ಮತ್ತೊಮ್ಮೆ ಕನ್ನಡ ಸಿನಿಮಾಗೆ ಕೈ ಕೊಟ್ಟ ರಶ್ಮಿಕ ! ರೊಚ್ಚಿಗೆದ್ದ ಧ್ರುವ ಅಭಿಮಾನಿಗಳು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ರವರು ಕನ್ನಡ ಚಿತ್ರರಂಗದಲ್ಲಿ ಮೊದಲ ಚಿತ್ರದಲ್ಲಿಯೇ ಯಶಸ್ಸು ಗಳಿಸಿದ ಬಳಿಕ ತೆಲುಗು ಚಿತ್ರರಂಗದಲ್ಲಿಯೂ ಕೂಡ ಬಹು ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಇದೀಗ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಎಲ್ಲಾ ಸಿದ್ಧತೆ ನಡೆಸಿರುವ ರಶ್ಮಿಕ ಮಂದನ್ನ ರವರು ಇತ್ತೀಚೆಗೆ ಬಾಲಿವುಡ್ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಹೀಗಿರುವಾಗ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ನಲ್ಲಿ ರಶ್ಮಿಕ ರವರ ಹೆಸರು ಕೇಳಿ ಬರುತ್ತದೆ.

ಆದರೆ ಹೀಗೆ ಎಲ್ಲಾ ಭಾಷೆಗಳಲ್ಲಿಯೂ ನಟಿಸುತ್ತಿರುವ ನಟಿ ಮೇಲೆ ಪ್ರತಿಯೊಂದು ಭಾಷೆಗೂ ಕೂಡ ಸಮಾನವಾದ ಆದ್ಯತೆ ನೀಡಬೇಕಾಗುತ್ತದೆ, ಚಿತ್ರ ಒಪ್ಪಿಕೊಂಡ ಮೇಲೆ ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಆದ್ಯತೆ ನೀಡಿ ಚಿತ್ರವನ್ನು ಗೆಲ್ಲಿಸುವ ಕೇವಲ ನಟ-ನಟಿಯರಿಗೆ ಅಷ್ಟೇ ಅಲ್ಲ ಆ ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಇರುತ್ತದೆ. ಇದನ್ನು ರಶ್ಮಿಕ ಮಂದನ್ನ ರವರು ಇದನ್ನು ಮರೆತಂತೆ ಕಾಣುತ್ತದೆ, ಇತರ ಭಾಷೆಗಳ ಚಿತ್ರಗಳು ಅಥವಾ ಕೇವಲ ಒಂದು ಆಲ್ಬಮ್ ಸಾಂಗ್ ಆಗಲಿ ರಶ್ಮಿಕ ಮಂದನ್ನ ರವರು ಚಿತ್ರರಂಗಗಳ ಆಚರಣೆಯಂತೆ ಪ್ರಮೋಷನ್ ನಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ಇದು ಕೇವಲ ಇತರ ಭಾಷೆಗಳಿಗೆ ಮಾತ್ರ ಸೀಮಿತವಾಗಿದೆ. ಮೊದಲಿನಿಂದಲೂ ಕನ್ನಡ ಹಾಗೂ ಕನ್ನಡ ಚಿತ್ರರಂಗವೆಂದರೆ ನಿರ್ಲಕ್ಷಿಸುವ ರೀತಿ ಕೆಲಸ ಮಾಡುತ್ತಿರುವ ರಶ್ಮಿಕ ಮಂದನ್ನ ರವರು ಇದೀಗ ಪೊಗರು ಚಿತ್ರದ ವಿಷಯದಲ್ಲಿಯೂ ಕೂಡ ಅದೇ ರೀತಿಯಲ್ಲಿ ನಡೆದು ಕೊಂಡಿದ್ದಾರೆ,

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಿನಿಮಾ ಪ್ರಮೋಷನ್ ಗಾಗಿ ಹೈದರಾಬಾದ್ನಿಂದ ಬಂದಿದ್ದ ರಶ್ಮಿಕ ಮಂದನ್ನ ರವರು ಕೇವಲ ತಮ್ಮ ಬಗ್ಗೆ ತಾವು ಮಾತನಾಡಿ ನಾನು ಕರ್ನಾಟಕದ ಕ್ರಶ್ ನಾನು ನ್ಯಾಷನಲ್ ಕ್ರಶ್ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿ ಸಿನಿಮಾ ಕುರಿತು ಮಾತೇ ಆಡಿರಲಿಲ್ಲ, ಸರಿ ಅಷ್ಟು ಬಿಡೋಣ ಎಂದರೆ ಇದೀಗ ಸಿನಿಮಾ ಬಿಡುಗಡೆಯಾದ ದಿನವೂ ಕೂಡ ಶಾಸ್ತ್ರಕ್ಕಾಗಲಿ ಒಂದು ಪೋಸ್ಟನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನೋಡಿ ಎಂದು ಪೋಸ್ಟ್ ಮಾಡಿಲ್ಲ, ಯಾವುದು ಒಂದು ಬಾಲಿವುಡ್ ಸಾಂಗ್ ರಿಲೀಸ್ ಆಗುತ್ತಿದೆ ಎಂದರೆ ಪರಿಪರಿಯಾಗಿ ಕೆಲವೇ ಕೆಲವು ದಿನಗಳ ಹಿಂದಷ್ಟೇ ಬೇಡಿಕೊಂಡು ಅಭಿಮಾನಿಗಳಲ್ಲಿ ಈ ಹಾಡನ್ನು ನೋಡಿ ಈ ಹಾಡನ್ನು ನೋಡಿ ಎಂದು ಬೇಡಿಕೊಂಡ ರಶ್ಮಿಕ ಮಂದನ ರವರು ಬಹು ನಿರೀಕ್ಷೆಯ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೂ ಕೂಡ ಒಂದು ಪೋಸ್ಟ್ ಕೂಡ ಹಾಕಿಲ್ಲ, ಇದು ಧ್ರುವ ಸರ್ಜಾ ಅಭಿಮಾನಿಗಳ ಕಣ್ಣನ್ನು ಕೆಂಪಾಗಿಸಿದೆ. ಇವರ ಈ ನಡೆಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ಕಳಿಸುವುದನ್ನು ಮರೆಯಬೇಡಿ

Facebook Comments

Post Author: Ravi Yadav