ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡದ ಬ್ರಾಂಡ್ ಮೌಲ್ಯ ಎಷ್ಟು ಕೋಟಿ ಗೊತ್ತಾ?? ಕಪ್ ಗೆಲ್ಲದಿದ್ದರೂ ಇದು ಆರ್ಸಿಬಿ ಗತ್ತು.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ 10 ಹೆಚ್ಚು ಮನರಂಜನೆ ನೀಡುವ ತಂಡ ಎಂದೇ ಖ್ಯಾತಿ ಪಡೆದು ಕೊಂಡಿದೆ, ಕೇವಲ ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳಲ್ಲಿಯೂ ಕೂಡ ಆರ್ಸಿಬಿ ತಂಡಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ನೀವು ಕಾಣಬಹುದು. ಇಲ್ಲಿಯವರೆಗೂ ಕಪ್ ಗೆಲ್ಲದಿದ್ದರೂ ಕೂಡ ಆರ್ಸಿಬಿ ತಂಡವನ್ನು ಅಭಿಮಾನಿಗಳು ಇಲ್ಲಿಯವರೆಗೂ ಒಮ್ಮೆ ಕೂಡ ಬಿಟ್ಟು ಕೊಟ್ಟಿಲ್ಲ ಎಂಬುದು ಮತ್ತಷ್ಟು ವಿಶೇಷ.

ಅದರಲ್ಲಿಯೂ ವಿಶೇಷತೆಯೇನು ಎಂದರೆ ಆರ್ಸಿಬಿ ತಂಡ ಪ್ಲೇ ಆಫ್ ತಲುಪದೆ ಹೋದರು ಕೂಡ ಅಥವಾ ಫೈನಲ್ ತಲುಪದೆ ಹೋದರೂ ಕೂಡ ಫೈನಲ್ ಪಂದ್ಯದಲ್ಲಿ ಯಾವುದೇ ತಂಡಗಳು ಆಟವಾಡುತ್ತಿದ್ದರೂ ಕೂಡ ಅಲ್ಲಿ ಕೇಳಿ ಬರುವ ಘೋಷಣೆ ಬಹುತೇಕ ಆರ್ಸಿಬಿ ಅಭಿಮಾನಿಗಳದ್ದು.

ಇನ್ನು ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಆರ್ಸಿಬಿ ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟು ಎಂಬುದನ್ನು ನಾವು ನೋಡುವುದಾದರೆ ಸ್ನೇಹಿತರೇ ಕೋರೋನ ಕಾರಣದಿಂದ ಬ್ರಾಂಡ್ ವ್ಯಾಲ್ಯೂ ಕಡಿಮೆ ಆಗಿದೆ ಆದರೂ ಕೂಡ ಆರ್ಸಿಬಿ ತಂಡದ ಬ್ರಾಂಡ್ ಮೌಲ್ಯ ಬರೋಬ್ಬರಿ 536 ಕೋಟಿ. ಕಪ್ ಗೆಲ್ಲದೆ ಇದ್ದರೂ ಕೂಡ ಬ್ರಾಂಡ್ ಮೌಲ್ಯಗಳ ಲಿಸ್ಟಿನಲ್ಲಿ ಆರ್ಸಿಬಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಪ್ ಗೆದ್ದಿರುವ ತಂಡಗಳು ಕೂಡ ಈ ಸಾಲಿನಲ್ಲಿ ಆರ್ಸಿಬಿ ತಂಡಕ್ಕಿಂತ ಕೆಳಗಿನ ಸ್ಥಾನ ಪಡೆದುಕೊಂಡಿವೆ.

Get real time updates directly on you device, subscribe now.