ವಿಭಿನ್ನ ರೀತಿಯಲ್ಲಿ ಮೊಸರು ಅವಲಕ್ಕಿ ದೋಸೆ ಮಾಡುವುದು ಹೇಗೆ ಗೊತ್ತೇ?? ಟ್ರೈ ಮಾಡಿ ಎಲ್ಲರೂ ಇಷ್ಟ ಪಡ್ತಾರೆ.

ವಿಭಿನ್ನ ರೀತಿಯಲ್ಲಿ ಮೊಸರು ಅವಲಕ್ಕಿ ದೋಸೆ ಮಾಡುವುದು ಹೇಗೆ ಗೊತ್ತೇ?? ಟ್ರೈ ಮಾಡಿ ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ವಿಭಿನ್ನ ರೀತಿಯ ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮೊಸರು ಅವಲಕ್ಕಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: 1ಬಟ್ಟಲು ದೋಸೆ ಅಕ್ಕಿ, 1 ಬಟ್ಟಲು ಅವಲಕ್ಕಿ, ಅರ್ಧ ಬಟ್ಟಲು ಮೊಸರು, ಕಾಲು ಚಮಚ ಮೆಂತ್ಯ, ಸ್ವಲ್ಪ ಎಣ್ಣೆ, ರುಚಿಗೆ ತಕಷ್ಟು ಉಪ್ಪು,ಸ್ವಲ್ಪ ಅಡುಗೆ ಸೋಡಾ.

ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನ: ಮೊದಲಿಗೆ ತೆಗೆದುಕೊಂಡ ಅಕ್ಕಿಯನ್ನು ನೀರಿನಿಂದ 2 -3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಮತ್ತೆ ಅಕ್ಕಿಗೆ ನೀರು ಹಾಗೂ ಮೆಂತ್ಯವನ್ನು ಹಾಕಿ 4 – 5 ಗಂಟೆಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಬಟ್ಟಲಿಗೆ ಅವಲಕ್ಕಿಯನ್ನು ಹಾಕಿ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅವಲಕ್ಕಿಗೆ ಮೊಸರು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 3 ಗಂಟೆಗಳ ಕಾಲ ನೆನೆಯಲು ಬಿಡಿ.

ನಂತರ ನೆನೆಸಿದ ಅಕ್ಕಿ, ಅವಲಕ್ಕಿ, ಮೆಂತ್ಯ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 -12 ಗಂಟೆಗಳ ಕಾಲ ನೆನೆಯಲು ಬಿಡಿ.12 ಗಂಟೆಗಳ ನಂತರ ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆಯಷ್ಟು ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ಅರ್ಧ ಚಮಚದಷ್ಟು ಎಣ್ಣೆಯನ್ನು ಹಾಕಿ ಈರುಳ್ಳಿಯಿಂದ ಸವರಿಕೊಂಡು ಕಾಯಲು ಬಿಡಿ. ತವಾ ಕಾದ ನಂತರ ಹಿಟ್ಟನ್ನು ಸೆಟ್ ದೋಸೆ ರೀತಿಯಲ್ಲಿ ಸವರಿಕೊಳ್ಳಿ. ಕೊನೆಯದಾಗಿ ಎಣ್ಣೆಯನ್ನು ದೋಸೆಯ ಮೇಲೆ ಹಾಕಿ ಎರಡೂ ಬದಿಯಲ್ಲಿ ಬೇಯಿಸಿಕೊಂಡರೆ ಮೊಸರು ಅವಲಕ್ಕಿ ದೋಸೆ ಸವಿಯಲು ಸಿದ್ಧ.