ಈ ಒಂದು ಬದಲಾವಣೆ ಮಾಡಿದರೇ ಆರ್ಸಿಬಿ ತಂಡ ಕಪ್ ಗೆಲ್ಲುವುದು ಮತ್ತಷ್ಟು ಖಚಿತ ! ಯಾವ ಆಟಗಾರ ಇರಬೇಕು ಯಾರು ಹೋಗಬೇಕು ಗೊತ್ತಾ?

ಈ ಒಂದು ಬದಲಾವಣೆ ಮಾಡಿದರೇ ಆರ್ಸಿಬಿ ತಂಡ ಕಪ್ ಗೆಲ್ಲುವುದು ಮತ್ತಷ್ಟು ಖಚಿತ ! ಯಾವ ಆಟಗಾರ ಇರಬೇಕು ಯಾರು ಹೋಗಬೇಕು ಗೊತ್ತಾ?

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡವು ಟೂರ್ನಿಯನ್ನು ಸತತ ಪಂದ್ಯಗಳನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ, ಈ ಬಾರಿ ಆರ್ಸಿಬಿ ತಂಡದ ಬ್ಯಾಟಿಂಗ್ ಎಂದಿನಂತೆ ಬಲಿಷ್ಠವಾಗಿದ್ದರು ಕೂಡ ಕಳೆದ ಕೆಲವು ಸೀಸನ್ ಗಳಿಗೆ ಹೋಲಿಸಿದರೆ ಬೌಲಿಂಗ್ಗ್ ಬಹಳ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ

ಹೇಳಿಕೊಳ್ಳುವಷ್ಟು ಯಾರು ರಾಂಕಿಂಗ್ ಪಡೆದ ಬೌಲರ್ ಗಳು ಇಲ್ಲದೆ ಇದ್ದರೂ ಕೂಡ ಎದುರಾಳಿ ತಂಡಗಳ ಬಲಿಷ್ಠ ಬ್ಯಾಟ್ಸ್ಮನ್ ಗಳನ್ನು ತಮ್ಮ ವಿವಿಧ ಶೈಲಿಯ ಬಾಲ್ ಗಳ ಮೂಲಕ ಕಟ್ಟಿ ಹಾಕಿ, ಎರಡು ಪಂದ್ಯಗಳನ್ನು ಗೆಲ್ಲಿಸಿ ಕೊಳ್ಳುವುದರಲ್ಲಿ ಆರ್ಸಿಬಿ ತಂಡದ ಬೌಲರ್ ಗಳು ಯಶಸ್ವಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡ ಇನ್ನೇನು ದೊಡ್ಡ ಮೊತ್ತ ಪೇರಿಸಿತು ಎಂಬುವರಲ್ಲಿ ಕೊನೆಯಲ್ಲಿ ಮ್ಯಾಜಿಕ್ ಮಾಡಿದ ಹರ್ಷಲ್ ಪಟೇಲ್ ರವರು ಐದು ವಿಕೆಟ್ ಗಳನ್ನು ಪಡೆದು ಕೊಂಡು ಮುಂಬೈ ತಂಡವನ್ನು ಸಾಧಾರಣ ಮಟ್ಟಕ್ಕೆ ಕಟ್ಟಿ ಹಾಕಿದ್ದರು.

ಇನ್ನು ಎರಡನೇ ಪಂದ್ಯದಲ್ಲಿ ಆರ್ಸಿಬಿ ತಂಡವು 2009 ರ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ 150 ರನ್ ಗಿಂತಲೂ ಕಡಿಮೆ ಇರುವ ಮೊತ್ತದ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ, ಪಂದ್ಯ ಇನ್ನೇನು ಕೈ ಜಾರಿತು ಎನ್ನುವಷ್ಟರಲ್ಲಿ ಶಬ್ಧದ್ ಅಜಮ್ ರವರು ಒಂದೇ ಓವನ್ನಲ್ಲಿ 3 ವಿಕೆಟ್ ಗಳನ್ನು ಪಡೆದು ಕೊಳ್ಳುವ ಮೂಲಕ ಮ್ಯಾಜಿಕ್ ಮಾಡಿ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕೇವಲ ಇವರಷ್ಟೇ ಅಲ್ಲ ಹಲವಾರು ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಆದರೆ ಇದೇ ಸಮಯದಲ್ಲಿ ನಾವು ಬ್ಯಾಟಿಂಗ್ ಲೈನ್ ಅಪ್ ಕುಳಿತು ನೋಡುವುದಾದರೆ, ಮೊದಲ ಪಂದ್ಯದಲ್ಲಿ ಎಬಿಡಿ, ಕೊಹ್ಲಿ ಉತ್ತಮ ಪ್ರದರ್ಶನ ತೋರಿದರು, ಎರಡನೇ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಹೊರತು ಪಡಿಸಿದರೆ ಉಳಿದ ಯಾವ ಆಟಗಾರ ದಿಂದಲೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಕಾಣಲಿಲ್ಲ, ಇಂತಹ ಸಂದರ್ಭದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸಮತೋಲನದಿಂದ ಕೊಡುವಂತೆ ಮಾಡಿದರೇ ಆರ್ಸಿಬಿ ತಂಡ ಈ ಬಾರಿ ಕಪ್ ಗೆಲ್ಲಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ.

ಹೌದು ಸ್ನೇಹಿತರೇ ಮುಂದಿನ ಪಂದ್ಯಗಳಲ್ಲಿ ಭಾರತೀಯ ವೇಗಿ ನವದೀಪ್ ಸೈನಿ ರವರಿಗೆ ಅವಕಾಶ ನೀಡಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ವಿದೇಶಿ ಆಟಗಾರ ಎಂಬ ಒಂದೇ ಒಂದು ಕಾರಣಕ್ಕೆ ಕೆಲ್ ಜೆಮಿಸನ್ ಅವರನ್ನು ಹೊರಗೆ ಕಳುಹಿಸಿ ನ್ಯೂಜಿಲೆಂಡ್ ತಂಡದ ಫಿನ್ ಅಲೆನ್ ರವರನ್ನು ಕರೆದುಕೊಂಡು,

ದೇವದತ್ ಪಡಿಕಲ್ ರವರ ಜೊತೆ ಆರಂಭಿಕರಾಗಿ ಕಣಕ್ಕಿಳಿಸಿದರೆ ಬ್ಯಾಟಿಂಗ್ ವಿಭಾಗ ಮತ್ತು ಬಲಿಷ್ಠವಾಗುತ್ತದೆ ಬೌಲಿಂಗ್ ವಿಭಾಗದಲ್ಲಿ ಜೆಮಿಸನ್ ರವರ ಸ್ಥಾನವನ್ನು ನವದೀಪ್ ಸೈನಿ ರವರು ಖಂಡಿತ ತುಂಬುತ್ತಾರೆ ಈ ಮೂಲಕ ತಂಡ ಮತ್ತಷ್ಟು ಸಮತೋಲನದಿಂದ ಕೂಡಲಿದ್ದು, ಆರ್ಸಿಬಿ ತಂಡ ಕಪ್ ಗೆಲ್ಲಬಹುದಾದ ಸಾಧ್ಯತೆಗಳು ಮತ್ತಷ್ಟು ಹೆಚ್ಚಾ ಗಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ