ಈ ವಾರದ ಟಾಪ್ ಧಾರವಾಹಿ ಯಾವುದು ಗೊತ್ತಾ?? ಸತ್ಯ ಧಾರವಾಹಿಗೆ ಶಾಕ್. ಬಾರಿ ನಿರೀಕ್ಷೆ ಮೂಡಿಸಿದ್ದ ಕನ್ನಡತಿ ಕಥೆ ಏನಾಯಿತು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಪ್ರತಿ ಧಾರವಾಹಿಗಳ ನಡುವೆಯೇ ಟಿಆರ್ಪಿ ಲೆಕ್ಕಾಚಾರದಲ್ಲಿ ದಿನೇ ದಿನೇ ಪೈಪೋಟಿ ಹೆಚ್ಚಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು. ಅದೇ ಕಾರಣಕ್ಕಾಗಿ ಧಾರವಾಹಿಗಳು ಪ್ರತಿಯೊಂದು ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ಮಾಣ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಬಜೆಟ ಲೆಕ್ಕಾಚಾರದಲ್ಲಿ ಹಲವಾರು ಸಿನಿಮಾಗಳನ್ನು ಮೀರಿಸುವ ಮಟ್ಟಕ್ಕೆ ನಿರ್ಮಾಣ ಮಾಡಲಾಗುತ್ತದೆ. ಯಾವುದೇ ಚಿಕ್ಕ ವಿಷಯವನ್ನಾದರೂ ಸರಿ ಜನರಿಗೆ ಬಹಳ ಹತ್ತಿರವಾಗಿ ತೋರಿಸುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ಮಾಣ ಮಾಡಲು ನಿರ್ದೇಶಕರು ಕಥೆ ಬರೆಯುತ್ತಾರೆ.

ಇನ್ನು ಪ್ರತಿಯೊಂದು ಸನ್ನಿವೇಶಗಳನ್ನು ಕೂಡ ಜನರಲ್ಲಿ ಭಾವನಾತ್ಮಕ ಸಂದೇಶಗಳ ಜೊತೆ ಬೆರೆತು ಕೊಳ್ಳುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿದ್ದಾರೆ ಧಾರಾವಾಹಿಯು ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂಬುದು ಲೆಕ್ಕಾಚಾರ. ಇದೀಗ ಈ ಎಲ್ಲ ಲೆಕ್ಕಾಚಾರಗಳ ನಡುವೆ ಈ ವಾರದ ಟಿಆರ್ಪಿ ಲಿಸ್ಟ್ ಬಿಡುಗಡೆ ಯಾಗಿದ್ದು, ಬಹುತೇಕ ಧಾರಾವಾಹಿಗಳು ತಮ್ಮ ಟಿಆರ್ಪಿ ಲೆಕ್ಕಾಚಾರಗಳನ್ನು ಬದಲಾಯಿಸಿಕೊಂಡಿವೆ. ಹೀಗಿರುವಾಗ ಟಿಆರ್ಪಿ ಲಿಸ್ಟ್ ನಲ್ಲಿ ಸತ್ಯ ಧಾರವಾಹಿ ಕೆಳಗಿಳಿದಿದೆ.

ಹಲವಾರು ತಿಂಗಳುಗಳ ಬಳಿಕ ಸತ್ಯ ಧಾರವಾಹಿ ಯನ್ನು ಜೊತೆ ಜೊತೆಯಲಿ ಧಾರಾವಾಹಿ ಹೊರತುಪಡಿಸಿದರೇ ಮತ್ತೊಂದು ಧಾರವಾಹಿ ಕೆಳಗಿಳಿಸುವುದರಲ್ಲಿ ಯಶಸ್ವಿಯಾಗಿದೆ. ಹೌದು ಸ್ನೇಹಿತರೆ ಬಿಡುಗಡೆಯಾದ ಹಲವಾರು ತಿಂಗಳುಗಳಿಂದ ಒಂದೆರಡು ವಾರ ಬಿಟ್ಟರೆ ಉಳಿದ ಎಲ್ಲಾ ವಾರಗಳು ಮೊದಲನೇ ಸ್ಥಾನದಲ್ಲಿದ್ದ ಸತ್ಯ ಧಾರವಾಹಿಯನ್ನು ಗಟ್ಟಿಮೇಳ ಧಾರಾವಾಹಿ ಟಿಆರ್ಪಿ ಲೆಕ್ಕಾಚಾರದಲ್ಲಿ ಮೀರಿಸಿ ಮೊದಲನೇ ಸ್ಥಾನಕ್ಕೆ ಏರಿದೆ, ಇನ್ನು ಕನ್ನಡದ ಬಹುನಿರೀಕ್ಷಿತ ಧಾರಾವಾಹಿ ಕನ್ನಡತಿ 9ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.