ದಿಡೀರ್ ಎಂದು ಸಕ್ಕತ್ ರುಚಿಯ ಹಳ್ಳಿ ಶೈಲಿಯಲ್ಲಿ ಮೊಸರಿನ ಸಾರು ಮಾಡುವುದು ಹೇಗೆ ಗೊತ್ತೇ??

ದಿಡೀರ್ ಎಂದು ಸಕ್ಕತ್ ರುಚಿಯ ಹಳ್ಳಿ ಶೈಲಿಯಲ್ಲಿ ಮೊಸರಿನ ಸಾರು ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹಳ್ಳಿ ಶೈಲಿಯ ಮೊಸರಿನ ಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹಳ್ಳಿ ಶೈಲಿಯ ಮೊಸರಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಮೊಸರು, ಒಂದುವರೆ ಈರುಳ್ಳಿ, 1 ಟೊಮೆಟೊ, 4 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 2 ಚಮಚ ತೆಂಗಿನಕಾಯಿತುರಿ, 1 ಗಡ್ಡೆ ಬೆಳ್ಳುಳ್ಳಿ, 1 ಚಮಚ ಅಚ್ಚ ಖಾರದ ಪುಡಿ, 1 ಚಮಚ ಧನಿಯಾ, ಅರ್ಧ ಚಮಚ ಅರಿಶಿನ ಪುಡಿ, ಕಾಲು ಚಮಚ ಜೀರಿಗೆ, ಸ್ವಲ್ಪ ಸಾಸಿವೆ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ಹಳ್ಳಿ ಶೈಲಿಯ ಮೊಸರು ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಉದ್ದನೆ ಹಚ್ಚಿದ ಅರ್ಧ ಈರುಳ್ಳಿ, 1 ಗಡ್ಡೆ ಬೆಳ್ಳುಳ್ಳಿ, ಸಣ್ಣಗೆ ಹಚ್ಚಿದ ಟೊಮೇಟೊ, 2 ಚಮಚ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ 4 – 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ತಣ್ಣಗಾದ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಅಚ್ಚಖಾರದ ಪುಡಿ, ದನಿಯಾ ಪುಡಿ, ಅರಿಶಿನ ಪುಡಿ, ಜೀರಿಗೆ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಇಂಗು, ಕರಿಬೇವು, ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಇದಕ್ಕೆ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹಳ್ಳಿ ಶೈಲಿಯ ಮೊಸರು ಸಾರು ಸವಿಯಲು ಸಿದ್ಧ.