ಚಿಟಿಕೆಯಷ್ಟು ಸುಲಭವಾಗಿ ನಿಮಿಷಗಳಲ್ಲಿ ಸೌತೆಕಾಯಿ ಮಸಾಲ ಪಡ್ಡು ಮನೆಯಲ್ಲಿಯೇ ಮಾಡಿ. ಹೇಗೆ ಗೊತ್ತೇ??

ಚಿಟಿಕೆಯಷ್ಟು ಸುಲಭವಾಗಿ ನಿಮಿಷಗಳಲ್ಲಿ ಸೌತೆಕಾಯಿ ಮಸಾಲ ಪಡ್ಡು ಮನೆಯಲ್ಲಿಯೇ ಮಾಡಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರ್ ಸೌತೆಕಾಯಿ ಮಸಾಲ ಪಡ್ಡು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸೌತೆಕಾಯಿ ಮಸಾಲ ಪಡ್ಡು ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಕಡಲೆ ಬೇಳೆ, 1 ಬಟ್ಟಲು ರವೆ, 2 ಸೌತೆಕಾಯಿ, 4 – 5 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು,ಅರ್ಧ ಬಟ್ಟಲು ಗೋಧಿ ಹಿಟ್ಟು, ಸ್ವಲ್ಪ ಕ್ಯಾರೆಟ್ ತುರಿ, ರುಚಿಗೆ ತಕ್ಕಷ್ಟು ಉಪ್ಪು,1 ಚಮಚ ಅಡುಗೆ ಸೋಡಾ.

ಸೌತೆಕಾಯಿ ಮಸಾಲ ಪಡ್ಡು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚದಷ್ಟು ಸಾಸಿವೆ, 1 ಚಮಚ ಕಡ್ಲೆಬೇಳೆ ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲು ರವೆಯನ್ನು ಹಾಕಿ ಕಡಿಮೆ ಉರಿಯಲ್ಲಿ 3 -4 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಒಂದು ಮಿಕ್ಸಿ ಜಾರಿಗೆ ತುರಿದ ಸೌತೆಕಾಯಿ, 4 – 5 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.

ನಂತರ ಒಂದು ದೊಡ್ಡ ಬಟ್ಟಲಿಗೆ ಫ್ರೈ ಮಾಡಿಕೊಂಡ ಮಿಶ್ರಣ, ಅರ್ಧ ಬಟ್ಟಲು ಗೋಧಿ ಹಿಟ್ಟು, ರುಬ್ಬಿದ ಮಿಶ್ರಣ, ಸ್ವಲ್ಪ ಕ್ಯಾರೆಟ್ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಪ್ಲೇಟ್ ಮುಚ್ಚಿ 10 ನಿಮಿಷಗಳ ಕಾಲ ನೆನೆಯಲು ಬಿಡಿ.ನಂತರ ಒಂದು ಬಾರಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಪಡ್ಡು ತವಾವನ್ನು ಇಟ್ಟು ಎಣ್ಣೆಯನ್ನು ಸವರಿ ಕಾಯಲು ಬಿಡಿ. ಕಾದನಂತರ ಇದಕ್ಕೆ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಅದರ ಮೇಲೆ ಎಣ್ಣೆಯನ್ನು ಹಾಕಿಕೊಂಡು 2 ಬದಿಯಲ್ಲಿ ಬೇಯಿಸಿಕೊಂಡರೆ ದಿಡೀರ್ ಸೌತೆಕಾಯಿ ಮಸಾಲ ಪಡ್ಡು ಸವಿಯಲು ಸಿದ್ಧ.