ತಿಂಡಿಗೆ ಏನ್ ಮಾಡ್ಬೇಕು ಅಂತ ಯೋಚ್ನೆನ?? ಹೊಸ ರೀತಿಯ ಮಸಾಲಾ ಕುಷ್ಕ ರೈಸ್ ಮಾಡಿ ನೋಡಿ, ಎಲ್ಲರೂ ಇಷ್ಟ ಪಟ್ಟು ಪ್ಲೇಟ್ ಖಾಲಿ ಮಾಡ್ತಾರೆ.

ತಿಂಡಿಗೆ ಏನ್ ಮಾಡ್ಬೇಕು ಅಂತ ಯೋಚ್ನೆನ?? ಹೊಸ ರೀತಿಯ ಮಸಾಲಾ ಕುಷ್ಕ ರೈಸ್ ಮಾಡಿ ನೋಡಿ, ಎಲ್ಲರೂ ಇಷ್ಟ ಪಟ್ಟು ಪ್ಲೇಟ್ ಖಾಲಿ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಸಾಲ ಕುಷ್ಕ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಸಾಲ ಕುಷ್ಕ ರೈಸ್ ಮಾಡಲು ಬೇಕಾಗುವ ಪದಾರ್ಥಗಳು: 100ml ಎಣ್ಣೆ, 2 ಇಂಚು ಚಕ್ಕೆ, 5 – 6 ಲವಂಗ, 4 – 5 ಏಲಕ್ಕಿ, 7 – 8 ಹಸಿಮೆಣಸಿನಕಾಯಿ, ಸ್ವಲ್ಪ ಪುದೀನಾ, 2 ಈರುಳ್ಳಿ, ಎರಡೂವರೆ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೊಮ್ಯಾಟೋ, ಸ್ವಲ್ಪ ಕೇಸರಿ ಕಲರ್, ಅರ್ಧ ಕೆಜಿ ಅಕ್ಕಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಗರಂ ಮಸಾಲ, 2 ಚಮಚ ಚಿಕನ್ ಮಸಾಲ.

ಮಸಾಲ ಕುಷ್ಕ ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಕುಕ್ಕರನ್ನು ಇಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದಕ್ಕೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಪುದಿನಾವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮ್ಯಾಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಗರಂಮಸಾಲ ಪುಡಿ, ಚಿಕನ್ ಮಸಾಲ ಪುಡಿ, ಕೇಸರಿ ಕಲರ್ ಅನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೀರಿನಿಂದ ಚೆನ್ನಾಗಿ ತೊಳೆದು 10 ನಿಮಿಷಗಳ ಕಾಲ ನೆನೆಸಿದ ಅಕ್ಕಿಯನ್ನು ಹಾಕಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅಕ್ಕಿಯನ್ನು ತೆಗೆದುಕೊಂಡ ಅಳತೆಯಲ್ಲಿ 2 ಅಳತೆ ನೀರನ್ನು ಹಾಕಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಕುಕ್ಕರ್ ಮುಚ್ಚಳವನ್ನು ತೆಗೆದು ಒಂದು ಬಾರಿ ಮಿಕ್ಸ್ ಮಾಡಿಕೊಂಡರೆ ಮಸಾಲ ಕುಷ್ಕ ರೈಸ್ ಸವಿಯಲು ಸಿದ್ಧ.