ಬಿಗ್ ಬಾಸ್ ಮನೆಯಿಂದ ಚಂದ್ರಕಲಾ ರವರು ಎಲಿಮಿನೇಟ್ ಆಗಿ ಹೊರ ಬರಲು ಕಾರಣವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರದಲ್ಲಿ ಮನೆಯ ಮತ್ತೊಬ್ಬರು ಮಹಿಳಾ ಸ್ಪರ್ದಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ, ಚಂದ್ರಕಲಾ ಮೋಹನ್ ರವರು ಹೊರಗಡೆ ಬರುತ್ತಿದ್ದಂತೆ ಮನೆಯಲ್ಲಿ ಹೆಚ್ಚೇನು ಸದ್ದು ಮಾಡದೇ ಇದ್ದರೂ ಕೂಡ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಚಂದ್ರಕಲಾ ರವರು ಹೊರಗೆ ಬರಲು ಕಾರಣವೇನು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.

ಹೌದು ಚಂದ್ರಕಲಾ ಉತ್ತಮ ಪ್ರದರ್ಶನ ನೀಡದೆ ಇರಬಹುದು ಆದರೆ ಖಂಡಿತ ಇವರು ವಯಸ್ಸಿಗೂ ಮೀರಿದ ಪ್ರದರ್ಶನ ತೋರಿದ್ದಾರೆ ಎಂದರೆ ತಪ್ಪಾಗಲಾರದು. ಆದರೂ ಕೂಡ ಪ್ರೇಕ್ಷಕರು ಚಂದ್ರಕಲಾ ಮೋಹನ್ ಅವರನ್ನು ಯಾವ ಕಾರಣಕ್ಕೆ ಹೊರಗಡೆ ಕಳುಹಿಸುವ ನಿರ್ಧಾರ ಮಾಡಿದರು ಎಂಬುದನ್ನು ನಾವು ನೋಡುವುದಾದರೇ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಕೇಳಿ ಬಂದಿದ್ದು ಎರಡು ಕಾರಣಗಳು ಗಣನೀಯ ಪ್ರಮಾಣದಲ್ಲಿ ಕೇಳಿಬಂದಿದೆ. ಕಾರಣಗಳು ಕೆಳಗಿನಂತಿದ್ದು, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಮೊದಲನೆಯದಾಗಿ ಹಿರಿಯ ನಟಿ ಚಂದ್ರಕಲಾ ರವರು ಅಡುಗೆ ಮನೆಯ ಕೆಲಸಗಳನ್ನು ನಿರ್ವಹಣೆ ಮಾಡಿ ಮೆಚ್ಚುಗೆ ಪಡೆದು ಕೊಳ್ಳುತ್ತಿದ್ದರು. ಆದರೆ ವಯಸ್ಸಿನ ಅಂತರದ ಕಾರಣದಿಂದ ಎಲ್ಲರ ಜೊತೆ ಹೆಚ್ಚು ಬರೆಯಲು ಸಾಧ್ಯವಾಗಲಿಲ್ಲ ಅದೇ ಕಾರಣಕ್ಕೆ ಹೊರ ಬಂದಿದ್ದಾರೆ ಎಂದಿದ್ದಾರೆ, ಇನ್ನು ಕೆಲವರು ತಂದೆಯ ಕುರಿತು ನಡೆದ ಘಟನೆಗಳನ್ನು ಹಂಚಿ ಕೊಂಡದ್ದು ನಿಜಕ್ಕೂ ಸರಿಯಾದ ಕೆಲಸವಲ್ಲ ತಂದೆ ತಪ್ಪು ಮಾಡಿರಬಹುದು ಆದರೆ ಬಿಗ್ ಬಾಸ್ ಮನೆಯಲ್ಲಿ ಆ ಕುರಿತು ಹೇಳಿದ್ದು, ಸರಿ ಇಲ್ಲ ಎಂಬ ಪ್ರತಿಕ್ರಿಯೆಗಳು ಕಂಡು ಬಂದಿವೆ. ಆದರೆ ತಂದೆಯ ಕುರಿತು ಹೇಳಿದ್ದು ಸರಿ ಎಂದು ಕೂಡ ಕೆಲವೊಂದು ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು.

Post Author: Ravi Yadav