ಐಪಿಎಲ್ ನಲ್ಲಿ ಗೆಲ್ಲುವ ನೆಚ್ಚಿನ ತಂಡ ವನ್ನು ತಿಳಿಸಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ! ಯಾವುದು ಗೊತ್ತೆ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿ ವರ್ಣ ರಂಜಿತವಾಗಿ ಆರಂಭವಾಗಲಿದೆ. ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ತಂಡದ ಸರಣಿ ಮುಗಿದ ಮರು ಕ್ಷಣದಿಂದ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಟೂರ್ನಿಯ ಕುರಿತು ಆಲೋಚನೆ ನಡೆಸಲು ಸಿದ್ಧವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕೂಡ ಐಪಿಎಲ್ ಕುರಿತು ಚರ್ಚೆಗಳು ನಡೆಯುತ್ತಿವೆ.

ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಯಾವ ತಂಡದ ಗೆಲ್ಲಲಿದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದ್ದು ಕಳೆದ ಕೆಲವು ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಮತೋಲನವಾದ ತಂಡವನ್ನು ಹೊಂದಿರುವ ಆರ್ಸಿಬಿ ತಂಡವು ಕೂಡ ಗೆಲ್ಲುವ ಫೆವರೇಟ್ ತಂಡಗಳಲ್ಲಿ ಒಂದಾಗಿದೆ. ಇನ್ನು ಐಪಿಎಲ್ ಟೂರ್ನಿಯ ಕುರಿತು ಇದೆ ಈಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ರವರು ಮಾತನಾಡಿ, ಯಾವ ತಂಡ ಗೆಲ್ಲಲಿದೆ ಹಾಗೂ ಯಾವ ಕಾರಣಕ್ಕೆ ಎಂಬುದರ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ಅವರು ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೇ ಈ ಬಾರಿ ಹೆಚ್ಚಿನ ಸಮತೋಲನದಿಂದ ಕೂಡಿದೆ. ದೇಶಿಯ ಯುವ ಪ್ರತಿಭೆಗಳು ಹಾಗೂ ವಿದೇಶಿ ಆಟಗಾರರನ್ನು ಸರಿಯಾಗಿ ಆಯ್ಕೆ ಮಾಡಿ ವಿರಾಟ್ ಕೊಹ್ಲಿ ರವರು ಎಬಿ ಡಿವಿಲಿಯರ್ಸ್ ಅವರ ಜೊತೆ ಮತ್ತೊಮ್ಮೆ ಮಿಂಚು ಹರಿಸಲು ಸಫಲವಾದಲ್ಲಿ ಖಂಡಿತ ಆರ್ಸಿಬಿ ತಂಡ ಈ ಬಾರಿ ಐಪಿಎಲ್ ಕಿರೀಟವನ್ನು ಮುಡಿಗೇರಿಸಿ ಕೊಳ್ಳಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Post Author: Ravi Yadav