ಈ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸುವ ಆಟಗಾರನನ್ನು ಹೆಸರಿಸಿದ ಆಕಾಶ ಚೋಪ್ರಾ ! ಯಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಇದೀಗ ಐಪಿಎಲ್ ಟೂರ್ನಿಗೆ ವರ್ಣರಂಜಿತ ಆರಂಭ ಸಿಕ್ಕಿದೆ. ಕೇವಲ ಬೆರಳೆಣಿಕೆಯ ಪಂದ್ಯಗಳು ಮುಗಿದಿದ್ದರೂ ಕೂಡ ಎಲ್ಲಾ ಪಂದ್ಯಗಳು ರೋಚಕ ಘಟ್ಟದ ವರೆಗೂ ತಲುಪಿ ಫಲಿತಾಂಶ ನೀಡಿದ ಕಾರಣ ಐಪಿಎಲ್ ಟೂರ್ನಿ ವಿಶ್ವದಲ್ಲಿಯೇ ಯಾಕೆ ಬೆಸ್ಟ್ ಟೂರ್ನಿ ಎಂಬುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದೆ. ಇನ್ನು ಈಗಾಗಲೇ ಅಂಕಿ ಅಂಶಗಳ ಕುರಿತು ಲೆಕ್ಕಾಚಾರಗಳು ಆರಂಭವಾಗಿದ್ದು, ಯಾವ್ಯಾವ ಆಟಗಾರರು ಎಷ್ಟು ರನ್ ಗಳಿಸಿ ಟಾಪ್ ಸ್ಥಾನದಲ್ಲಿ ನಿಲ್ಲುತ್ತಾರೆ, ಯಾವ ಆಟಗಾರರು ಅತಿಹೆಚ್ಚು ವಿಕೆಟ್ ಪಡೆಯುತ್ತಾರೆ ಎಂಬುದರ ಕುರಿತು ಚರ್ಚೆ ಆರಂಭವಾಗಿದೆ.

ಇದರ ಕುರಿತು ಖ್ಯಾತ ಕ್ರಿಕೆಟ್ ವಿಶ್ಲೇಷಕ ಹಾಗೂ ಮಾಜಿ ಕ್ರಿಕೆಟಿಗ ರಾಗಿರುವ ಆಕಾಶ್ ಚೋಪ್ರಾ ಅವರು ಮಾತನಾಡಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ ಆಟಗಾರ ಅತಿ ಹೆಚ್ಚು ಸಿಕ್ಸರ್ ಗಳನ್ನು ಗಳಿಸುತ್ತಾರೆ ಹಾಗೂ ಯಾವ ಕಾರಣಕ್ಕೆ ಇವರನ್ನು ಆಯ್ಕೆ ಮಾಡುತ್ತಿದ್ದೇನೆ ಎಂಬುದರ ಕುರಿತು ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರು ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಯಾರು ಗಳಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡುವುದಾದರೇ ಅವರು ಮತ್ತ್ಯಾರು ಅಲ್ಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪ್ಯಾಂಟ್ ರವರನ್ನು ಆಯ್ಕೆಯಾಗಿರುತ್ತಾರೆ, ಈಗಾಗಲೇ ರಿಷಬ್ ಪಂತ್ ರವರು ಉತ್ತಮ ಫಾರ್ಮ್ ನಲ್ಲಿದ್ದು, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಕೂಡ ಗಮನೀಯ ಸಾಧನೆ ಮಾಡಿದ್ದಾರೆ. ಆದ ಕಾರಣ ಈ ಬಾರಿಯ ಐಪಿಎಲ್ ನಲ್ಲಿ ಖಂಡಿತ ಅವರು ಹೆಚ್ಚು ಸಿಕ್ಸರ್ ಗಳನ್ನು ಗಳಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Post Author: Ravi Yadav