ನನ್ನರಸಿ ರಾಧೆ ಅಗಸ್ತ್ಯ ನಿಜ ಜೀವನದಲ್ಲಿ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಸೆಲ್ಯೂಟ್ ಮಾಡಬೇಕು ಎನಿಸುತ್ತದೆ. ಯಾಕೆ ಗೊತ್ತೇ?

ನನ್ನರಸಿ ರಾಧೆ ಅಗಸ್ತ್ಯ ನಿಜ ಜೀವನದಲ್ಲಿ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಸೆಲ್ಯೂಟ್ ಮಾಡಬೇಕು ಎನಿಸುತ್ತದೆ. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿ ಬಹಳ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ತಾಯಿಂದ ದೂರವಾಗಿರುವ ಒಂದು ಮಗನ ಕಥೆಯನ್ನು ಆಧಾರವಾಗಿಟ್ಟುಕೊಂಡು ನನ್ನರಸಿ ರಾಧೆ ಮೂಡಿಬರುತ್ತಿರುವುದು ಅಭಿಮಾನಿಗಳ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಈ ದಾರವಾಹಿಯಲ್ಲಿ ನಟನೆ ಮಾಡಿರುವ ನಾಯಕ ನಟ ಹಾಗೂ ನಾಯಕಿ ನಟಿ ಕೂಡ ಜನರ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ.

ಟಿಆರ್ಪಿ ಲಿಸ್ಟಿನಲ್ಲಿಯು ಕೂಡ ನನ್ನರಸಿ ರಾಧೆ ಧಾರಾವಾಹಿ ಉತ್ತಮ ಸಾಧನೆ ಮಾಡುತ್ತಿದೆ. ಇನ್ನು ಈ ಧಾರವಾಹಿಯಲ್ಲಿ ನಟನೆ ಮಾಡಿರುವ ನಟ ಅಗಸ್ತ್ಯ ಪಾತ್ರದಾರಿ ಅಭಿನವ್ ವಿಶ್ವನಾಥನ್ ರವರು ಕೂಡ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ವಿವಿಧ ಷೇಡ್ ಗಳು ಇರುವ ಪಾತ್ರದಲ್ಲಿ ನಟನೆ ಮಾಡಿ ಅಭಿನವ್ ವಿಶ್ವನಾಥನ್ ರವರು ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಈ ದಾರವಾಹಿಯಲ್ಲಿ ನಟನೆ ಮಾಡುವುದಕ್ಕೂ ಮುನ್ನ ರಂಗಭೂಮಿಯಲ್ಲಿ ಸಕ್ರಿಯವಾಗಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ ಅಭಿನವ್ ವಿಶ್ವನಾಥನ್ ಅವರು ಹಾಗೂ ಅವರ ಕುಟುಂಬ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಸಲ್ಯೂಟ್ ಮಾಡಬೇಕು ಅನ್ನಿಸುತ್ತದೆ.

ಹೌದು ಸ್ನೇಹಿತರೇ ಅಭಿನವ್ ರವರ ತಂದೆ ಎಲ್ಲರಿಗೂ ಸಹಾಯ ಮಾಡಬೇಕು ಹಾಗೂ ತಮ್ಮಲ್ಲಿರುವುದನ್ನು ಇತರರಿಗೆ ಹಂಚಿ ಜೀವನ ನಡೆಸಬೇಕು ಎಂಬ ತತ್ವವನ್ನು ಹೊಂದಿದ್ದರು, ಇವರ ತಂದೆಯ ಈ ತತ್ವವನ್ನು ಅನುಸರಿಸುತ್ತಿರುವ ಇಡೀ ಕುಟುಂಬ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಾಗೂ ನೆಲಮಂಗಲದಲ್ಲಿ ಎರಡು ವೃದ್ದಾಶ್ರಮ ವನ್ನು ನಿರ್ಮಿಸಿ ಅಲ್ಲಿ ಅಂಗವಿಕಲರಿಗೆ ಹಾಗೂ ಅಸಹಾಯಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುತ್ತಾ ಊಟ, ವಸತಿ, ಶಿಕ್ಷಣ, ಚಿಕಿತ್ಸೆ ಎಲ್ಲವನ್ನೂ ಉಚಿತವಾಗಿ ನೀಡುತ್ತಾ ಸಾಮಾಜಿಕ ಕಳಕಳಿ ಮರೆಯುತ್ತಿದ್ದಾರೆ. ಇದರ ಕುರಿತುಅಭಿನವ್ ವಿಶ್ವನಾಥನ್ ಅವರನ್ನು ಪ್ರಶ್ನಿಸಿದಾಗ ನನಗೆ ವೃದ್ದಾಶ್ರಮಗಳಿಗೆ ಭೇಟಿ ನೀಡಿ ಸಮಯ ಕಳೆಯುವುದು ಎಂದರೆ ಬಹಳ ಇಷ್ಟವಾದ ಕೆಲಸ, ಅಲ್ಲಿ ಇರುವವರ ಕಣ್ಣಲ್ಲಿ ನಾವು ಪ್ರೀತಿಯನ್ನು ಕಾಣಬಹುದು ಮತ್ಯಾವುದೇ ಇತರ ಭಾವನೆ ಅಲ್ಲಿ ಇರುವುದೇ ಇಲ್ಲ, ಅಲ್ಲಿ ಹೋದರೆ ನೆಮ್ಮದಿ ಸಿಗುತ್ತದೆ, ನಾನು ಇಲ್ಲಿವರೆಗೂ ನನ್ನ ಕುಟುಂಬ ನಡೆದು ಬಂದ ಹಾದಿಯಲ್ಲಿ ನಡೆಯಲು ಇಚ್ಚಿಸುತ್ತೇನೆ ಪರೋಪಕಾರಿ ಜೀವನವನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕೊಂಡಿದ್ದೇನೆ ಎಂದು ಉತ್ತರ ನೀಡುತ್ತಾರೆ.