ಮೊದಲ ದಿನ ಪೊಗರು ಚಿತ್ರ ಗಳಿಸಿದ್ದು ಎಷ್ಟು ಗೊತ್ತಾ?? ಯಾವ ರಾಜ್ಯದಲ್ಲಿ ಎಷ್ಟು ಕೋಟಿ ಗೊತ್ತಾ??

ಮೊದಲ ದಿನ ಪೊಗರು ಚಿತ್ರ ಗಳಿಸಿದ್ದು ಎಷ್ಟು ಗೊತ್ತಾ?? ಯಾವ ರಾಜ್ಯದಲ್ಲಿ ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಚಿತ್ರ ಮಂದಿರಗಳಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರು ತೆರಳಲು ಅನುಮತಿ ನೀಡಿದ ಬಳಿಕ ಬಹು ನಿರೀಕ್ಷಿತ ಚಿತ್ರಗಳು ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ರಾಬರ್ಟ್ ಸಿನಿಮಾ ಕೂಡ ಬಿಡುಗಡೆಯಾಗಲಿದೆ ಹಾಗೂ ರಿಷಬ್ ಶೆಟ್ಟಿ ರವರ ಸಿನಿಮಾ ಹೀರೋ ಕೂಡ ರಿಲೀಸ್ ಆಗಲಿದೆ. ಆದರೆ ಹೀಗೆ ಒಂದರ ಮೇಲೆ ಒಂದರಂತೆ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಶೇಕಡ ನೂರರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೂ ಕೂಡ ಪ್ರೇಕ್ಷಕರು ಥಿಯೇಟರ್ಗೆ ಬರುತ್ತಾರೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿತು

ಇದರ ಕುರಿತು ಗಾಂಧಿ ನಗರದ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಪೊಗರು ಚಿತ್ರ ತಂಡ ಮಾತ್ರ ಯಾವುದೇ ಕಾರಣಕ್ಕೂ ಮುಂದೂಡಲು ನಿರ್ಧಾರ ಮಾಡದೇ ಚಿತ್ರದ ಮೇಲೆ ನಂಬಿಕೆ ಇಟ್ಟು ನಾಲ್ಕು ವರ್ಷದ ನಿರೀಕ್ಷೆಯನ್ನು ಮುಗಿಸಿ ಚಿತ್ರವನ್ನು ಬಿಡುಗಡೆ ಮಾಡಿತು. ಅಂದುಕೊಂಡಂತೆ ಚಿತ್ರವು ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿತ್ತು, ಈಗ ಬಹುತೇಕ ಚಿತ್ರಮಂದಿರಗಳು ತುಂಬಿತುಳುಕುತ್ತಿವೆ.

ಇನ್ನು ಹೀಗೆ ಶೇಕಡ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿರುವ ಕಾರಣ ಎಲ್ಲ ಚಿತ್ರ ಮಂದಿರಗಳು ಸೇರಿ ಪೊಗರು ಚಿತ್ರವು ಮೊದಲನೇ ದಿನವೇ ಬಾಕ್ಸಾಫೀಸ್ ನಲ್ಲಿ ದೂಳನ್ನು ಎಬ್ಬಿಸಿದೆ. ಹೌದು ಸ್ನೇಹಿತರೇ ಮೊದಲ ದಿನವೇ ಪೊಗರು ಚಿತ್ರದ ಕರ್ನಾಟಕ ರಾಜ್ಯದಲ್ಲಿ 8.70 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 1.35 ಕೋಟಿ ರೂ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿದೆ. ಅಂದರೆ ಒಟ್ಟಾರೆಯಾಗಿ 10.05 ಕೋಟಿ ರೂಪಾಯಿಗಳನ್ನು ಪೊಗರು ಚಿತ್ರ ಮೊದಲನೇ ದಿನ ಬಾಕ್ಸಾಫೀಸ್ ಗಳಿಕೆ ಮಾಡಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ