ವಾಷಿಂಗ್ಟನ್ ಸುಂದರ್ ರವರ ಮನೆಯ ಹೊಸ ನಾಯಿಯ ಹೆಸರೇನು ಗೊತ್ತಾ?? ಆಸ್ಟ್ರೇಲಿಯಾ ರವರಿಗೆ ಉರ್ಸೋದು ಅಂದರೆ ಇದೇನಾ,

ವಾಷಿಂಗ್ಟನ್ ಸುಂದರ್ ರವರ ಮನೆಯ ಹೊಸ ನಾಯಿಯ ಹೆಸರೇನು ಗೊತ್ತಾ?? ಆಸ್ಟ್ರೇಲಿಯಾ ರವರಿಗೆ ಉರ್ಸೋದು ಅಂದರೆ ಇದೇನಾ,

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳ ನಡುವೆ ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ನಡೆದ ಸರಣಿ ಭಾರಿ ಕುತೂಹಲ ಮೂಡಿಸಿತ್ತು, ವಿರಾಟ್ ಕೊಹ್ಲಿ ರವರು ಪಿತೃತ್ವದ ರಜೆಗಾಗಿ ಭಾರತದ ಕಡೆ ಬಂದಾಗ ಆಸ್ಟ್ರೇಲಿಯಾ ದೇಶದಲ್ಲಿ ಅಜಿಂಖ್ಯ ರಹನೆ ಅವರು ತಂಡವನ್ನು ಮುನ್ನಡೆಸಿದ್ದರು, ಕೊನೆಯ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯಾ ರಹಾನೆ ರವರು ಉತ್ತಮವಾದ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬಹುತೇಕ ಆಟಗಾರರು ಆಸ್ಟ್ರೇಲಿಯಾ ದೇಶದ ವೇಗದ ಪಿಚ್ ಗಳಲ್ಲಿ ಇಂಜುರಿ ಸಮಸ್ಯೆಗೆ ಒಳಗಾಗಿ, ತಂಡದಿಂದ ದೂರ ಉಳಿದಿದ್ದರು. ಆಗ ಹಲವಾರು ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು, ಯುವ ಆಟಗಾರರ ಕೈಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಯುವಕರು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಣ್ಣು ಮುಕ್ಕಿಸುವ ದರಲ್ಲಿ ಯಶಸ್ವಿಯಾಗಿದ್ದರು, ತಮಗೆ ಸಿಕ್ಕ ಅವಕಾಶಗಳನ್ನು ಯುವಕರು ಬಾಚಿಕೊಂಡಿದ್ದರು. ಅದರಲ್ಲಿಯೂ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಹಲವಾರು ವರ್ಷಗಳ ಕಾಲ ಸೋಲನ್ನು ಕಾಣದೆ ಇರುವ ಗಬ್ಬ ಕ್ರೀಡಾಂಗಣದಲ್ಲಿ ಕೂಡ ಆಸ್ಟ್ರೇಲಿಯಾ ದೇಶಕ್ಕೆ ಸೋಲಿನ ರುಚಿ ತೋರಿಸಲಾಗಿತ್ತು,

ಇದರಿಂದ ಆಸ್ಟ್ರೇಲಿಯಾ ದೇಶಕ್ಕೆ ಭಾರಿ ಮೋಜುಗಾರ ಉಂಟಾಗಿದ್ದು ಸುಳ್ಳಲ್ಲ ಯಾಕೆಂದರೆ ಪಂದ್ಯಕ್ಕೆ ಮುನ್ನ ಯುವ ಆಟಗಾರರನ್ನು ಕೆಣಕಬೇಕು ಎಂಬ ಉದ್ದೇಶದಿಂದ ಗಬ್ಬ ಕ್ರೀಡಾಂಗಣದಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು ಆದರೆ ಆಸ್ಟ್ರೇಲಿಯ ದೇಶದ ಭದ್ರಕೋಟೆಯಲ್ಲಿ ಯುವ ಆಟಗಾರರು ಸೋಲಿನ ರುಚಿ ತೋರಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಆಸ್ಟ್ರೇಲಿಯಾ ದೇಶಕ್ಕೆ ಗರ್ವಭಂಗ ನಡೆದಿತ್ತು.

ಈಗ್ಯಾಕೆ ಈ ವಿಷಯ ಎಂದು ಕೊಂಡೀರಾ, ವಾಷಿಂಗ್ಟನ್ ಸುಂದರ್ ಅವರ ಮನೆಗೆ ಹೊಸ ಅತಿಥಿ ಒಂದು ಆಗಮಿಸಿದ್ದು ಪುಟ್ಟ ನಾಯಿಮರಿಗೆ ವಾಷಿಂಗ್ಟನ್ ಸುಂದರ ರವರು ಗಬ್ಬ ಕ್ರೀಡಾಂಗಣದ ಹೆಸರನ್ನು ನಾಯಿಮರಿಗೆ ನಾಮಕರಣ ಮಾಡಿದ್ದಾರೆ. ಮೊದಲೇ ತಮ್ಮ ಭದ್ರಕೋಟೆ ಎಂದುಕೊಂಡಿದ್ದ ಕ್ರೀಡಾಂಗಣದಲ್ಲಿ ಸೋಲಿನ ರುಚಿಯನ್ನು ಕಂಡು ಮುಜುಗರಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಅದೇ ಕ್ರೀಡಾಂಗಣದ ಹೆಸರನ್ನು ನಾಯಿಮರಿಗೆ ಇಡುವ ಮೂಲಕ ಮತ್ತೊಮ್ಮೆ ವಾಷಿಂಗ್ಟನ್ ಸುಂದರ್ ಅವರು ಆಸ್ಟ್ರೇಲಿಯಾ ತಂಡವನ್ನು ಸರಿಯಾಗಿ ಟ್ರೋಲ್ ಮಾಡಿದ್ದಾರೆ.