ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಉತ್ತರಾಖಂಡ್ ಸಿಎಂ, ಕರ್ನಾಟಕದಲ್ಲೂ ಹೀಗೆ ಹಾಗಬೇಕು ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಹಲವಾರು ವರ್ಷಗಳಿಂದ ಭಾರತ ದೇಶದ ವಿವಿಧ ಸರ್ಕಾರಗಳು ದೇವಸ್ಥಾನದ ಕುರಿತು ತೆಗೆದು ಕೊಂಡಿರುವ ನಿರ್ಧಾರಗಳು ಹಲವಾರು ವಿವಾದಗಳನ್ನು ಸೃಷ್ಟಿಸಿವೆ, ಅದರಲ್ಲಿಯೂ ದೇವಸ್ಥಾನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ದೇವಾಲಯದ ಸಂಪೂರ್ಣ ಆರ್ಥಿಕತೆಯನ್ನು ನಿಯಂತ್ರಣ ಮಾಡುತ್ತಾ, ಮಸೀದಿ ಹಾಗೂ ಚರ್ಚೆಗಳನ್ನು ಈ ಕಾನೂನಿಗೆ ಅನ್ವಯ ಮಾಡದೆ ಇರುವ ಕಾರಣ ದೇಶದಲ್ಲಿ ಕುರಿತು ಸದಾ ಚರ್ಚೆ ನಡೆಯುತ್ತಿರುತ್ತದೆ.

ದೇವಾಲಯಗಳಂತೆ ಚರ್ಚ್ ಹಾಗೂ ಮಸೀದಿಗಳ ನ್ನು ಕೂಡ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಿ ಅಥವಾ ದೇವಾಲಯಗಳನ್ನು ಕೂಡ ದೇವಾಲಯದ ಆಡಳಿತ ಮಂಡಳಿಗೆ ಬಿಟ್ಟುಕೊಡಿ ಎಂಬ ಮಾತುಗಳು ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ, ಆದರೆ ಯಾವುದೇ ರಾಜಕೀಯ ಪಕ್ಷ ಈ ಕುರಿತು ಕಠಿಣ ನಿರ್ಧಾರವನ್ನು ತೆಗೆದು ಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ.

ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಉತ್ತರಾಖಂಡ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ರವರು ಕಳೆದ ಶುಕ್ರವಾರ ಹೊಸ ಆದೇಶವನ್ನು ಹೊರಡಿಸಿದ್ದು, ಹರಿದ್ವಾರ ಹಾಗೂ ಬದ್ರಿನಾಥ ದೇವಾಲಯ ಸೇರಿದಂತೆ 51 ದೇವಾಲಯಗಳನ್ನು ರಾಜ್ಯ ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ಮತ್ತಷ್ಟು ಬಲ ಬಂದಂತಾಗಿತ್ತು, ಇದೇ ನಿರ್ಧಾರವನ್ನು ಕರ್ನಾಟಕದಲ್ಲಿ ಕೂಡ ತೆಗೆದುಕೊಳ್ಳಬೇಕು ಎಂಬ ಮನವಿಗಳು ಹಾಗೂ ಬೇಡಿಕೆಗಳು ಕೇಳಿಬಂದಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Post Author: Ravi Yadav