ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದೇವದತ್ ಪಡಿಕಲ್ ವಿಚಾರವಾಗಿ ಅಸಮಾಧಾನ ಹೊರಹಾಕಿದ ಇತರ 7 ತಂಡಗಳು ! ದಾದಾ ಮಾತಿನಿಂದ ಗಪ್-ಚುಪ್

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡ ಮುಂಬೈ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿತು, ಎಬಿ ಡಿವಿಲಿಯರ್ಸ್, ಮ್ಯಾಕ್ಸ್ವೆಲ್ ಹಾಗೂ ಕಿಂಗ್ ಕೊಹ್ಲಿ ರವರು ಮೂವತ್ತಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವುದರಲ್ಲಿ ಯಶಸ್ವಿಯಾದರು. ಕೊನೆಯವರೆಗೂ ಸ್ಕ್ರೀಸ್ ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಎಬಿ ಡಿವಿಲಿಯರ್ಸ್ ರವರು ತಂಡದ ಗೆಲುವಿಗೆ ಪ್ರಮುಖ ಕಾರಣವಾದರು.

ಹೀಗೆ ಬ್ಯಾಟಿಂಗ್ ಲೈನ್ ಬಹಳ ಅತ್ಯುತ್ತಮವಾಗಿ ಮೂಡಿ ಬಂದಿತ್ತಾದರೂ, ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದ ದೇವದತ್ ಪಡಿಕಲ್ ರವರ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು, ವಾಷಿಂಗ್ಟನ್ ಸುಂದರ್ ರವರ ಬಗ್ಗೆ ನಾವು ಏನು ಮಾತನಾಡಲು ಸಾಧ್ಯವಿಲ್ಲ, ಯಾಕೆಂದರೆ ಅವರು ಆರಂಭಿಕರಾಗಿ ಕಣಕ್ಕಿಳಿಯುವ ಆಟಗಾರ ಅಲ್ಲ, ಆದ ಕಾರಣ ಅವರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಇಂತಹ ಸಂದರ್ಭದಲ್ಲಿ ದೇವದತ್ತ ಪಡಿಕಲ್ ರವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳದ ಆರ್ಸಿಬಿ ಅಭಿಮಾನಿ ಇಲ್ಲವೇ ಇಲ್ಲ.

ಆದ ಕಾರಣ ದೇವದತ್ ಪಡಿಕಲ್ ರವರು ಯಾವಾಗ ತಂಡಕ್ಕೆ ವಾಪಸ್ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ, ಮೂಲಗಳ ಪ್ರಕಾರ ಮುಂದಿನ ಪಂದ್ಯ ಅಥವಾ ಹೆಚ್ಚೆಂದರೆ ಇನ್ನೆರಡು ಪಂದ್ಯಗಳಲ್ಲಿ ಖಂಡಿತವಾಗಲೂ ದೇವದತ್ ಪಡಿಕಲ್ ರವರು ಕಣಕ್ಕೆ ಇಳಿಯುವುದು ಖಚಿತವಾಗಿದೆ. ಆದರೆ ಇದು ಇತರ ತಂಡಗಳ ಕಣ್ಣು ಕೆಂಪಾಗಿಸಿದೆ ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಇತರ ಏಳು ತಂಡಗಳು ಕೂಡ ದೇವದತ್ತ ಪಡಿಕಲ್ ರವರ ಮೇಲೆ ಕೆಂಗಣ್ಣು ಬೀಳಲು ಕಾರಣವಾದರೂ ಏನು ಹಾಗೂ ನಡೆಯುತ್ತಿರುವ ಘಟನೆಗಳು ಬಗ್ಗೆ ಸೌರವ್ ಗಂಗೂಲಿ ರವರ ಮಾತಿನಿಂದ ಇತರ ತಂಡಗಳು ಸೈಲೆಂಟಾಗಿದ್ದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ದೇವದತ್ ಪಡಿಕಲ್ ರವರು ಕೊರೋನಾ ಪಾಸಿಟಿವ್ ರಿಪೋರ್ಟನ್ನು ಪಡೆದು ಕೊಂಡಿದ್ದರು, ಆದ ಕಾರಣ ದೇವದತ್ ಪಡಿಕಲ್ ರವರು ಪಂದ್ಯಗಳನ್ನು ಆಡಲು ಚೆನ್ನೈ ನಗರಕ್ಕೆ ತೆರಳಿರಲಿಲ್ಲ, ಬದಲಾಗಿ ಬೆಂಗಳೂರಿನಲ್ಲಿ ಉಳಿದು ಕೊಂಡು ಚಿಕಿತ್ಸೆ ಪಡೆಯಲು ಆರಂಭಿಸಿದರು, ಅದೇ ಸಮಯದಲ್ಲಿ ಅಭ್ಯಾಸದಲ್ಲಿ ಕೂಡ ನಿರತವಾಗಿದ್ದರು ಎಂಬುದನ್ನು ನಾವು ಕಾಣಬಹುದು.

ಕೊನೆಗೆ ಕಳೆದ ಕೆಲವು ದಿನಗಳ ಹಿಂದೆ 3 ಬಾರಿ ಕೊರೋನಾ ಟೆಸ್ಟ್ ಮಾಡಿದಾಗ ಮೂರು ದಿನವೂ ಕೂಡ ದೇವದತ್ ಪಡಿಕಲ್ ರಾವರಿ ಕೊರೋಣ ಇಲ್ಲ ಎಂಬುದು ದೃಢಪಟ್ಟಿದೆ, ಇದಾದ ಬಳಿಕ ಏಳು ದಿನಗಳ ಕಾಲ ಕ್ವಾರಂಟೈನ್ ಟೈಮ್ ನಲ್ಲಿ ಇದ್ದ ದೇವದತ್ ಪಡಿಕಲ್ ರವರು ಇದೀಗ ಚೆನ್ನೈ ನಗರಕ್ಕೆ ಹೋಗಿ ತಂಡ ಸೇರಿ ಕೊಂಡಿದ್ದಾರೆ. ಆದರೆ ಇತರ ಫ್ರಾಂಚೈಸಿಗಳು ಹೇಳುವಂತೆ ಚೆನ್ನೈ ನಗರಕ್ಕೆ ಬಂದಾಗ ಏಳು ದಿನಗಳ ಕಾಲ ವಾಲೆಂಟೈನ್ ಇರುವುದು ಕಡ್ಡಾಯವಾಗುತ್ತದೆ.

ಆದರೆ ಬೆಂಗಳೂರಿನಲ್ಲಿ ಕ್ವಾರಂಟೈನ್ ಮುಗಿಸಿದ ಕಾರಣ ದೇವದತ್ ಪಡಿಕಲ್ ರವರು ನೇರವಾಗಿ ಚೆನ್ನೈಗೆ ತಲುಪಿ ಬಯೋ ಬಬಲ್ ಸೇರಿಕೊಂಡಿದ್ದಾರೆ, ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ನಾವು ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದ್ದೇವೆ ಎಂಬುದನ್ನು ಖಚಿತ ಪಡಿಸಿದ್ದರೂ ಕೂಡ ಇತರ ಪ್ರಾಂಚೈಸಿಗಳು ಈ ಕುರಿತು ತಗಾದೆ ತೆಗೆದಿದ್ದವು, ಆದರೆ ಈತರ ಕುರಿತು ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರವರು ಈ ರೀತಿಯ ದೂರುಗಳನ್ನು ನನ್ನ ಬಳಿಗೆ ತೆಗೆದುಕೊಂಡು ಬರುವುದು ಸಮಂಜಸವಲ್ಲ, ಪ್ರತಿಯೊಂದು ನಿಯಮಗಳನ್ನು ನೋಡಿ ಆತನನ್ನು ಒಳಗೆ ಕರೆದುಕೊಂಡು ಇರಲಾಗುತ್ತದೆ ಇದರ ಕುರಿತು ಹೆಚ್ಚಿನ ಮಾತುಗಳು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

Get real time updates directly on you device, subscribe now.