ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೋತರು ಸೊಕ್ಕು ಬಿಡದ ಮುಂಬೈ, ಆರ್ಸಿಬಿ ಹಾಗೂ ಕೊಹ್ಲಿಗೆ ಟಾಂಗ್ ನೀಡಿದ ರೋಹಿತ್ ಶರ್ಮಾ, ನಡೆದದ್ದೇನು ಗೊತ್ತಾ??

0

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಆರ್ಸಿಬಿ ತಂಡ ಐಪಿಎಲ್ ಟೂರ್ನಿ ಯನ್ನು ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇದುವರೆಗೂ ಭಾಗವಹಿಸಿದ ಯಾವುದೇ ಪಂದ್ಯವನ್ನು ಆರ್ಸಿಬಿ ತಂಡ ಗೆದ್ದಿರಲಿಲ್ಲ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಉದ್ಘಾಟನಾ ಪಂದ್ಯದಲ್ಲಿ ಜಯಿಸುವ ಮೂಲಕ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದೆ.

ಇನ್ನು ಫೀಲ್ಡಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಕೂಡ ಬೌಲಿಂಗ್ ಹಾಗೂ ಉತ್ತಮ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ಆರ್ಸಿಬಿ ತಂಡ ಗೆಲುವು ಖಂಡಿತ ಎಂಬುವುದರಲ್ಲಿ ಎರಡು ಮಾತಿಲ್ಲ. ಅದೇ ಸಮಯದಲ್ಲಿ ಬಹಳ ಅದ್ಭುತವಾಗಿ ಬ್ಯಾಟಿಂಗ್ ಆರಂಭಿಸಿ ಕೊನೆಯ ಓವರ್ ಗಳಲ್ಲಿ ಹಾದಿ ತಪ್ಪಿದ ಮುಂಬೈ ಇಂಡಿಯನ್ಸ್ ತಂಡ ಸೋತರೂ ಕೂಡ ಸುಕ್ಕು ಬಿಡದೆ ಪರೋಕ್ಷವಾಗಿ ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ತಂಡಕ್ಕೆ ನೇರವಾಗಿ ಟಾಂಗ್ ನೀಡಿದ್ದಾರೆ.

ಹೌದು ಸ್ನೇಹಿತರೇ ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ ಶರ್ಮ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ ಅವೆಲ್ಲ ನಮಗೆ ತಿಳಿಯದೆ ನಡೆದಿವೆ. ನಾವು ಖಂಡಿತ ಮುಂದೆ ಹೋಗುತ್ತೇವೆ ಆದರೆ, ಟೂರ್ನಿಯ ಆರಂಭದ ಪಂದ್ಯವನ್ನು ಗೆಲ್ಲುವುದಕ್ಕಿಂತ ಹೆಚ್ಚು ಟೂರ್ನಿಯನ್ನು ಗೆಲ್ಲುವುದು ಮುಖ್ಯವಾಗುತ್ತದೆ ಎಂದು ನಕ್ಕು ಹೇಳಿಕೆ ನೀಡಿದ್ದಾರೆ. ಇದು ಪರೋಕ್ಷವಾಗಿ ಕೊಹ್ಲಿ ರವರು ಮೊದಲ ಪಂದ್ಯ ಗೆದ್ದಿರಬಹುದು ಆದರೆ ಕಪ್ ಗೆದ್ದಿಲ್ಲ ಎಂಬ ಸಂದೇಶ ಸಾರಿದಂತೆ ಇತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟು ಗರಮ್ ಆಗಿದ್ದಾರೆ. ಆದರೆ ಒಂದು ಹೇಳಬೇಕು ಎಂದರೇ, ನೀವು ಇಲ್ಲಿ ಎಷ್ಟೇ ಟ್ರೋಫಿ ಗೆದ್ದಿದ್ದರೂ ಕೂಡ ಇಂಡಿಯಾ ಕ್ರಿಕೆಟ್ ಟೀಮ್ ಗೆ ಹೋದಾಗ ಕೊಹ್ಲಿ ಹೇಳಿದ ಕಡೆಗೆ ಫೀಲ್ಡಿಂಗ್ ಮಾಡಬೇಕು ಎಂಬುದನ್ನು ಮರೆಯಬೇಡಿ ರೋಹಿತ್ ಶರ್ಮಾ ರವರೆ ಎಂದು ಆರ್ಸಿಬಿ ಅಭಿಮಾನಿಗಳು ಉತ್ತರ ನೀಡಿದ್ದಾರೆ.