ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತಾ?? ರೋಹಿತ್ ರವರನ್ನು ಮೀರಿಸಿದ ಯುವ ಆಟಗಾರ.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವ್ಯಾವ ಆಟಗಾರರು ಆರೆಂಜ್ ಕ್ಯಾಪ್ ಗೆಲ್ಲಬಹುದು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ, ಅಚ್ಚರಿಯೆಂದರೆ ಯುವ ಆಟಗಾರರು ಹಿರಿಯ ಆಟಗಾರರನ್ನು ಕೂಡ ಮೀರಿಸಿದ್ದು ಆರೆಂಜ್ ಕ್ಯಾಪ್ ಗೆಲ್ಲುವ ನೆಚ್ಚಿನ ಆಟಗಾರರ ಸಾಲಿನಲ್ಲಿ ಟಾಪ್ ಆಟಗಾರರಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಐದನೇ ಸ್ಥಾನದಲ್ಲಿ ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರಾಗಿರುವ ರೋಹಿತ್ ಶರ್ಮಾ ಅವರು ಕಾಣಿಸಿ ಕೊಳ್ಳುತ್ತಾರೆ, ಉತ್ತಮ ಫಾರ್ಮ್ ನಲ್ಲಿ ಇದ್ದರೂ ಕೂಡ ಆರೆಂಜ್ ಗೆಲ್ಲಬೇಕೆಂದರೆ ಹೆಚ್ಚಿನ ಶ್ರಮ ವಹಿಸಬೇಕಾಗಿ ಇರುವ ಕಾರಣ ರೋಹಿತ್ ಶರ್ಮಾ ರವರು ಈ ಸಾಲಿನಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಲ್ಕನೇ ಸಾಲಿನಲ್ಲಿ ವಿದೇಶಗಳಲ್ಲೂ ಕೂಡ ಸರಾಗವಾಗಿ ಬ್ಯಾಟಿಂಗ್ ಮಾಡಿ ವಿಶ್ವ ಶ್ರೇಷ್ಠ ಬೌಲರ್ ಗಳನ್ನು ಎದುರಿಸಿ ತಾನು ಒಬ್ಬ ಉತ್ತಮ ಆಟಗಾರ ನಾಗಬಲ್ಲೆ ಎಂಬುದನ್ನು ತೋರಿಸಿರುವ ಶುಭಂ ಗಿಲ್ ರವರು ಈ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿ ಭಾರತದ ಆರಂಭಿಕ ಆಟಗಾರ ಹಾಗೂ ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ರವರು ಸ್ಥಾನ ಪಡೆದು ಕೊಂಡಿದ್ದಾರೆ, ಕಳೆದ ಬಾರಿ ಇವರು ಆರೆಂಜ್ ಕ್ಯಾಪ್ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದರು. ಇನ್ನು ಎರಡನೇ ಸ್ಥಾನದಲ್ಲಿ ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರ ಹಾಗೂ ಮೂರು ಬಾರಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿರುವ ಡೇವಿಡ್ ವಾರ್ನರ್ ಅವರು ಕಾಣಿಸುತ್ತಾರೆ. ಇನ್ನು ಮೊದಲನೇ ಸ್ಥಾನದಲ್ಲಿ ಅಂದುಕೊಂಡಂತೆ ವಿಶ್ವ ಶ್ರೇಷ್ಠ ಆಟಗಾರ ಹಾಗೂ ಕಿಂಗ್ ಎಂದೇ ಖ್ಯಾತಿ ಪಡೆದು ಕೊಂಡಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಕಿಂಗ್ ಕೊಹ್ಲಿ ರವರು ಸ್ಥಾನ ಪಡೆದು ಕೊಂಡಿದ್ದಾರೆ.

Post Author: Ravi Yadav