ಅಂಗಡಿ ರುಚಿ ಯಾಕೆ?? ಹುಣಸೆಕಾಯಿ ತೊಕ್ಕು ಹೀಗೆ ಮನೆಯಲ್ಲಿಯೇ ಮಾಡಿ, ಸಕ್ಕತ್ ರುಚಿ, ಮಾಡಲು ಸುಲಭ

ಅಂಗಡಿ ರುಚಿ ಯಾಕೆ?? ಹುಣಸೆಕಾಯಿ ತೊಕ್ಕು ಹೀಗೆ ಮನೆಯಲ್ಲಿಯೇ ಮಾಡಿ, ಸಕ್ಕತ್ ರುಚಿ, ಮಾಡಲು ಸುಲಭ

ನಮಸ್ಕಾರ ಸ್ನೇಹಿತರೇ, ಇಂದು ನಾವು ಹುಣಸೆಕಾಯಿ ತೊಕ್ಕು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹುಣಸೆಕಾಯಿ ತೊಕ್ಕು ಮಾಡಲು ಬೇಕಾಗುವ ಪದಾರ್ಥಗಳು: ಕಾಲು ಕೆಜಿ ಹುಣಸೆಕಾಯಿ, 2 ಚಮಚ ಮೆಂತ್ಯ, 2 ಚಮಚ ಎಣ್ಣೆ, 3 – 4 ಚಮಚ ಉಪ್ಪು, ಅರ್ಧ ಚಮಚ ಇಂಗು, 1 ಚಮಚ ಅರಿಶಿನ ಪುಡಿ, 15 – 20 ಹಸಿಮೆಣಸಿನಕಾಯಿ.

ಹುಣಸೆಕಾಯಿ ತೊಕ್ಕು ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ ಹುಣಸೆ ಕಾಯಿಯನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಮೆಂತ್ಯವನ್ನು ಹಾಕಿ ಕೆಂಪು ಬಣ್ಣ ತಿರುಗುವವರೆಗೂ ಫ್ರೈ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ನಂತರ ಅದೇ ಬಾಣಲಿಗೆ 2 ಚಮಚ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ನಂತರ ರುಬ್ಬಿದ ಹುಣಸೆಕಾಯಿಗೆ 3 – 4 ಚಮಚದಷ್ಟು ಉಪ್ಪು, ಅರ್ಧ ಚಮಚ ಇಂಗು, 1 ಚಮಚ ಅರಿಶಿನ ಪುಡಿ, ಮುರಿದ ಹಸಿಮೆಣಸಿನಕಾಯಿ ಹುರಿದು ಪುಡಿ ಮಾಡಿದ 2 ಚಮಚ ಮೆಂತ್ಯ ಪುಡಿ ಹಾಗೂ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿ ಕೊಂಡರೆ ಹುಣಸೆಕಾಯಿ ತೊಕ್ಕು ಸವಿಯಲು ಸಿದ್ದ .ಇದನ್ನು ಫ್ರಿಜ್ನಲ್ಲಿ ಎರಡು ವರ್ಷದವರೆಗೆ ಸ್ಟೋರ್ ಮಾಡಬಹುದು.