ಬಲಾಡ್ಯ ಆರ್ಸಿಬಿ ತಂಡವನ್ನು ಘೋಷಣೆ ಮಾಡಿದ ಆಕಾಶ್ ಚೋಪ್ರಾ ! ಹೇಗಿರಬೇಕಂತೆ ಗೊತ್ತಾ ಆರ್ಸಿಬಿ ತಂಡ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳುತ್ತಿದ್ದು, ಆರ್ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕಲ್ ರವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಂತಹ ಸಂದರ್ಭದಲ್ಲಿ ಆರ್ಸಿಬಿ ತಂಡ ಹೇಗೆ ತನ್ನ ಹನ್ನೊಂದರ ಬಳಗವನ್ನು ರಚಿಸಬಹುದು ಎಂಬುದರ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದ್ದು ಇದೀಗ ಕ್ರಿಕೆಟ್ ವಿಶ್ಲೇಷಕ ರಾದ ಆಕಾಶ್ ಚೋಪ್ರಾ ರವರು ಆರ್ಸಿಬಿ ತಂಡದ ಆಟವಾಡುವ ಹನ್ನೊಂದರ ಬಳಗ ಹೇಗಿರಬೇಕು ಎಂಬುದನ್ನು ವಿವರಣೆ ಸಮೇತ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ತಂಡದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಆಕಾಶ್ ಚೋಪ್ರಾ ರವರು ಒಂದು ವೇಳೆ ದೇವದತ್ ಪಡಿಕಲ್ ಬೇಗ ಗುಣಮುಖರಾಗಿ ತಂಡ ಸೇರಿಕೊಂಡರೇ ದೇವದತ್ತ ಪಡಿಕಲ್ ಹಾಗೂ ವಿರಾಟ್ ಕೊಹ್ಲಿ ರವರು ಇನ್ನಿಂಗ್ಸ್ ಆರಂಭಿಸಬೇಕು, ದೇವದತ್ತ ಪಡಿಕಲ್ ಬರುವವರೆಗೂ ಮೊಹಮ್ಮದ್ ಅಜರುದ್ದಿನ್ ರವರು ದೇವದತ್ತ ಪಡಿಕಲ್ ರವರ ಸ್ಥಾನವನ್ನು ತುಂಬಬಹುದು ಎಂದಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಅವರು ಬೇಡ ರಜತ್ ಪಾಟೀದಾರ್ ರವರು ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್, ಐದನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಆರನೇ ಕ್ರಮಾಂಕದಲ್ಲಿ ಡ್ಯಾನ್ ಕ್ರಿಸ್ಟಿಯನ್ ರವರು ಕಂಡುಬಂದರೆ ಉತ್ತಮ ಎಂದಿದ್ದಾರೆ. ಇನ್ನು 7ನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ರವರು ಕಾಣಿಸಿಕೊಳ್ಳಲಿ ಹಾಗೂ ಸಂಪೂರ್ಣ ಬೌಲರ್ ಗಳಾಗಿ ಜೆಮಿಸನ್, ಗಜೇಂದ್ರ ಚಹಲ್ ಮೊಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ಕಾಣಿಸಿಕೊಂಡರೇ ಖಂಡಿತ ಆರ್ಸಿಬಿ ತಂಡ ಬಹಳ ಬಲಾಢ್ಯವಾಗಿ ಹಾಗೂ ಸಮತೋಲನದಿಂದ ಕೂಡಿರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Post Author: Ravi Yadav