ಅತಿ ಸುಲಭವಾಗಿ ಮಸಾಲಾ ಬಾತ್ ಮಾಡುವುದು ಹೇಗೆ ಗೊತ್ತೇ, ಎಲ್ಲರೂ ಇಷ್ಟ ಪಡ್ತಾರೆ. ಬ್ಯಾಚಲರ್ಸ್ ನೋಡ್ರಪ್ಪಾ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಸಾಲ ಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕೊನೆಯಲ್ಲಿ ಯೌಟ್ಯೂಬ್ ವಿಡಿಯೋ ಹಾಕಲಾಗಿದ್ದು, ಒಮ್ಮೆ ಸಂಪೂರ್ಣ ನೋಡಿ ಟ್ರೈ ಮಾಡಿ. ಮಸಾಲಾ ಬಾತ್ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ, 2 ಈರುಳ್ಳಿ, 12 – 13 ಬೆಳ್ಳುಳ್ಳಿ ಎಸಳು, ಒಂದೂವರೆ ಇಂಚು ಶುಂಠಿ, 1 ಚಮಚ ಧನಿಯಾ, 1 ಚಮಚ ಜೀರಿಗೆ, 5 ಬ್ಯಾಡಿಗೆ ಮೆಣಸಿನಕಾಯಿ, 3 ಗುಂಟೂರು ಮೆಣಸಿನಕಾಯಿ, 2 ಹಸಿಮೆಣಸಿನಕಾಯಿ, 4 ಚಮಚ ತೆಂಗಿನಕಾಯಿ ತುರಿ, ಅರ್ಧ ಚಮಚ ಅರಿಶಿಣ ಪುಡಿ, ಕಾಲು ಚಮಚ ಇಂಗು, ಒಂದುವರೆ ಚಮಚ ತುಪ್ಪ, 2 ಪಲಾವ್ ಎಲೆ, 5 ಲವಂಗ, 4 ಕಾಳು ಮೆಣಸು, ಅರ್ಧ ಇಂಚು ಚಕ್ಕೆ, ಸ್ವಲ್ಪ ಕರಿಬೇವು, 1 ಕ್ಯಾಪ್ಸಿಕಂ, 1 ಕ್ಯಾರೆಟ್, 1 ಆಲೂಗಡ್ಡೆ, 2 ಟೊಮ್ಯಾಟೋ, ಅರ್ಧ ಬಟ್ಟಲು ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಗರಂ ಮಸಾಲ, ಒಂದುವರೆ ಬಟ್ಟಲು ಅಕ್ಕಿ.

ಮಸಾಲ ಬಾತ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಒಂದುವರೆ ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ.ಎಣ್ಣೆ ಕಾದ ನಂತರ ಇದಕ್ಕೆ ಉದ್ದನೆ ಹಚ್ಚಿದ ಸ್ವಲ್ಪ ಈರುಳ್ಳಿ, ಸಣ್ಣನೆ ಹಚ್ಚಿದ ಶುಂಠಿ, 12 -13 ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಬಾಡುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಧನಿಯಾ, 1 ಚಮಚ ಜೀರಿಗೆ, ಮುರಿದ 5 ಬ್ಯಾಡಿಗೆ ಮೆಣಸಿನಕಾಯಿ, ಮುರಿದ 3 ಗುಂಟೂರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 4 ಚಮಚ ತೆಂಗಿನ ಕಾಯಿತುರಿ, ಅರ್ಧ ಚಮಚ ಅರಿಶಿಣ ಪುಡಿ, ಕಾಲು ಚಮಚ ಇಂಗುವನ್ನು ಹಾಕಿ ಸ್ವಲ್ಪ ಬಾಡುವವರೆಗೂ ಫ್ರೈ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಹುರಿದ ಮಿಶ್ರಣವನ್ನು ಜಾರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರನ್ನು ಇಟ್ಟುಕೊಂಡು ಅದಕ್ಕೆ 4 ಚಮಚದಷ್ಟು ಎಣ್ಣೆ ಹಾಗೂ ಒಂದುವರೆ ಚಮಚದಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ.ಕಾದ ನಂತರ 2 ಪಲಾವ್ ಎಲೆ, 5 ಲವಂಗ, 4 ಕಾಳು ಮೆಣಸು, ಅರ್ಧ ಇಂಚು ಚಕ್ಕೆಯನ್ನು ಹಾಕಿ ಒಂದು ಬಾರಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿ, ಸ್ವಲ್ಪ ಕರಿಬೇವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಕ್ಯಾಪ್ಸಿಕಂ, ಉದ್ದನೆ ಹಚ್ಚಿದ ಕ್ಯಾರೆಟ್ ಅನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಆಲೂಗೆಡ್ಡೆಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣನೆ ಹಚ್ಚಿದ ಟೊಮೇಟೊವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆ, ಅರ್ಧ ಬಟ್ಟಲು ಹಸಿ ಬಟಾಣಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ.

ತದನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಮಾಡಿಕೊಳ್ಳಿ. ನಂತರ ಇದಕ್ಕೆ 2 ಹಸಿಮೆಣಸಿನಕಾಯಿಯನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಗರಂ ಮಸಾಲವನ್ನು ಹಾಕಿ ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದೂವರೆ ಬಟ್ಟಲು ಅಕ್ಕಿ ಹಾಗೂ 3 ಬಟ್ಟಲು ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ 3 ವಿಷಲ್ ಹಾಕಿಸಿಕೊಂಡು ಕುಕ್ಕರ್ ತಣ್ಣಗಾಗಲು ಬಿಡಿ. ಕೊನೆಯದಾಗಿ ಕುಕ್ಕರ್ ತಣ್ಣಗಾದ ನಂತರ ಮುಚ್ಚಳವನ್ನು ತೆಗೆದು ಒಂದು ಬಾರಿ ಮಿಕ್ಸ್ ಮಾಡಿದರೆ ಮಸಾಲಾ ಬಾತ್ ಸವಿಯಲು ಸಿದ್ದ.

Post Author: Ravi Yadav