ಸೇನೆ ವಿರುದ್ಧ ನಿಂತವರಿಗೆ ಆಟ ಆರಂಭ ! 24 ಗಂಟೆಗಳಲ್ಲಿಯೇ ಶುರುವಾದ ಅಮಿತ್ ಶಾ ಆಟ !ಏನು ಗೊತ್ತೆ??

ಸೇನೆ ವಿರುದ್ಧ ನಿಂತವರಿಗೆ ಆಟ ಆರಂಭ ! 24 ಗಂಟೆಗಳಲ್ಲಿಯೇ ಶುರುವಾದ ಅಮಿತ್ ಶಾ ಆಟ !ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಫುಲ್ವಾಮ ಘಟನೆಯ ನಂತರ ಮತ್ತೊಂದು ಕಹಿ ಘಟನೆ ನಡೆದು ಹೋಗಿದೆ. ಆದರೆ ಈ ಬಾರಿ ನಮ್ಮಲ್ಲೇ ಇದ್ದುಕೊಂಡು ನಮ್ಮ ಸೈನಿಕರ ವಿರುದ್ಧ ನಿಂತವರು ನ -ಕ್ಸಲರು. ನಡೆದ ಘಟನೆಯಲ್ಲಿ ಹಲವಾರು ಸೈನಿಕರು ಇಹಲೋಕ ತ್ಯಜಿಸಿದ್ದಾರೆ, ಇನ್ನು ಕೆಲವರು ಕಾಣೆಯಾಗಿದ್ದಾರೆ, ಈ ವಿಷಯ ತಿಳಿದ ತಕ್ಷಣ ಅಸ್ಸಾಂನಲ್ಲಿ ನಡೆಯುತ್ತಿದ್ದ ಪ್ರಚಾರವನ್ನು ಬಿಟ್ಟು ಅಮಿತ್ ಶಾ ರವರು ದೆಹಲಿಗೆ ಆಗಮಿಸಿ ಪರಿಸ್ಥಿತಿಯ ಕುರಿತು ಸಾಲು ಸಾಲು ಚರ್ಚೆಗಳಲ್ಲಿ ಭಾಗವಹಿಸಿದ್ದರು.

ಈ ಕುರಿತು ಮಾತನಾಡಿದ ಅಮಿತ್ ಶಾ ರವರು ಸೈನಿಕರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಭರವಸೆ ನೀಡಿದ 24 ಗಂಟೆಗಳಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ನ -ಕ್ಸಲರಿಗೆ ಇಂದಿನಿಂದ ಮಾರಿಹಬ್ಬ ಆರಂಭವಾಗಲಿದೆ ಎಂದರೆ ತಪ್ಪಾಗಲಾರದು.

ಹೌದು ಸ್ನೇಹಿತರೇ ಛತ್ತೀಸ್ ಗಡದಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ನ -ಕ್ಸಲರ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಇಂತಹ ಸಂದರ್ಭದಲ್ಲಿ ನ -ಕ್ಸಲರಿಗೆ ಬ್ರೇಕ್ ಹಾಕಿ ಶಾಂ’ತಿ ಸ್ಥಾಪನೆ ಮಾಡಲು ಛತ್ತೀಸ್ ಗಡದಲ್ಲಿ ಸಾಮಾನ್ಯವಾಗಿ ಈ ಗುಂಪಿನವರು ತಂಗುವ ಪ್ರದೇಶಗಳಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸುವ ಮೂಲಕ ಗಂಭೀರವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತೀಯ ಸೇನೆಗೆ ಆದೇಶ ನೀಡಲಾಗಿದ್ದು ಈ ಕುರಿತು ಸಿಆರ್ಪಿಎಫ್ ಮಹಾ ನಿರ್ದೇಶಕರಾಗಿರುವ ಕುಲದೀಪ್ ಸಿಂಗ್ ರವರು ಮಾತನಾಡಿ, ಇನ್ನು ಮುಂದೆ ಭಾರತ ಸೇನೆಯು ಆದೇಶದಂತೆ ಛತ್ತೀಸ್ಗಡದ ಮೂಲೆ ಮೂಲೆಯಲ್ಲಿಯೂ ಕೂಡ ಭದ್ರತಾ ಶಿಬಿರಗಳನ್ನು ಸ್ಥಾಪಿಸುತ್ತದೆ ಹಾಗೂ ನಕ್ಸ ವಿರುದ್ಧ ಕಾರ್ಯಾಚರಣೆ ಆರಂಭವಾಗುತ್ತಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ