ವಾರಾಂತ್ಯ ಬರದೇ ಇದ್ದಕ್ಕಾಗಿ ಸುದೀಪ್ ಕಳೆದುಕೊಂಡ ಸಂಭಾವನೆ ಎಷ್ಟು ಲಕ್ಷ ಆಗುತ್ತಾ?? ಒಂದೇ ವಾರಕ್ಕೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಇದೀಗ ಇದೇ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಸುದೀಪ್ ರವರು ತಮ್ಮದೇ ಆದ ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ವಾರದ ಅಂತ್ಯದಲ್ಲಿ ನಡೆಸಿಕೊಡಲು ಸಾಧ್ಯವಾಗಿಲ್ಲ. ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಯಾವುದೇ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದನ್ನು ತಪ್ಪಿಸಿ ಕೊಂಡಿರಲಿಲ್ಲ

ಇದು ಪ್ರೇಕ್ಷಕರಿಗೆ ಹಾಗೂ ಮನೆಯ ಸದಸ್ಯರಿಗೂ ಕೂಡ ಬಹಳ ಕಹಿಯ ವಿಚಾರವಾಗಿದೆ. ಒಟ್ಟಿನಲ್ಲಿ ಈ ವಾರ ಎಲ್ಲರೂ ಕಿಚ್ಚ ಸುದೀಪ್ ರವರನ್ನು ಮಿಸ್ ಮಾಡಿ ಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕಾಗಿ ಬಿಗ್ಬಾಸ್ ಕಾರ್ಯಕ್ರಮವು ವಾರದ ಅಂತ್ಯದಲ್ಲಿ ವಿವಿಧ ರೀತಿಯ ಟಾಸ್ಕ್ ಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಕಿಚ್ಚ ಸುದೀಪ್ ರವರ ನಿರೂಪಣೆಯ ಲೆಕ್ಕಾಚಾರ ಯಾವುದೇ ಮನರಂಜನೆಗೆ ಸಮವಾಗಿಲ್ಲ.

ಇನ್ನೂ ಹೀಗೆ ನಿರೂಪಣೆಯಲ್ಲಿಯು ಕೂಡ ಯಶಸ್ಸನ್ನು ಕಂಡಿರುವ ಕಿಚ್ಚ ಸುದೀಪ್ ರವರು ಈ ವಾರ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗದ ಕಾರಣ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಸುದೀಪ್ ರವರಿಗೆ ಒಂದು ವಾರದ ಸಂಭಾವನೆ ಅಲಭ್ಯವಾಗಿರುತ್ತದೆ. ಹೌದು ಸ್ನೇಹಿತರೇ ಕಿಚ್ಚ ಸುದೀಪ್ ರವರು ಈ ಸಂಪೂರ್ಣ ಸೀಸನ್ ಗೆ 8 ಕೋತಿ ರೂಪಾಯಿಗಳನ್ನು ಸಂಭವನೀಯನ್ನಾಗಿ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದೇ ಇತ್ತು. ಆದರೆ ಇದೀಗ 1 ಎಪಿಸೋಡ್ ನಡೆಸಿ ಕೊಡಲಾಗದ ಕಾರಣ 57 ಲಕ್ಷ ರೂಪಾಯಿಗಳನ್ನು ಸಂಭಾವನೆಯಿಂದ ಕಡಿಮೆ ಮಾಡಲಾಗಿದೆ ಎಂಬುದು ಕಿರುತೆರೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.