ಕೊಬ್ಬರಿ ಸಾರು ದಿಡೀರ್ ಅಂತ ಮಾಡಿದ್ರು ಏನ್ ರುಚಿ ಗೊತ್ತಾ?? ಹೇಗೆ ಮಾಡುವುದು ಗೊತ್ತೇ??

ಕೊಬ್ಬರಿ ಸಾರು ದಿಡೀರ್ ಅಂತ ಮಾಡಿದ್ರು ಏನ್ ರುಚಿ ಗೊತ್ತಾ?? ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸದೆ ಮಾಡ ಬಹುದಾದ ಕೊಬ್ಬರಿ ಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕೊಬ್ಬರಿ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಒಪ್ಪು ಕೊಬ್ಬರಿ, 1 ಚಮಚ ನೆನೆಸಿದ ಅಕ್ಕಿ, ಅರ್ಧ ಚಮಚ ತಿಳಿಸಾರಿನ ಪುಡಿ, ಅರ್ಧ ಚಮಚ ಸಾಂಬಾರ್ ಪುಡಿ, 1 ಚಮಚ ಅಚ್ಚ ಖಾರದ ಪುಡಿ, ಅರ್ಧ ನಿಂಬೆಹಣ್ಣಿನ ಗಾತ್ರದ ನೆನೆಸಿದ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 4 ಒಣಮೆಣಸಿನಕಾಯಿ, ಸ್ವಲ್ಪ ಸಾಸಿವೆ, ಸ್ವಲ್ಪ ಮೆಂತ್ಯ, ಸ್ವಲ್ಪ ಜೀರಿಗೆ, ಎಣ್ಣೆ, ಸ್ವಲ್ಪ ಇಂಗು, ಸ್ವಲ್ಪ ಸಕ್ಕರೆ.

ಕೊಬ್ಬರಿ ಸಾರು ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ತುರಿದುಕೊಂಡ ಕೊಬ್ಬರಿ, ತಿಳಿಸಾರಿನ ಪುಡಿ, ಸಾಂಬಾರ್ ಪುಡಿ, ಅಚ್ಚಖಾರದ ಪುಡಿ, ನೆನೆಸಿದ ಅಕ್ಕಿ, ನೆನೆಸಿದ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಮೆಂತ್ಯ, ಜೀರಿಗೆ, ಸ್ವಲ್ಪ ಕರಿಬೇವು, ಒಣ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಇಂಗನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣ, 2 ಲೋಟ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಸ್ವಲ್ಪ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡರೆ ಕೊಬ್ಬರಿ ಸಾರು ಸವಿಯಲು ಸಿದ್ಧ.