ಅವಕಾಶ ಸಿಕ್ಕರೇ ಆರ್ಸಿಬಿ ಬಿಡುತ್ತೀರಾ ಎಂದು ಪ್ರಶ್ನೆ ಕೇಳಿದ್ದಕ್ಕೆ ಎಬಿಡಿ ರವರು ಉತ್ತರ ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಎಬಿ ಡಿವಿಲಿಯರ್ಸ್ ರವರು ಸೌತ್ ಆಫ್ರಿಕಾ ತಂಡದ ಆಟಗಾರನಾಗಿದ್ದ ಸಂದರ್ಭಗಳಲ್ಲಿ ಅಂದರೇ ಅವರಿನ್ನು ಆರ್ಸಿಬಿ ತಂಡಕ್ಕೆ ಆಯ್ಕೆ ಆಗದೆ ಇರುವ ಸಂದರ್ಭದಲ್ಲಿ ಭಾರತದಲ್ಲಿ ನಿಜಕ್ಕೂ ಒಂದು ಉತ್ತಮ ಜನಪ್ರಿಯತೆಯನ್ನು ಪಡೆದು ಕೊಂಡಿದ್ದರು, ಆದರೆ ಆರ್ಸಿಬಿ ತಂಡಕ್ಕೆ ಎಬಿ ಡಿವಿಲಿಯರ್ಸ್ ಅವರು ಆಯ್ಕೆಯಾದ ಬಳಿಕ ಆರ್ಸಿಬಿ ತಂಡದ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ರವರನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋದರು ಎಂದರೆ ತಪ್ಪಾಗಲಾರದು.

ಒಂದೆಡೆಗೆ ಎಬಿ ಡಿವಿಲಿಯರ್ಸ್ ಪಂದ್ಯ ಗೆಲ್ಲಿಸಿ ಕೊಡುತ್ತಿರುವಾಗ ಮತ್ತೊಂದೆಡೆ ಆರ್ಸಿಬಿ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿರುವ ರೀತಿಯನ್ನು ನೋಡಿದರೆ ಮನದಲ್ಲಿ ಮೂಡುವ ಫೀಲಿಂಗ್ ಬೇರೆ ಎಲ್ಲಿಯೂ ಸಿಗುವುದಿಲ್ಲ. ಹೀಗೆ ಆರ್ಸಿಬಿ ತಂಡಕ್ಕೆ ಹಾಗೂ ಎಬಿ ಡಿವಿಲಿಯರ್ಸ್ ಸರ್ವರಿಗೂ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಇಂತಹ ಸಂದರ್ಭದಲ್ಲಿ ಇತರ ಆಟಗಾರರಂತೆ ಎಬಿ ಡಿವಿಲಿಯರ್ಸ್ ಅವರು ಕೂಡ ಅವಕಾಶ ಸಿಕ್ಕರೆ ಆರ್ ಸಿ ಬಿ ತಂಡವನ್ನು ಬಿಟ್ಟು ಬೇರೆ ಯಾವ ತಂಡಕ್ಕೆ ಹೋಗಬಹುದು ಎಂಬ ಪ್ರಶ್ನೆಯೂ ಮೂಡುತ್ತದೆ, ಇದರ ಕುರಿತು ಸಂದರ್ಶನದಲ್ಲಿ ಇತ್ತೀಚೆಗೆ ಎಬಿ ಡಿವಿಲಿಯರ್ಸ್ ರವರನ್ನು ಒಂದು ಪ್ರಶ್ನೆ ಕೇಳಲಾಗುತ್ತದೆ.

ನೀವು ಆರ್ಸಿಬಿ ತಂಡದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೀರಾ ಒಂದು ವೇಳೆ ಆರ್ಸಿಬಿ ತಂಡವನ್ನು ಬಿಟ್ಟು ಹೋಗಿ ಇತರ ಐಪಿಎಲ್ ತಂಡಗಳಿಗೆ ಸೇರಿಕೊಳ್ಳಬೇಕು ಎಂದರೇ ನೀವು ಯಾವ ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನೆ ಕೇಳಿದಾಗ ಅವರು ನಾನು ಒಂದು ವೇಳೆ ಐಪಿಎಲ್ ಟೂರ್ನಿ ಯನ್ನು ಆಡುವುದಾದರೇ ಅದು ಕೇವಲ ಆರ್ಸಿಬಿ ತಂಡದಲ್ಲಿ ಮಾತ್ರ. ಮೊದಲು ಈ ಮುನ್ನ ಬೇರೆ ತಂಡದಲ್ಲಿ ಆಟವಾಗಿರಬಹುದು ಆದರೆ ಇನ್ನು ಮುಂದೆ ನನ್ನ ಆಯ್ಕೆ ಕೇವಲ ಆರ್ಸಿಬಿ. ಐಪಿಎಲ್ ನಲ್ಲಿ ಭಾಗವಹಿಸಿದರೇ ಆರ್ಸಿಬಿ ತಂಡದಲ್ಲಿ ಇರುತ್ತೇನೆ ಇಲ್ಲವಾದಲ್ಲಿ ಇಲ್ಲ ಎಂದು ಉತ್ತರ ನೀಡಿದ್ದಾರೆ.

Facebook Comments

Post Author: Ravi Yadav