ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ಹಿಂದೆ ಇರುವ ಕಾಣದ ಕೈ ಯಾರದ್ದು ಗೊತ್ತಾ??

ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆಲುವಿನ ಹಿಂದೆ ಇರುವ ಕಾಣದ ಕೈ ಯಾರದ್ದು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತಿರುವಂತೆ ಇದೀಗ ಐಪಿಎಲ್ ಟೂರ್ನಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರ್ಸಿಬಿ ತಂಡವು ಸನ್ ರೈಸರ್ಸ್ ತಂಡದ ಜೊತೆಗಿನ ಪಂದ್ಯದಲ್ಲಿ ರೋಚಕ ಜಯವನ್ನು ದಾಖಲಿಸುವುದರಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಆರ್ಸಿಬಿ ತಂಡವು ಸಾಕಷ್ಟು ಆತ್ಮ ವಿಶ್ವಾಸದಿಂದ ಮುಂದಿನ ಪಂದ್ಯಗಳನ್ನು ಆಡಬಹುದಾಗಿದೆ. ಇದೇ ಸಮಯದಲ್ಲಿ ನಾವು ಮತ್ತಷ್ಟು ಏಕಾಗ್ರತೆಯಿಂದ ಪಂದ್ಯಗಳನ್ನು ಆಡುತ್ತೇವೆ ಎಂದು ವಿರಾಟ್ ಕೊಹ್ಲಿ ಅವರು ಹೇಳಿಕೆ ನೀಡಿದ್ದಾರೆ.

ಇನ್ನು ಎರಡನೇ ಪಂದ್ಯದಲ್ಲಿ ಇನ್ನೇನು ಪಂದ್ಯ ಕೈ ಜಾರಿತು ಎನ್ನುವ ಸಂದರ್ಭದಲ್ಲಿ ಆರ್ಸಿಬಿ ತಂಡ ಸನ್ ರೈಸರ್ಸ್ ತಂಡದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡಿತು ಎಂದರೆ ತಪ್ಪಾಗಲಾರದು, ಯಾಕೆಂದರೆ ಸನ್ ರೈಸರ್ಸ್ ತಂಡ ಗೆಲುವು ಕಾಣಲು ಕೊನೆಗೆ ನಾಲ್ಕು ಓವರ್ ಗಳಲ್ಲಿ ಅಗತ್ಯವಿದ್ದು ಕೇವಲ 34 ರನ್ ಗಳು, ಹಾಗೂ 8 ವಿಕೆಟ್ಗಳು ಸನ್ ರೈಸರ್ಸ್ ತಂಡದ ಕೈಯಲ್ಲಿ ಇದ್ದವು.

ಇಂತಹ ಸಂದರ್ಭದಲ್ಲಿ ಒಂದೇ ಓವರ್ ನಲ್ಲಿ 3 ವಿಕೆಟ್ ಗಳನ್ನು ಪಡೆಯುವ ಮೂಲಕ ಆರ್ಸಿಬಿ ತಂಡ ಪಂದ್ಯಕ್ಕೆ ಮರಳಿತು, ಶಹಬಾಜ್ ಅಹ್ಮದ್ ರವರು ಮೊದಲ ಎಸೆತದಲ್ಲಿ ಜಾನಿ ಬೈರ್ ಸ್ಟೋ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು, ಮುಂದಿನ ಎಸೆತದಲ್ಲಿ ಆಗಾಗಲೇ 38 ರನ್ ಗಳಿಸಿ ಇನ್ನೇನು ತನ್ನ ಆಟದ ಗೇರು ಬದಲಾಯಿಸಬೇಕು ಎಂದು ಕೊಂಡಿದ್ದ ಮನೀಶ್ ಪಾಂಡೆ ರವರ ವಿಕೆಟನ್ನು ಪಡೆಯುವ ಮೂಲಕ ಆರ್ಸಿಬಿ ತಂಡಕ್ಕೆ ಗೆಲುವಿನ ಕನಸನ್ನು ಚಿಗುರಿಸಿದ್ದರು. ಅಲ್ಲಿಯವರೆಗೂ ಯಾರೊಬ್ಬರೂ ಕೂಡ ಆರ್ಸಿಬಿ ತಂಡ ಪಂದ್ಯ ಗೆಲ್ಲಬಹುದು ಎಂದು ಕೊಂಡಿರಲಿಲ್ಲ.

ಇದಾದ ಬಳಿಕ ಅದೇ ಓವರ್ನಲ್ಲಿ ಅಬ್ದುಲ್ ರವರನ್ನು ಔಟ್ ಮಾಡುವ ಮೂಲಕ ಶಹಬಾಜ್ ಅಹ್ಮದ್ ರವರು ಆರ್ಸಿಬಿ ತಂಡಕ್ಕೆ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮ ಮಾಡಿದರು. ಈ ಓವರ್ ಮುಗಿದ ಬಳಿಕ ಕೇವಲ ಒಂದು ರನ್ ನೀಡಿದ ಕಾರಣ ಸನ್ರೈಸರ್ಸ್ ತಂಡವು ಗೆಲುವನ್ನು ಕಾಣಬೇಕಾದರೆ ಮುಂದಿನ ಮೂರು ವಾರಗಳಲ್ಲಿ 33 ರನ್ ಗಳಿಸಬೇಕಾಗಿತ್ತು.

ಇಂತಹ ಸಂದರ್ಭದಲ್ಲಿ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಹರ್ಷಲ್ ಪಟೇಲರು 7 ರ ನೀಡಿ 1 ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾದರು. ತದ ನಂತರ ಬಾಲ್ ಅನ್ನು ತೆಗೆದು ಕೊಂಡು ಮೊಹಮ್ಮದ್ ಸಿರಾಜ್ ರವರು ಮೊದಲ ಬಾಲ್ನಲ್ಲಿ ಸಿಕ್ಸರ್ ನೀಡಿದರು. ಆದರೆ ತದ ನಂತರ ಉತ್ತಮ ಬೋಲಿಂಗ್ ಮಾಡಿದ ಸಿರಾಜ್ ರವರು 11 ರನ್ ನೀಡಿ 1 ವಿಕೆಟ್ ಪಡೆದು ಕೊನೆಯ ಓವರ್ ಗೆ 16 ರನ್ ಉಳಿಸಿದರು, ಇದಾದ ಬಳಿಕ ಹರ್ಷಲ್ ಪಟೇಲ್ ರವರು 9 ರನ್ ನೀಡಿ ಆರ್ಸಿಬಿ ತಂಡಕ್ಕೆ ಏಳು ರನ್ ಗಳ ಜಯವನ್ನು ನೀಡುವುದರಲ್ಲಿ ಯಶಸ್ವಿಯಾದರು.

ಹೀಗೆ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸುವುದರ ಹಿಂದೆ ಬೌಲರ್ ಗಳ ಪರಿಶ್ರಮ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದೇ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಬಲಗೈ ಆಟಗಾರರು ಎಂದಾಗ ತನ್ನ ನಾಯಕತ್ವದ ಮೂಲಕ ಯುವ ಆಟಗಾರರನ್ನು ಕೊನೆಯ ಕ್ಷಣಗಳಲ್ಲಿಯು ಕೂಡ ನಂಬಿ 1 ಓವರ್ ಬೌಲಿಂಗ್ ಮಾಡದೇ ಇದ್ದರೂ ಕೂಡ 16ನೇ ಓವರ್ನಲ್ಲಿ ನೇರವಾಗಿ ಶಹಬಾಜ್ ಅಹ್ಮದ್ ರವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿ, ತಂಡವನ್ನು ತಮ್ಮ ನಾಯಕತ್ವದ ಮೂಲಕ ಗೆಲ್ಲಿಸಿದ ನಿಜಕ್ಕೂ ಕೊಹ್ಲಿ ಅವರ ನಾಯಕತ್ವಕ್ಕೆ ನಾವೆಲ್ಲರೂ ಸೆಲ್ಯೂಟ್ ಹೇಳಲೇಬೇಕು.