ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆತ್ಮನಿರ್ಬರ್ ಅಡಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ, ಸೈನಿಕರಿಗೆ ಆನೆಬಲ, ವಿದೇಶಗಳಿಗೆ ಮತ್ತೊಮ್ಮೆ ಸೆಡ್ಡು. ಏನು ಗೊತ್ತಾ??

2

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಆತ್ಮನಿರ್ಬರ್ ಭಾರತ ಎಂಬ ಘೋಷಣೆಯ ಮೂಲಕ ಹೊಸದಾದ ದೇಶ ಕಟ್ಟಲು ಒಟ್ಟಾಗಿ ಮುನ್ನಡೆಯುತ್ತಿದೆ. ವಿದೇಶಗಳಿಂದ ಆಮದು ಮಾಡಿ ಕೊಳ್ಳುತ್ತಿರುವ ವಸ್ತುಗಳನ್ನು ಭಾರತದಲ್ಲಿಯೇ ತಯಾರಿ ಮಾಡುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಭಾರತದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ಅಷ್ಟೇ ಅಲ್ಲದೆ ಭಾರತದ ಆರ್ಥಿಕತೆಯನ್ನು ಬಲಪಡಿಸುವುದು ಆತ್ಮನಿರ್ಬರ್ ಭಾರತದ ಪ್ರಮುಖ ಗುರಿಯಾಗಿದೆ.

ಇನ್ನು ಯಾವುದೇ ಒಂದು ದೇಶ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಥಿಕತೆಯಲ್ಲಿ ಬಲಿಷ್ಠ ವಾಗಬೇಕಾದರೆ ಖಂಡಿತ ಅದು ರಕ್ಷಣಾ ಸಾಮಾಗ್ರಿಗಳನ್ನು ಉತ್ಪತಿ ಮಾಡಲೇ ಬೇಕಾಗುತ್ತದೆ ಇಲ್ಲವಾದಲ್ಲಿ ಬಹಳ ಅಪರೂಪದ ಅಮೂಲ್ಯವಾದ ವಸ್ತುಗಳನ್ನು ಗಣನೀಯ ಪ್ರಮಾಣದಲ್ಲಿ ಹೊಂದಿರ ಬೇಕಾಗುತ್ತದೆ, ಉದಾಹರಣೆಗೆ ಪೆಟ್ರೋಲ್ ಅಥವಾ ಚಿನ್ನ. ಭಾರತದಲ್ಲಿ ಈ ರೀತಿಯ ಉತ್ಪನ್ನಗಳು ಹೆಚ್ಚಾಗಿ ಸಿಗದೇ ಇರುವ ಕಾರಣ ಭಾರತಕ್ಕೆ ಇರುವ ಪ್ರಮುಖ ಆಯ್ಕೆ ರಕ್ಷಣಾ ಸಾಮಗ್ರಿಗಳು.

ಅದೇ ನಿಟ್ಟಿನಲ್ಲಿ ಭಾರತ ದೇಶವು ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ ಕಳೆದ ಎರಡು ವರ್ಷಗಳಲ್ಲಿ ಶೇಕಡ 700 % ಕ್ಕೂ ಹೆಚ್ಚಾಗಿದೆ ನಮ್ಮ ದೇಶದ ರಫ್ತಿನ ಶೇಕಡಾವಾರು, ಇದೀಗ ಅದೇ ರೀತಿಯ ಮತ್ತೊಂದು ಹೆಜ್ಜೆ ಇಟ್ಟಿದ್ದು ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತದ ಮಹಿಂದ್ರ ಅಂಡ್ ಮಹಿಂದ್ರ ಗ್ರೂಪ್ಸ್ ಅಂಗಸಂಸ್ಥೆಯಾದ ಡಿಫೆನ್ಸ್ ಸಿಸ್ಟಮ್, ಆತ್ಮನಿರ್ಬರ್ ಭಾರತದ ಅಡಿಯಲ್ಲಿ ನಮ್ಮೆಲ್ಲರನ್ನು ಕಾಯುವ ಸೈನಿಕರಿಗೆ ನೆರವಾಗುವಂತೆ 1300 ಲಘು ಶಸ್ತ್ರಾಸ್ತ್ರ ವಾಹನಗಳನ್ನು ತಯಾರಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೌಲ್ಯ ಬರೋಬ್ಬರಿ ಸಾವಿರ ಕೋಟಿಗೂ ಹೆಚ್ಚು ಹಾಗಿದ್ದೂ, ಕೇವಲ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಗೆ ಎಲ್ಲಾ 1300 ವಾಹನಗಳು ಲಭ್ಯವಾಗಲಿದೆ ಎಂಬುದು ತಿಳಿದುಬಂದಿದೆ. ಭಾರತ ಇದೇ ರೀತಿಯ ಮತ್ತಷ್ಟು ಹೆಜ್ಜೆಗಳನ್ನು ಇಡುವ ಮೂಲಕ ವಿಶ್ವದಲ್ಲಿ ಬಲಿಷ್ಟ ಆರ್ಥಿಕತೆ ಬಳಸಿಕೊಳ್ಳಲಿ ಎಂಬುದು ನಮ್ಮ ಆಶಯ.