ಪ್ರಮುಖ ಸಮಯದಲ್ಲಿ ಮಮತಾ ಬ್ಯಾನರ್ಜಿ ರವರಿಗೆ ಬಿಗ್ ಶಾಕ್ ನೀಡಿದ ಚುನಾವಣಾ ಆಯೋಗ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪಕ್ಷಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಪಕ್ಷದ ನಡುವೆ ನೇರ ಹಣಾಹಣಿ ನಡೆಯುತ್ತಿದೆ, ಬಹುತೇಕ ಚುನಾವಣಾ ಪೂರ್ವ ಫಲಿತಾಂಶಗಳು ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂದು ಹೇಳುತ್ತಿದ್ದರೂ ಕೂಡ, ಮಮತಾ ಬ್ಯಾನರ್ಜಿ ರವರು ಬಿಜೆಪಿ ಪಕ್ಷವನ್ನು ಪಶ್ಚಿಮ ಬಂಗಾಳದಲ್ಲಿ ನೆಲೆಯೂರಲು ಬಿಡುವುದಿಲ್ಲ ಎಂಬ ಭರವಸೆಯೊಂದಿಗೆ ವಿರೋಧ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಇವೆ. ಎರಡು ಪಕ್ಷಗಳು ಗೆಲ್ಲುತ್ತೇವೆ ಎಂದು ಹೇಳುತ್ತಿವೆ, ಆದರೆ ಮತದಾರರ ಬೆರಳಿನಲ್ಲಿ ಪಕ್ಷಿಮ ಬಂಗಾಳದ ಭವಿಷ್ಯ ಅಡಗಿದ್ದು, ಅವರು ಯಾರಿಗೆ ಆಶೀರ್ವಾದ ನೀಡುತ್ತಾರೆ ಎಂಬುದು ಯಾರಿಗೂ ಹೇಳಲು ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಶತಾಯಗತಾಯ ಸೋಲಿಸಲು ಮಮತಾ ಬ್ಯಾನರ್ಜಿಯವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ, ಬಿಜೆಪಿ ಪಕ್ಷ ಕೂಡ ಸಾಕಷ್ಟು ತಂತ್ರಗಳನ್ನು ಕೂಡಿದ್ದು, ಸ್ವತಹ ದೇಶದ ಗೃಹ ಮಂತ್ರಿ ಗಳಾದ ಅಮಿತ್ ಶಾ ರವರು ಪಶ್ಚಿಮ ಬಂಗಾಳದಲ್ಲಿ ಕೇವಲ ರ್ಯಾಲಿಗಳಲ್ಲಿ ಮಾತ್ರ ಪಾಲ್ಗೊಳ್ಳದೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ ಎಂದರೆ ಚುನಾವಣೆಗೆ ಎಷ್ಟು ಕಾವು ಮೂಡಿಸಿರಬಹುದು ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ.

ಇನ್ನು ಹೀಗೆ ಚುನಾವಣಾ ಕಾವು ಏರಿರುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರಿಗೆ ಚುನಾವಣಾ ಆಯೋಗ ಅತಿ ದೊಡ್ಡ ಶಾಕ್ ನೀಡಿದೆ, ಪ್ರತಿ ನಿಮಿಷಗಳು ಪ್ರಮುಖ ಪ್ರಭಾವ ಬೀರುವ ಸಂದರ್ಭದಲ್ಲಿ ಮುಸ್ಲಿಮರನ್ನು ನೇರವಾಗಿ ಪ್ರತಿಯೊಬ್ಬ ಮುಸ್ಲಿಮರು ನಮಗೆ ಮತ ನೀಡಬೇಕು, ಹಾಗೂ ಭದ್ರತಾ ಸಿಬ್ಬಂದಿ ನಿಮಗೆ ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಹೇಳಬಹುದು ಆದರೆ ಎಲ್ಲರಿಗೂ ಘೇರಾವ ಹಾಕಿ ಮಹಿಳೆಯರಿಗೆ ಕರೆ ನೀಡಿದ್ದು ಮಮತಾ ಬ್ಯಾನರ್ಜಿ ಅವರಿಗೆ ಮುಳುವಾಗಿದೆ, ಅಲ್ಪಸಂಖ್ಯಾತ ಸಹೋದರ-ಸಹೋದರಿಯರು ನಮಗೆ ಮತ ನೀಡಬೇಕು ಎಂಬ ಹೇಳಿಕೆ ಚುನಾವಣಾ ನಿಯಮದ ಪ್ರಕಾರ ಉಲ್ಲಂಘನೆಯಾಗಿದ್ದು, 24 ಗಂಟೆಗಳ ಕಾಲ ಯಾವುದೇ ಪ್ರಚಾರ ಮಾಡಬಾರದು ಎಂಬ ಕಠಿಣ ನಿರ್ಧಾರವನ್ನು ಚುನಾವಣಾ ಆಯೋಗ ಕೈಗೊಂಡಿದೆ.

Post Author: Ravi Yadav