ಕೊನೆಗೂ ಲಾಕ್ಡೌನ್ ಕುರಿತು ಅಧಿಕೃತ ಮಾಹಿತಿ ಹೊರಹಾಕಿದ ಯಡಿಯೂರಪ್ಪ ! ಆಗುತ್ತಾ ಲಾಕ್ ಡೌನ್??

ಕೊನೆಗೂ ಲಾಕ್ಡೌನ್ ಕುರಿತು ಅಧಿಕೃತ ಮಾಹಿತಿ ಹೊರಹಾಕಿದ ಯಡಿಯೂರಪ್ಪ ! ಆಗುತ್ತಾ ಲಾಕ್ ಡೌನ್??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಮೊದಲ ಅಲೆ ಗಿಂತ ಹೆಚ್ಚಿನ ವೇಗದಲ್ಲಿ ಹರಡುತ್ತಿರುವ ಕಾರಣ ಹೊರ ಬರುತ್ತಿರುವ ಪ್ರಕರಣಗಳ ಅಂಕಿ ಅಂಶಗಳು ನಿಜಕ್ಕೂ ಒಳ್ಳೆಯದಲ್ಲ ಎಂಬ ಭಾವನೆ ಮೂಡಿಸುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಯಾವುದೇ ಕೋರೋನ ಆಲೋಚನೆ ಇಲ್ಲದೆ ಸುಖವಾದ ಜೀವನ ನಡೆಸುತ್ತಿರುವ ಹಳ್ಳಿಯ ಜನರಿಗೆ ಕೋರೋಣ ತಲುಪುವ ಸಾಧ್ಯತೆ ಹೆಚ್ಚಾಗಿದೆ.

ಯಾಕೆಂದರೆ ಸಾಮಾನ್ಯವಾಗಿ ಯುಗಾದಿ ಹಬ್ಬಕ್ಕೆ ಪ್ರತಿಯೊಬ್ಬರು ತಮ್ಮ ಹುಟ್ಟಿದ ಊರುಗಳಿಗೆ ಹೋಗಿ ಹಬ್ಬ ಆಚರಣೆ ಮಾಡುತ್ತಾರೆ, ಇಂತಹ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ಜನರು ತೆರಳಿದರೇ ಹಳ್ಳಿಯ ಜನರಿಗೂ ಕೂಡ ಕೋರೋಣ ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಹಳ್ಳಿಯ ಜನರಿಗೆ ರೋಗ ನಿರೋಧಕ ಶಕ್ತಿ ಚೆನ್ನಾಗಿರುವ ಕಾರಣ ಬಹುತೇಕರಿಗೆ ಕೊನೆಯವರೆಗೂ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ, ಇಂತಹ ಸಂದರ್ಭದಲ್ಲಿ ಹಳ್ಳಿಗಳಿಗೆ ಕೋರೋಣ ಹರಡಿದರೇ ನಿಯಂತ್ರಣ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ, ಅಷ್ಟೇ ಅಲ್ಲದೆ ಮೂಲೆ ಮೂಲೆಗೂ ಕೂಡ ಆರೋಗ್ಯ ಸೌಲಭ್ಯಗಳನ್ನು ತಲುಪಿಸುವಂತಹ ಮೂಲ ವ್ಯವಸ್ಥೆ ನಮ್ಮಲ್ಲಿಲ್ಲ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು.

ಇಂತಹ ಸಂದರ್ಭದಲ್ಲಿ ಕೋರೋಣ ಅಲೆ ಹೆಚ್ಚಾಗುತ್ತಿರುವ ಕಾರಣ ರಾಜ್ಯದಲ್ಲಿ ಮತ್ತೊಮ್ಮೆ ನಿರ್ದಿಷ್ಟ ಪ್ರದೇಶಗಳನ್ನು ಲಾಕ್ಡೌನ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಈ ಕುರಿತು ಇದೀಗ ಅಧಿಕೃತ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ಕೊರೊನ ಅಲೆ ಮಿತಿಮೀರುತ್ತಿದೆ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನ ಅಲೆಯನ್ನು ತಡೆಯದೆ ಇದ್ದರೇ, ಆರ್ಥಿಕ ವ್ಯವಸ್ಥೆ ಕುರಿತು ಆಲೋಚನೆ ಮಾಡಲು ಸಾಧ್ಯವಾಗುವುದಿಲ್ಲ, ಜನರು ಇದ್ದರೆ ಮಾತ್ರ ಆರ್ಥಿಕತೆಯ ಕುರಿತು ನಾವು ಆಲೋಚನೆ ನಡೆಸಬಹುದು, ಆದ ಕಾರಣ ಆರ್ಥಿಕ ವ್ಯವಸ್ಥೆಯ ಕುರಿತು ಆಲೋಚನೆ ಮಾಡದೆ ಲಾಕ್ ಡೌನ್ ವ್ಯವಸ್ಥೆ ಜಾರಿ ಮಾಡಬೇಕಾಗುತ್ತದೆ ಎಲ್ಲರೂ ದಯವಿಟ್ಟು ಮಾಸ್ಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೀ ಕೊರೊನ ತಡೆಗಟ್ಟಿ, ಲಾಕ್ ಡೌನ್ ನಮಗೂ ಇಷ್ಟವಿಲ್ಲ ಆದರೆ ಅಗತ್ಯತೆ ಬಂದರೆ ಖಂಡಿತ ಜಾರಿ ಆಗುತ್ತದೆ ಎಂದಿದ್ದಾರೆ.