ಬಿಡುಗಡೆಗೊಂಡ ಟಿಆರ್ಪಿ ಲಿಸ್ಟ್ ! ಈ ವಾರದ ಟಾಪ್ 10 ಧಾರಾವಾಹಿಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಗುರುವಾರ ಅಂದರೆ ಕಳೆದ ವಾರದ ಟಿಆರ್ಪಿ ಲಿಸ್ಟ್ ಬಿಡುಗಡೆಯಾಗುವ ದಿನ, ಅಂದು ಕೊಂಡಂತೆ ಸರಿಯಾದ ಸಮಯಕ್ಕೆ ಟಿಆರ್ಪಿ ಲಿಸ್ಟ್ ಬಿಡುಗಡೆ ಯಾಗಿದ್ದು ಕೆಲವೊಂದು ಮಹತ್ವದ ಬದಲಾವಣೆಗಳು ನಡೆದು ಧಾರವಾಹಿಗಳು ಪ್ರೇಕ್ಷಕರನ್ನು ಹೆಚ್ಚಿಸಿಕೊಂಡು ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿವೆ. ಇಂದಿನ ಲೇಖನದಲ್ಲಿ ನಾವು ಟಾಪ್ 10 ಧಾರಾವಾಹಿಗಳ ಟಿಆರ್ಪಿ ಆಧಾರದ ಮೇರೆಗೆ ಸ್ಥಾನಗಳನ್ನು ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ಟಿಆರ್ಪಿ ಲಿಸ್ಟ್ನಲ್ಲಿ 11ನೇ ಸ್ಥಾನದಲ್ಲಿ ನನ್ನರಸಿ ರಾಧೆ ಧಾರಾವಾಹಿ ಸ್ಥಾನ ಪಡೆದು ಕೊಂಡಿದೆ, ಇನ್ನುಳಿದಂತೆ ಹತ್ತನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ವಾಗುತ್ತಿರುವ ಕಮಲಿ, ಒಂಬತ್ತನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಗೀತ ದಾರವಾಹಿ ಸ್ಥಾನ ಪಡೆದು ಕೊಂಡರೇ, ಎಂಟನೇ ಸ್ಥಾನವನ್ನು ಕನ್ನಡತಿ ಹಾಗೂ ಗಿಣಿರಾಮ ಧಾರವಾಹಿಗಳು ಹಂಚಿ ಕೊಂಡಿದೆ.

ಇನ್ನುಳಿದಂತೆ ಏಳನೇ ಸ್ಥಾನದಲ್ಲಿ ಮುದ್ದುಲಕ್ಷ್ಮಿ, 6 ನೇ ಸ್ಥಾನದಲ್ಲಿ ಮಂಗಳ ಗೌರಿ ಮದುವೆ, ಐದನೇ ಸ್ಥಾನದಲ್ಲಿ ಪಾರು ಧಾರವಾಹಿ ಸ್ಥಾನ ಪಡೆದು ಕೊಂಡರೇ, ನಾಗಿಣಿ ಭಾಗ-2 ಧಾರಾವಾಹಿ ನಾಲ್ಕನೇ ಸ್ಥಾನ, ಜೊತೆ ಜೊತೆಯಲಿ ದಾರವಾಹಿಯು ಮೂರನೇ ಸ್ಥಾನ ಪಡೆದು ಕೊಂಡಿದೆ. ಇನ್ನು ಕಳೆದ ವಾರಗಳ ಟ್ರೆಂಡಿಂಗ್ ನಂತೆ ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡರೇ ಸ’ತ್ಯ ಧಾರವಾಹಿಯ ಮೊದಲನೆ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಈ ಟಾಪ್ 10 ಧಾರಾವಾಹಿಗಳ ಟಿಆರ್ಪಿ ಲಿಸ್ಟ್ ಹೀಗಿದ್ದು, ಈ ಕುರಿತು ನಿಮ್ಮ ಅಭಿಪ್ರಾಯ ಗಳನ್ನೂ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Facebook Comments

Post Author: Ravi Yadav