ನಿಶ್ಚಿತಾರ್ಥ ನಡೆದ ಬಳಿಕ ಅಧಿಕೃತವಾಗಿ ಮದುವೆ ದಿನಾಂಕ ಘೋಷಣೆ ಮಾಡಿದ ಕವಿತಾ ಚಂದನ್ ! ಯಾವಾಗ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಮುದ್ದಾದ ಜೋಡಿಗಳು ಎಂದು ಕರೆಸಿ ಕೊಂಡಿದ್ದ ಕವಿತಾ ಗೌಡ ಹಾಗೂ ಚಂದನ್ ರವರು ಇಂದು ಕುಟುಂಬದ ಆಪ್ತರು ಹಾಗೂ ಕೆಲವೇ ಕೆಲವು ಸ್ನೇಹಿತರ ಸಮಾಗಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಉಂಗುರ ಬದಲಾಯಿಸಿ ಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಪ್ರೀತಿಗೆ ಮದುವೆಯೆಂಬ ಗಂಟನ್ನು ಹಾಕಿಕೊಳ್ಳಲು ಸಿದ್ಧವಾಗಿದೆ.

ಇದೀಗ ನಿಶ್ಚಿತಾರ್ಥ ನಡೆದ ಬಳಿಕ ಅಂದು ಕೊಂಡಂತೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದ್ದು, ಎಲ್ಲಿ ನೋಡಿದರೂ ಈ ಜೋಡಿಗಳ ನಿಶ್ಚಿತಾರ್ಥದ ಫೋಟೋಗಳು ಹಾಗೂ ವಿಡಿಯೋಗಳು ಬಾರಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಇಂತಹ ಅದ್ಭುತ ಸಮಯದಲ್ಲಿ ಈ ಜೋಡಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿಂದ ಶುಭಾಶಯಗಳು ಮಳೆ ಹರಿದು ಬಂದಿದೆ.

ಲಕ್ಷಾಂತರ ಅಭಿಮಾನಿಗಳು ಸೇರಿದಂತೆ ಕನ್ನಡ ಕಿರುತೆರೆಯಲ್ಲಿ ಕಲಾವಿದರಾಗಿ ಬಣ್ಣಹಚ್ಚುವ ನಟ-ನಟಿಯರು ಹಾಗೂ ವಿವಿಧ ಕಲಾವಿದರು ಕೂಡ ನವ ಜೋಡಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದು ಈ ಜೋಡಿಯ ನೂರು ಕಾಲ ಸುಖವಾಗಿ ಸಂಸಾರ ಸಾಗಿಸಲು ಎಂದು ಶುಭಾಶಯ ಕೋರಿದ್ದಾರೆ. ಇನ್ನು ನಿಶ್ಚಿತಾರ್ಥ ವೇನೋ ಆಯಿತು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಕ್ಕೆ ಕವಿತಾ ಹಾಗೂ ಚಂದನ್ ರವರ ಕಡೆಯಿಂದ ಅಧಿಕೃತ ಮಾಹಿತಿ ಬಂದಿದ್ದು ಮುಂದಿನ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಜೋಡಿ ಘೋಷಣೆ ಮಾಡಿದೆ.

Post Author: Ravi Yadav