ಶ್ರೀಮಂತರಾಗಬೇಕು ಎಂದರೇ, ಈ 4 ಮಾರ್ಗಗಳನ್ನು ಅನುಸರಿಸಿ ಎಂದ ಚಾಣಕ್ಯ, ಯಾವ್ಯಾವು ಗೊತ್ತೇ??

ಶ್ರೀಮಂತರಾಗಬೇಕು ಎಂದರೇ, ಈ 4 ಮಾರ್ಗಗಳನ್ನು ಅನುಸರಿಸಿ ಎಂದ ಚಾಣಕ್ಯ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಆಚಾರ್ಯ ಚಾಣಕ್ಯರು ಹೇಳುವ ಈ ನಾಲ್ಕು ಮಾರ್ಗಗಳನ್ನು ಅನುಸರಿಸಿದ್ದೇ ಆದಲ್ಲಿ, ನೀವು ಶ್ರೀಮಂತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆಚಾರ್ಯ ಚಾಣಕ್ಯ ಪ್ರಕಾರ, ಎಲ್ಲಾ ಸಂದರ್ಭಗಳಲ್ಲಿಯೂ ಸತ್ಯವನ್ನು ಅರಿತುಕೊಂಡು ಅದರ ಮೇಲೆ ಮಾತ್ರ ಮುಂದುವರೆಯುವ ವ್ಯಕ್ತಿಯು ಎಂದಿಗೂ ಸಹ ಬಡವನಾಗುವುದಿಲ್ಲ.

ವಿವಿಧ ಸಂದರ್ಭಗಳಲ್ಲಿ ಜನರಿಗೆ ಮಾರ್ಗವನ್ನು ತೋರಿಸಲು ಚಾಣಕ್ಯ ನೀತಿಯು ಸಹಾಯಕವಾಗುತ್ತದೆ. ಆಚಾರ್ಯ ಚಾಣಕ್ಯರ ವಿಚಾರಗಳು ಮತ್ತು ತತ್ವಗಳು ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ. ಚಾಣಕ್ಯನಿಗೆ ಎಲ್ಲಾ ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆ ಇತ್ತು ಎಂದು ಹೇಳಲಾಗುತ್ತದೆ. ಅಂತಹ ಕೆಲವು ವಿಷಯಗಳಿಗೆ ಸಂಬಂಧಿಸಿದ ಅಭ್ಯಾಸಗಳನ್ನು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಚಾಣಕ್ಯನ ಪ್ರಕಾರ, ಲಕ್ಷ್ಮೀ ದೇವಿಯ ಕೃಪೆಯನ್ನು ಸ್ವೀಕರಿಸಲು ಸಂಪತ್ತು ನೇರವಾಗಿ ಸಂಬಂಧಿಸಿದೆ. ಲಕ್ಷ್ಮೀ ದೇವಿಯ ಕೃಪೆಯನ್ನು ಹೊಂದಿರದ ವ್ಯಕ್ತಿಯು ಎಂದಿಗೂ ಸಹ ಶ್ರೀಮಂತನಾಗಲು ಸಾಧ್ಯವಿಲ್ಲ. ಆದ್ದರಿಂದ ತಮ್ಮ ತಮ್ಮ ನಡವಳಿಕೆಯ ಮೂಲಕ ಲಕ್ಷ್ಮೀ ದೇವಿಯನ್ನು ಸಂತೋಷಪಡಿಸಬೇಕು.ಆಚಾರ್ಯ ಚಾಣಕ್ಯರು ಹೇಳಿರುವ ಈ ನಾಲ್ಕು ಮಾರ್ಗಗಳ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ, ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ. ಆಚಾರ್ಯ ಚಾಣಕ್ಯರು ಹೇಳುವುದೇನೆಂದರೆ ,ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿ ಕೊಳ್ಳುತ್ತಾನೋ ಅಂತವರ ಜೀವನದಲ್ಲಿ ಹಣ ಬರಲು ಪ್ರಾರಂಭವಾಗುತ್ತದೆ. ಅಂತಹ ವ್ಯಕ್ತಿಯು ಎಂದಿಗೂ ಸಹ ಬಡವನಾಗುವುದಿಲ್ಲ. ಲಕ್ಷ್ಮೀ ದೇವಿಯು ಯಾವಾಗಲೂ ಅವರ ಮೇಲೆ ತನ್ನ ಅನುಗ್ರಹವನ್ನು ಉಳಿಸಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂಬುದು ಚಾಣುಕ್ಯರ ಮಾತಾಗಿದೆ.

ಇನ್ನೂ ಎರಡನೆಯದಾಗಿ, ಸತ್ಯದ ಹಾದಿಯನ್ನು ಆರಿಸಿ. ಎಲ್ಲಾ ಸಂದರ್ಭಗಳಲ್ಲಿಯೂ ಸತ್ಯವನ್ನು ಆರಿಸಿಕೊಂಡು ನಿರಂತರವಾಗಿ ಅನುಸರಿಸುವ ವ್ಯಕ್ತಿಯು ಎಂದಿಗೂ ಸಹ ಬಡವನಾಗುವುದಿಲ್ಲ. ಅಂತಹ ವ್ಯಕ್ತಿಯ ಮೇಲೆ ಯಾವಾಗಲೂ ದೈವಿಕ ಅನುಗ್ರಹವಿರುತ್ತದೆ. ಇದಕ್ಕಾಗಿಯೇ ,ಸತ್ಯದ ಹಾದಿಯಲ್ಲಿ ನಡೆಯುವ ವ್ಯಕ್ತಿಯ ಜೀವನದಲ್ಲಿ ಬಡತನವು ಇರುವುದಿಲ್ಲ

ಮೂರನೆಯದಾಗಿ, ಗೌರವ ನೀಡುವುದು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಚಾಣಕ್ಯ ತಮ್ಮ ಹಿರಿಯರಿಗೆ ಗೌರವವನ್ನು ನೀಡುವುದು ಶ್ರೇಷ್ಠವೆಂದು ತಿಳಿಸಿದ್ದಾರೆ. ಅವರು ಸಹ ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಆದ್ದರಿಂದ ಯಾವಾಗಲೂ ಹಿರಿಯರನ್ನು ಗೌರವಿಸಬೇಕು. ಅಲ್ಲದೆ, ನಮ್ಮ ವಯಸ್ಸಿನ ಮಕ್ಕಳು ಅಥವಾ ಜನರೊಂದಿಗೆ ವ್ಯವಹರಿಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂಬುದನ್ನು ಚಾಣುಕ್ಯರು ತಮ್ಮ ನೀತಿಗಳಲ್ಲಿ ತಿಳಿಸಿದ್ದಾರೆ.

ಇನ್ನೂ ಕೊನೆಯದಾಗಿ ಹೇಳುವುದೆನೆಂದರೆ, ಶಿಸ್ತುಗೆ ಹಣ ಸಿಗುತ್ತದೆ. ಶಿಸ್ತು ಬದ್ಧ ವ್ಯಕ್ತಿಯು ಯಾವುದೇ ಸಮಯದಲ್ಲಾದರೂ ಕೆಲಸವನ್ನು ಮಾಡುತ್ತಾನೆ. ಇಂತಹ ವ್ಯಕ್ತಿಯು ಯಾವುದೇ ಕೆಲಸವನ್ನು ಯಾರ ಬಳಿಯೂ ಹೇಳಿಸಿ ಕೊಳ್ಳುವುದಿಲ್ಲ. ಅಂತಹ ವ್ಯಕ್ತಿಯು ತನ್ನ ನಡವಳಿಕೆಯಿಂದ ಸಂಪತ್ತನ್ನು ಸೆಳೆಯುತ್ತಾನೆ. ಸಂಪತ್ತನ್ನು ಸಾಧಿಸಲು ಬಯಸುವ ವ್ಯಕ್ತಿಯು ಶಿಸ್ತನ್ನು ಕಲಿಯಬೇಕು ಎಂದು ಚಾಣಕ್ಯರು ಹೇಳುತ್ತಾರೆ.