ಬದನೇಕಾಯಿ ಅಷ್ಟೇ ಅಲ್ಲಾ, ಕ್ಯಾಪ್ಸಿಕಂ ಜೊತೆ ಎಣ್ಣೆಗಾಯಿ ಮಾಡಿ ನೋಡಿ, ಅದ್ಭುತ ರುಚಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ದೊಡ್ಡಮೆಣಸಿನಕಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದೊಡ್ಡಮೆಣಸಿನಕಾಯಿ ಎಣ್ಣೆಗಾಯಿ ಮಾಡಲು ಬೇಕಾಗುವ ಪದಾರ್ಥಗಳು: 8 ದೊಡ್ಡ ಮೆಣಸಿನಕಾಯಿ, 2 ದೊಡ್ಡ ಈರುಳ್ಳಿ, ಅರ್ಧ ಬಟ್ಟಲು ಒಣಕೊಬ್ಬರಿ ತುರಿ, 1 ಟೊಮಾಟೊ, 1 ಚಮಚ ಧನಿಯಾ, 1 ಚಮಚ ಬಿಳಿ ಎಳ್ಳು, 1 ಚಮಚ ಜೀರಿಗೆ, 2 ಚಮಚ ಕಡಲೆ ಬೀಜ, ಸ್ವಲ್ಪ ಬೆಲ್ಲ, ಅರ್ಧ ಚಮಚ ಖಾರದ ಪುಡಿ, ಸ್ವಲ್ಪ ಹುಣಸೆಹಣ್ಣು, ಸ್ವಲ್ಪ ಅರಿಶಿನ ಪುಡಿ, 1 ಗೆಡ್ಡೆ ಬೆಳ್ಳುಳ್ಳಿ,ಅರ್ಧ ಇಂಚು ಶುಂಠಿ, ಅರ್ಧ ಚಮಚ ಸೋಂಪು ಕಾಳು, 4 ಏಲಕ್ಕಿ, 3 ಲವಂಗ, ಸ್ವಲ್ಪ ಚಕ್ಕೆ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಒಣಮೆಣಸಿನಕಾಯಿ, ಸ್ವಲ್ಪ ಇಂಗು, ಸ್ವಲ್ಪ ಕರಿಬೇವು.

ದೊಡ್ಡಮೆಣಸಿನಕಾಯಿ ಎಣ್ಣೆಗಾಯಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಹಚ್ಚಿದ ಟೊಮೇಟೊವನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಲವಂಗ, ಚಕ್ಕೆ, ಏಲಕ್ಕಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ ಸೋಂಪು ಕಾಳು, ಬೆಳ್ಳುಳ್ಳಿ, ಶುಂಠಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಮತ್ತೆ ಅದೇ ಪ್ಲೇಟಿಗೆ ಹಾಕಿಕೊಳ್ಳಿ.

ನಂತರ ಅದೇ ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಧನಿಯಾ, ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಂಡು ಅದೇ ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ 2 ಚಮಚದಷ್ಟು ಎಣ್ಣೆಯನ್ನು ಹಾಕಿಕೊಂಡು ಕಡಲೆ ಬೀಜವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಬಿಳಿ ಎಳ್ಳನ್ನು ಹಾಕಿ ಫ್ರೈ ಮಾಡಿಕೊಂಡು ಅದೇ ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಒಣಕೊಬ್ಬರಿಯನ್ನು ಹಾಕಿಕೊಂಡು ಕೆಂಪಗಾಗುವವರೆಗೂ ಫ್ರೈ ಅದೇ ಪ್ಲೇಟಿಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಅದೇ ಬಾಣಲೆಗೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಬೀಜ ತೆಗೆದ ದೊಡ್ಡ ಮೆಣಸಿನಕಾಯಿಯನ್ನು ಫ್ರೈ ಮಾಡಿಕೊಳ್ಳಿ.

ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಪದಾರ್ಥವನ್ನು ಹಾಕಿಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ಅಚ್ಚಕಾರದ ಪುಡಿ, ಹುಣಸೆಹಣ್ಣು, ಅರಿಶಿನ ಪುಡಿ, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಉಪ್ಪನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಬಟ್ಟಲಿಗೆ ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ 1 ಚಮಚದಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ದೊಡ್ಡ ಮೆಣಸಿನಕಾಯಿಗೆ ಮಿಕ್ಸಿ ಮಾಡಿಕೊಂಡ ಮಸಾಲೆಯನ್ನು ತುಂಬಿಕೊಳ್ಳಿ.

ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, 2 ಒಣಮೆಣಸಿನಕಾಯಿ, ಸ್ವಲ್ಪ ಇಂಗು ಹಾಕಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಕರಿಬೇವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಟೊಮೇಟೊ ಕ್ಯೂರಿ ಯನ್ನು ಹಾಕಿ ಟಮೋಟೋ ಎಣ್ಣೆ ಬಿಡುವವರೆಗೂ ಬೇಯಿಸಿಕೊಳ್ಳಿ.

ನಂತರ ಇದಕ್ಕೆ ಮಸಾಲೆ ತುಂಬಿದ ದೊಡ್ಡ ಮೆಣಸಿನಕಾಯಿ ಹಾಗೂ ಉಳಿದ ಮಸಾಲೆಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲು ನೀರನ್ನು ಹಾಕಿ ದೊಡ್ಡಮೆಣಸಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿಕೊಂಡರೆ ದೊಡ್ಡ ಮೆಣಸಿನಕಾಯಿ ಎಣ್ಣೆಗಾಯಿ ಸವಿಯಲು ಸಿದ್ಧ.

Post Author: Ravi Yadav