ಆರ್ಸಿಬಿ ಬಲಾಡ್ಯ ತಂಡವನ್ನು ಘೋಷಣೆ ಮಾಡಿದ ಖ್ಯಾತ ಕ್ರಿಕೆಟಿಗ ಬ್ರಾಡ್ ಹಾಗ್, ಹೇಗಿದೆ ಗೊತ್ತಾ ಆರ್ಸಿಬಿ ತಂಡ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿಯ ಆರಂಭವಾಗಲಿದೆ, ಆರ್ಸಿಬಿ ತಂಡವು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಟೂರ್ನಿಯನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಬಾರಿ ತಂಡ ಬಹಳ ಸಮತೋಲನದಿಂದ ಕೂಡಿರುವ ಕಾರಣ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಇಂತಹ ಸಂದರ್ಭದಲ್ಲಿ ಹಲವಾರು ಆಟಗಾರರ ನಡುವೆ ಆರ್ಸಿಬಿ ತಂಡವು ಹೇಗೆ ತನ್ನ ಹನ್ನೊಂದರ ಬಳಗವನ್ನೂ ರಚನೆ ಮಾಡಲಿದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದ್ದು, ಆಸ್ಟ್ರೇಲಿಯಾ ದೇಶದ ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಬ್ರಾಡ್ ಹಾಗ್ ರವರು ಇದೀಗ ಆರ್ಸಿಬಿ ತಂಡ ಮುಂದೆ ಹೇಗಿರಬಹುದು ಎಂಬುದರ ಕುರಿತು ಲೆಕ್ಕಾಚಾರ ಮಾಡಿ ಬಲಿಷ್ಠ ತಂಡವನ್ನು ರೂಪಿಸಿದ್ದಾರೆ.

ಬ್ರಾಡ್ ಹಾಗ್ ಅವರು ಆರಂಭಿಕರಾಗಿ ದೇವದತ್ತ ಪಡಿಕಲ್ ಹಾಗು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದು ಮೂರನೇ ಕ್ರಮಾಂಕದಲ್ಲಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರಿಗೆ ಅವಕಾಶ ನೀಡಿರುವ ಬ್ರಾಡ್ ಹಾಗ್ ಐದನೇ ಕ್ರಮಾಂಕದಲ್ಲಿ ಡೇನಿಯಲ್ ಕ್ರಿಶ್ಚಿಯನ್ ಆರನೇ ಕ್ರಮಾಂಕದಲ್ಲಿ ಮಹಮದ್ ಅಝರುದ್ದೀನ್ ರವರಿಗೆ ಸ್ಥಾನ ನೀಡಿದ್ದಾರೆ. ಇನ್ನುಳಿದಂತೆ ಮೊದಲ ಸ್ಪಿನ್ನರ್ ಆಲ್ ರೌಂಡರ್ ಆಗಿ ವಾಶಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಕೇನ ರಿಚರ್ಡ್ಸನ್ ಹಾಗೂ ಯುಜ್ವೇಂದ್ರ ಚಹಲ್ ರವರನ್ನು ಬೌಲಿಂಗ್ ಆಯ್ಕೆ ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಈ ತಂಡದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Post Author: Ravi Yadav