಪತಿಗೆ ಬಂದುಹೋಗುತ್ತವ, ಇಂತಹ ಪ್ರಶ್ನೆಗಳಿಗೆ ಕಾರಣವಾಗಿರೋದು ತಿರುಪತಿಯ ಬೆಟ್ಟದ ಮೇಲೆ ಒಂದು ಸ್ಟಾರ್ ಗೆಟ್ ಎಂಬ ಸ್ವರ್ಗದ ಬಾಗಿಲು. ವಿಜ್ಞಾನಿಗಳು ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಮ್ಯಾಗ್ನೆಟಿಕ್ ರೇಡಿಯೇಶನ್ ಗಳು ಹೆಚ್ಚಾಗುತ್ತಿವೆ. ಅಲ್ಲಿಗೆ ಮೊಬೈಲ್ ಗಳನ್ನು ತೆಗೆದುಕೊಂಡು ಹೋದರೆ, ಅದರ ಬ್ಯಾಟರಿಗಳು ಭಸ್ಮವಾಗುತ್ತವೆ, ಇಂತಹ ಹಲವು ಆಸಕ್ತಿಕರ ಮಾಹಿತಿಯನ್ನು ನಾವು ಇಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆವೆ

ತಿರುಪತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪವಿತ್ರ ಹಾಗೂ ಶಕ್ತಿಶಾಲಿ ಕ್ಷೇತ್ರಗಳ ಪೈಕಿ ಒಂದಾಗಿದೆ. ಕಲಿಯುಗದ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನಡೆದಾಡಿದ ನೆಲವಿದು. ಇಲ್ಲಿ ಅನೇಕ ವಿಸ್ಮಯಗಳು ಪವಾಡಗಳು ನಡೆಯುತ್ತಲೇ ಇರುತ್ತವೆ ಈ ಪವಾಡಗಳ ಕಾರಣದಿಂದಾಗಿಯೇ ತಿರುಪತಿಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ತಿರುಪತಿಯಲ್ಲಿ ಸಹಸ್ರಾರು ನಿಗೂಢಗಳು ಅಡಗಿವೆ, ಅದರಲ್ಲಿ ಕೆಲವೊಂದನ್ನು ನಾವಿವತ್ತು ತಿಳಿಯೋಣ.

ಹೌದು ತಿರುಪತಿ ವಿಸ್ಮಯಗಳ ಆಗರ, ಸಾಕ್ಷಾತ್ ಶ್ರೀಮಹಾವಿಷ್ಣು ವೆಂಕಟೇಶ್ವರನ ರೂಪದಲ್ಲಿ ನೆಲೆನಿಂತ ಪರಮಪಾವನ ಕ್ಷೇತ್ರವಿದು. ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ಅದೆಷ್ಟು ಪಾಪಗಳು ತನ್ನಂತಾನೇ ಪರಿಹಾರವಾಗಿ ಹೋಗುತ್ತದೆ. ಹೀಗಾಗಿಯೇ ದೇಶ ವಿದೇಶದಿಂದಲೂ ತಿರುಪತಿಗೆ ಭಕ್ತರು ವರ್ಷವಿಡಿ ಆಗಮಿಸುತ್ತಾರೆ. ತಿರುಪತಿಯಲ್ಲಿರುವ ಅನೇಕ ವಿಸ್ಮಯಕಾರಿ ಅಂಶಗಳಲ್ಲಿ ಒಂದಾಗಿದೆ ಶಿಲಾ ತೋರಣ. ಇದು ವೆಂಕಟೇಶ್ವರ ಸ್ವಾಮಿಯ ಪಾದವಿರುವ ಸ್ಥಳವೆಂದು ಹೇಳಲಾಗಿದೆ.

ಇದೇ ಬಾಗಿಲಿನ ಮೂಲಕ ವಿಷ್ಣು ಭೂಮಿಯನ್ನು ಪ್ರವೇಶಿಸಿದ್ದು ಎಂದು ಹೇಳಲಾಗುತ್ತೆ. ಶಿಲಾ ತೋರಣ ಇದು ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಹೆಬ್ಬಾಗಿಲು, ಇದನ್ನು ಆಂಗ್ಲ ಭಾಷೆಯಲ್ಲಿ ‘ಗೇಟ್ ವೇ ಟು ಹೆವೆನ್’ ಅಂತಾನೂ ಕರೀತಾರೆ. ಎರಡು ದಶಕಗಳಿಂದ ಇಲ್ಲಿಯವರೆಗೆ ಅಲ್ಲಿಗೆ ಭೇಟಿಕೊಟ್ಟು ಅಲ್ಲಿದ್ದ ಪಾದುಕೆಗಳನ್ನು ಮುಟ್ಟಿ ನಮಸ್ಕರಿಸಿ ಬರುವ ಅವಕಾಶವಿತ್ತು, ಆದರೆ ಈಗ ಈ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಭಕ್ತರಿಗೆ ಪ್ರವೇಶ ಕೊಡದೆ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ. ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

26 ಅಡಿ ಅಗಲ 10 ಅಡಿ ಎತ್ತರವಿರುವ ಈ ಶಿಲಾ ತೋರಣ ಏಷ್ಯಾದಲ್ಲೇ ಮತ್ತೊಂದು ಇಲ್ಲ, ಮತ್ತು ಈ ಶಿಲಾ ತೋರಣ ನೈಸರ್ಗಿಕವಾಗಿ ನೆಲೆಗೊಂಡಿದೆ ಎಂದು ಭೂವಿಜ್ಞಾನ ತಜ್ಞರು ಕೂಡ ದೃಢೀಕರಿಸಿದ್ದಾರೆ. ಈ ಶಿಲಾ ತೋರಣ ನಿರ್ಮಾಣಗೊಂಡು 20ಲಕ್ಷ ವರ್ಷಗಳೇ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಅದಕ್ಕಾಗಿ ಈ ಪ್ರದೇಶವನ್ನು ಕಾಪಾಡಿಕೊಳ್ಳಲು ಜನರಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಹೊರಗಡೆಯಿಂದ ನೋಡಲು ಯಾವ ಅಭ್ಯಂತರವೂ ಇಲ್ಲ, ವಿಜ್ಞಾನಿಗಳು ಹಾಗೂ ಭೂ ವಿಜ್ಞಾನಿ ಗಳು ಹೇಳುವ ಪ್ರಕಾರ ಇಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಎನರ್ಜಿ ಗಳು ಹೆಚ್ಚಾಗಿವೆ.

Post Author: Ravi Yadav