ಕೋರೋನ ನಡುವೆಯೂ ಕೂಡ ಭಾರತೀಯ ಸೇನೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರಷ್ಯಾ. ಸೇನೆಗೆ ಮತ್ತಷ್ಟು ಬಲ.

ಕೋರೋನ ನಡುವೆಯೂ ಕೂಡ ಭಾರತೀಯ ಸೇನೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರಷ್ಯಾ. ಸೇನೆಗೆ ಮತ್ತಷ್ಟು ಬಲ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋನ ಕಾರಣದಿಂದ ಕಳೆದ ವರ್ಷ ಬಹುತೇಕ ಜಗತ್ತು ತನ್ನ ಎಲ್ಲಾ ಕಾರ್ಖಾನೆಗಳನ್ನು ಹಾಗೂ ಉತ್ಪಾದನಾ ಘಟಕಗಳನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಈ ವರ್ಷ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೂಡ ಮುಂಜಾಗ್ರತಾ ಕ್ರಮಗಳು ತೆಗೆದುಕೊಂಡು ಕೆಲವೊಂದು ಉತ್ಪಾದನಾ ಘಟಕಗಳು ಹಾಗೂ ಕಾರ್ಖಾನೆಗಳು ಆರಂಭವಾಗಿವೆ.

ಸಾಮಾನ್ಯ ಸ್ಥಿತಿಗೆ ಮರಳಲು ಇನ್ನು ಹಲವಾರು ತಿಂಗಳುಗಳ ಕಾಲ ಅವಶ್ಯಕತೆ ಇದ್ದು ಎಲ್ಲರಿಗೂ ಸಂಪೂರ್ಣ ವಾಗಿ ವ್ಯಾಕ್ಸೀನ್ ಸಿಕ್ಕ ನಂತರವಷ್ಟೇ ಜಗತ್ತು ಸಾಮಾನ್ಯ ರೀತಿಯಲ್ಲಿ ಕಾಣಸಿಗುತ್ತದೆ. ಆದರೆ ಅದೇ ಸಮಯದಲ್ಲಿ ಜಗತ್ತಿನ ವ್ಯಾಪಾರ ವ್ಯವಹಾರಗಳು ಬಹುತೇಕ ನಿಂತು ಹೋಗಿರುವ ಸಂದರ್ಭದಲ್ಲಿ ರಷ್ಯಾ ದೇಶ ಭಾರತೀಯ ಸೇನೆಗೆ ಸಿಹಿಸುದ್ದಿಯನ್ನು ನೀಡಿ.

ಗಡಿಯಲ್ಲಿ ಬಿಗುವಿನ ವಾತಾವರಣ ಕಡಿಮೆಯಾಗಿದ್ದರೂ ಕೂಡ ಪಕ್ಕದಲ್ಲಿರುವ ನೆರೆಯ ರಾಷ್ಟ್ರಗಳನ್ನು ಯಾವುದೇ ಸಮಯದಲ್ಲಿ ನಾವು ನಂಬಲು ಸಾಧ್ಯವೇ ಇಲ್ಲ. ಅದೇ ಕಾರಣಕ್ಕಾಗಿ ಭಾರತೀಯ ಸೇನೆಗೆ ಅತ್ಯಗತ್ಯವಾಗಿ ಬೇಕಾಗಿರುವಂತಹ ಯಾವುದೇ ವೈಮಾನಿಕ ವಿಮಾನಗಳನ್ನು ಹಾಗೂ ಕ್ಷಿಪಣಿಗಳನ್ನು ಕೂಡ ತಡೆಗಟ್ಟಬಲ್ಲ ವಾಯು ಕ್ಷಿಪಣಿ ರಕ್ಷಣಾ ವ್ಯವಸ್ಥೆ ಯಸ್ 400 ರಕ್ಷಣಾ ವ್ಯವಸ್ಥೆಯನ್ನು ಇದೇ ವರ್ಷದ ನವಂಬರ್ ತಿಂಗಳ ಹೊತ್ತಿಗೆ ಯಾವುದೇ ಕಾರಣಕ್ಕೂ ತಡಮಾಡದೆ ಭಾರತಕ್ಕೆ ತಲುಪಿಸುವುದಾಗಿ ರಷ್ಯಾ ದೇಶ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಮುಂದಿನ ನವಂಬರ್ ತಿಂಗಳಿನಲ್ಲಿ ಯಸ್ 400 ವ್ಯವಸ್ಥೆ ಭಾರತದಲ್ಲಿ ಬಂದಿಳಿಯಲಿವೆ, ಈಗಾಗಲೇ ರಫೆಲ್ ಮೂಲಕ ಆನೆಬಲ ತಂದು ಕೊಂಡಿರುವ ಭಾರತೀಯ ಸೈನಿಕ್ ಯಸ್ 400 ಕ್ಷಿಪಣಿ ವ್ಯವಸ್ಥೆಯು ನಿಜಕ್ಕೂ ಒಂದು ಅದ್ಭುತ ವ್ಯವಸ್ಥೆಯಾಗಿ ಕೆಲಸ ಮಾಡಬಹುದಾಗಿದೆ.