ಅತ್ಯುತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿದ್ದರೂ ಕೂಡ ಡಿಕೆಡಿ ಕಾರ್ಯಕ್ರಮದ ಮೇಲೆ ರೊಚ್ಚಿಗೆದ್ದ ಪ್ರೇಕ್ಷಕರು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ಯಶಸ್ಸಿನ ಸೀಸನ್ ಗಳ ನಂತರ ಕನ್ನಡ ಕಿರುತೆರೆಯಲ್ಲಿ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಮತ್ತೊಮ್ಮೆ ಪ್ರಸಾರವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ಪಡೆದು ಕೊಳ್ಳುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು, ಮತ್ತೊಮ್ಮೆ ಯಶಸ್ಸಿನ ಶೋಗಳ ಸಾಲಿಗೆ ಸೇರಿಕೊಂಡಿದೆ.

ಈ ಮೂಲಕ ಸರಿಗಮಪ ಕಾರ್ಯಕ್ರಮದಂತೆ ಈ ಕಾರ್ಯಕ್ರಮವು ಕೂಡ ಪ್ರತಿ ಸೀಸನ್ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಇದರ ನಡುವೆ ಹಲವಾರು ಜನರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಸಲಹೆಯೊಂದನ್ನು ನೀಡಿದ್ದಾರೆ, ಈ ಸಲಹೆಯನ್ನು ಕಾರ್ಯಕ್ರಮ ಪಾಲಿಸಿದರೇ ಖಂಡಿತ ಟಿಆರ್ಪಿ ಲೆಕ್ಕದಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಕೂಡ ಹೇಳಿದ್ದಾರೆ.

ಹೌದು ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ಪ್ರತಿಕ್ರಿಯೆ ನೀಡುತ್ತಿದ್ದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಡ್ಯಾನ್ಸ್ ಪ್ರತಿಭೆಗಳ ಆಗಿರುವ ಶಶಿಕುಮಾರ್ ಹಾಗೂ ವಿನೋದ್ ರಾಜಕುಮಾರ್ ‌ರವರಂತಹ ತೀರ್ಪುಗಾರರನ್ನು ಕರೆದುಕೊಂಡು ಬನ್ನಿ, ಇದೀಗ ಇರುವ ತೀರ್ಪುದಾರರು ಜೊತೆ ಸೇರಿಸಿದರೂ ಪರವಾಗಿಲ್ಲ ಅಥವಾ ಇರುವ ತೀರ್ಪುಗಾರರನ್ನು ಬದಲಾಯಿಸಿದರು ಪರವಾಗಿಲ್ಲ ಅವರಿಗೆ ಅವಕಾಶ ನೀಡಿ ನೋಡಿ ಕಂಡಿತ ಕಾರ್ಯಕ್ರಮ ಮತ್ತಷ್ಟು ಯಶಸ್ಸು ಕಾಣಲಿದೆ ಹಾಗೂ ಡ್ಯಾನ್ಸ್ ಕಾರ್ಯಕ್ರಮಕ್ಕೆ ಒಂದು ಅರ್ಥವಿರುತ್ತದೆ ಎಂದಿದ್ದಾರೆ.

Facebook Comments

Post Author: Ravi Yadav