ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ 11 ರ ಬಳಗದಲ್ಲಿ ಯಾವ್ಯಾವ ಆಟಗಾರರು ಸ್ಥಾನ ಪಡೆದುಕೊಳ್ಳಲಿದ್ದಾರೆ ಗೊತ್ತೆ?? ಹೀಗಿದೆ ಸಂಭಾವ್ಯ ತಂಡ

7

ನಮಸ್ಕಾರ ಸ್ನೇಹಿತರೇ ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಐಪಿಎಲ್ ಟೂರ್ನಿ ಆರಂಭವಾಗಲಿದೆ, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಆರ್ಸಿಬಿ ತಂಡವು ನಿರೀಕ್ಷೆಯ ಬೆಟ್ಟವನ್ನು ಹೆಗಲ ಮೇಲೆ ಇಟ್ಟುಕೊಂಡಿದೆ. ಈ ಬಾರಿಯಾದರೂ ಆರ್ಸಿಬಿ ತಂಡ ಕಪ್ ಗೆಲ್ಲಬೇಕು ಎಂಬುದು ಎಲ್ಲರ ಮಹದಾಸೆ ಯಾಗಿದೆ. ಇನ್ನು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಆರಂಭವಾಗುತ್ತಿರುವ ಕಾರಣ ಐಪಿಎಲ್ ಕ್ರೇಜ್ ಕೂಡ ಹೆಚ್ಚಾಗುತ್ತಿದೆ.

ಈ ಬಾರಿ ಆರ್ಸಿಬಿ ತಂಡ ಕೊಂಚ ವಿಭಿನ್ನವಾಗಿರಲಿದೆ ಎಂದರೇ ತಪ್ಪಾಗಲಾರದು ಏಕೆಂದರೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೇ ಇದೇ ಮೊಟ್ಟ ಮೊದಲ ಬಾರಿಗೆ ಆರ್ಸಿಬಿ ತಂಡ ಬಹಳ ಸಮತೋಲನದಿಂದ ಕೂಡಿದೆ ಎಂದರೇ ತಪ್ಪಾಗಲಾರದು. ಅದರಲ್ಲಿಯೂ ಬೌಲಿಂಗ್ ಹಾಗೂ ಆಲ್-ರೌಂಡರ್ ಗಳ ವಿಭಾಗದಲ್ಲಿ ಮತ್ತು ದೇಶೀಯ ಯುವ ಪ್ರತಿಭೆಗಳು ತಂಡ ಸೇರಿಕೊಂಡಿರುವ ಕಾರಣ ಖಂಡಿತ ಆರ್ಸಿಬಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಗಿದ್ದರೆ ಇಷ್ಟೆಲ್ಲ ಆಟಗಾರರ ನಡುವೆ ಹನ್ನೊಂದರ ಬಳಗ ಹೇಗೆ ರಚನೆಯಾಗುತ್ತದೆ ಎಂಬುದನ್ನು ನೋಡುವುದಾದರೇ ಕ್ರಿಕೆಟ್ ಪಂಡಿತರು ಇದೀಗ ಆಟವಾಡುವ ಹನ್ನೊಂದರ ಬಳಗದ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಿದ್ದು ನಿಜಕ್ಕೂ ಬಹಳ ಅದ್ಭುತವಾಗಿ ತಂಡ ಮೂಡಿಬಂದಿದೆ. ದೇವದುತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಕೈಲ್ ಜಾಮಿಸನ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಸಿರಾಜ್.