ಸುಮಲತಾರವರ ತಂದೆ ಕೂಡ ಖ್ಯಾತ ಬೇಡಿಕೆಯುಳ್ಳ ಕಲಾವಿದ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ವರ್ಣ ರಂಜಿತ ಪ್ರತ್ಯೇಕ ಅಧ್ಯಯ ಗಳನ್ನು ಹೊಂದಿರುವ ಮಂಡ್ಯದ ಗಂಡು ಎಂದು ಖ್ಯಾತಿ ಪಡೆದು ಕೊಂಡಿದ್ದ ರೆಬಲ್ ಸ್ಟಾರ್ ಅಂಬರೀಶ್ ರವರ ಪತ್ನಿ ಸುಮಲತಾರವರ ಕುರಿತು ಇಂದು ನಿಮಗೆ ಒಂದು ಆಸಕ್ತಿದಾಯಕ ವಿಷಯವನ್ನು ತಿಳಿಸುತ್ತೇವೆ. ಸುಮಲತಾ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ನಟಿಸುವ ಮೂಲಕ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದರು.

ಮೂಲತಃ ಆಂಧ್ರ ಪ್ರದೇಶದವರಾದ ಸುಮಲತಾ ರವರ ಕೌಟುಂಬಿಕ ವಿಚಾರದ ಬಗ್ಗೆಯೇ ನಾವು ಮಾತನಾಡುವುದಾದರೇ ತಂದೆ, ತಾಯಿಯ ಹೆಸರು ಹಾಗೂ ಅವರ ಊರಿನ ಹೆಸರು ಬಿಟ್ಟರೆ ಇನ್ಯಾವುದೇ ಹೆಚ್ಚಿನ ಮಾಹಿತಿಗಳು ಸುಲಭವಾಗಿ ಸಿಗುವುದಿಲ್ಲ. ಆದರೆ ಕುತೂಹಲಕಾರಿ ವಿಷಯ ಏನೆಂದರೆ ದಕ್ಷಿಣ ಭಾರತ ಚಿತ್ರರಂಗ ಕಂಡ ಅಪರೂಪದ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ವಿಶೇಷ ವ್ಯಕ್ತಿಗಳಲ್ಲಿ ಸುಮಲತಾರವರ ತಂದೆ ಸ್ಥಾನ ಪಡೆದುಕೊಂಡಿದ್ದಾರೆ.

ಹೌದು ಸ್ನೇಹಿತರೇ ತಮಿಳು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಸುಮಲತಾರವರ ತಂದೆ ಮದನ್ ಮೋಹನ್ ರವರು ಅಂದಿನ ಕಾಲದಲ್ಲಿ ಸ್ಪೆಷಲ್ ಎಫೆಕ್ಟ್ ಅಂದರೆ ಹಿಂದಿನ ಕಾಲದಲ್ಲಿ vfx ರೀತಿಯ ಕೆಲಸಗಳನ್ನು ಮಾಡುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಮದನ್ ಮೋಹನ್ ರವರು ಯುಕೆ ದೇಶದಲ್ಲಿ ತರಬೇತಿ ಪಡೆದುಕೊಂಡು ಭಾರತದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾರಣ ಬಹಳ ಬೇಡಿಕೆಯುಳ್ಳ ವ್ಯಕ್ತಿಯಾಗಿದ್ದರು. ಹಲವಾರು ಚಿತ್ರಗಳಲ್ಲಿ ಇವರು ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಹುಬೇಡಿಕೆಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

Post Author: Ravi Yadav