ಐಪಿಎಲ್ ಶುರುವಾಯಿತು ಕೊರೊನ ಕಾಟ ! ಡೆಲ್ಲಿ ತಂಡಕ್ಕೆ ಮೊದಲ ಶಾಕ್. ಸಂಪರ್ಕದಲ್ಲಿ ಇದ್ದವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಇದೀಗ ಕೊರೊನ ಎರಡನೇ ಅಲೆ ಆರಂಭವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ, ಕರ್ನಾಟಕದಲ್ಲಿಯೂ ಕೂಡ ಎರಡನೇ ಅಲೆ ಆರಂಭವಾಗಿದ್ದು ಕೆಲವೇ ಕೆಲವು ಗಂಟೆಗಳ ಹಿಂದೆ ಕಠಿಣ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಕೊರೊನ ನಡುವೆಯೇ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ನಿರ್ಧಾರ ಮಾಡಲಾಗಿದ್ದು, ಯಾವುದೇ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆದುಕೊಳ್ಳದೆ ಪಂದ್ಯಗಳನ್ನು ನಡೆಸಲು ಆಲೋಚನೆ ಮಾಡಲಾಗಿದೆ.

ಪ್ರತಿಯೊಬ್ಬ ಆಟಗಾರನಿಗೂ ಕೂಡ ಏಳು ದಿನಗಳ ಕ್ವಾರಂಟೈನ್ ಮಾಡಿ ತದ ನಂತರ ತಂಡಕ್ಕೆ ಸೇರ್ಪಡೆ ಗಳ ಮಾಡಿಕೊಳ್ಳುವ ಇಂದು ನಿರ್ಧಾರ ಮಾಡಲಾಗಿದ್ದು ಅದರಂತೆಯೇ ಎಲ್ಲಾ ಆಟಗಾರರು ಕ್ವಾರಂಟೈನ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಡೆಲ್ಲಿ ತಂಡಕ್ಕೆ ಮೊದಲ ಶಾಕ್ ಎದುರಾಗಿದ್ದು ತಂಡದ ಆಟಗಾರನಿಗೆ ಕೊರೊನ ಬಂದಿದೆ ಎಂಬುದು ಖಚಿತವಾಗಿದೆ.

ಹೌದು ಸ್ನೇಹಿತರೇ ಕ್ರಿಕೆಟ್ ಮೂಲಗಳ ಪ್ರಕಾರ ಇದೀಗ ಡೆಲ್ಲಿ ತಂಡದ ಪ್ರಮುಖ ಆಲ್-ರೌಂಡರ್ ಗಳಲ್ಲಿ ಒಬ್ಬರಾಗಿರುವ ಅಕ್ಷರ ಪಟೇಲ್ ರವರಿಗೆ ಇದೀಗ ಟೂರ್ನಿ ಆರಂಭವಾಗಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂಬುದು ದೃಢವಾಗಿದೆ. ಇದು ನಿಜಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ಅಂಡಕೆ ಒಂದು ಶಾಕ್ ನೀಡಿದ್ದು, ಇವರ ಜೊತೆ ಯಾವ್ಯಾವ ಆಟಗಾರರು ಸಂಪರ್ಕದಲ್ಲಿದ್ದರು ಎಂದುದನ್ನು ನೋಡುವುದಾದರೆ ರಿಷಬ್ ಪ್ಯಾಂಟ್ ಹಾಗೂ ಧವನ್ ರವರಿಗೆ ಆತಂಕ ಹೆಚ್ಚಾಗಿದೆ. ಕೊರೋಣ ಎರಡನೆಯ ಅಲೆ ನಡುವೆ ಐಪಿಎಲ್ ಟೂರ್ನಿ ಯನ್ನು ನಡೆಸಬೇಕೆ ಅಥವಾ ಬೇಡವೆ ಎಂಬುದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ

Post Author: Ravi Yadav