ಇಡ್ಲಿ ಮೃದುವಾಗಿ ಬರುತ್ತಿಲ್ಲವೇ?? ಮನೆಯಲ್ಲಿಯೇ ಮಾಡಿ ಅತಿ ಮೃದುವಾದ ಇಡ್ಲಿ. ಹೇಗೆ ಗೊತ್ತೇ??

ಇಡ್ಲಿ ಮೃದುವಾಗಿ ಬರುತ್ತಿಲ್ಲವೇ?? ಮನೆಯಲ್ಲಿಯೇ ಮಾಡಿ ಅತಿ ಮೃದುವಾದ ಇಡ್ಲಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮೃದುವಾದ ಇಡ್ಲಿ ಮಾಡುವ ರೆಸಿಪಿಯನ್ನು ನಿಮಗೆ ತಿಳಿಸಲಾಗಿದೆ. ಮೃದುವಾದ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು: 4 ಲೋಟ ಇಡ್ಲಿ ಅಕ್ಕಿ, 1 ಲೋಟ ಗುಂಡಗಿರುವ ಉದ್ದಿನಬೇಳೆ, ಅರ್ಧ ಚಮಚ ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು.

ಮೃದುವಾದ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಅಕ್ಕಿಯನ್ನು ಹಾಕಿ 4 – 5 ಬಾರಿ ಚೆನ್ನಾಗಿ ತೊಳೆದು 4 – 5 ಗಂಟೆಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಉದ್ದಿನಬೇಳೆ, ಅರ್ಧ ಚಮಚ ಮೆಂತ್ಯವನ್ನು ಹಾಕಿ 4 – 5 ಬಾರಿ ನೀರಿನಿಂದ ತೊಳೆದು ಅದನ್ನು ಸಹ 4 – 5 ಗಂಟೆಗಳ ಕಾಲ ನೆನೆಯಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಅದೇ ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕೈನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8 – 10 ಗಂಟೆಗಳ ಕಾಲ ನೆನೆಯಲು ಬಿಡಿ. 10 ಗಂಟೆಗಳ ನಂತರ ಹಿಟ್ಟನ್ನು 4 – 5 ಬಾರಿ ಮತ್ತೆ ಮಿಕ್ಸ್ ಮಾಡಿದರೆ ಇಡ್ಲಿ ಹಿಟ್ಟು ಸಿದ್ಧವಾಗುತ್ತದೆ. ನಂತರ ಇಡ್ಲಿ ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ನೀರನ್ನು ಹಾಕಿ ಗ್ಯಾಸ್ ಮೇಲೆ ನೀರು ಕಾಯಲು ಇಡಿ. ನಂತರ ಅದರ ಪ್ಲೇಟಿಗೆ ಕಾಟನ್ ಬಟ್ಟೆಯನ್ನು ಹಾಕಿಕೊಳ್ಳಿ. ನಂತರ ಕಾಟನ್ ಬಟ್ಟೆ ನೆನೆಯುವಷ್ಟು ಸ್ವಲ್ಪ ನೀರನ್ನು ಹಾಕಿಕೊಳ್ಳಿ. ನಂತರ ಹಿಟ್ಟನ್ನು ಹಾಕಿ ಇಡ್ಲಿ ಕುಕ್ಕರ್ ನಲ್ಲಿ 7 – 8 ನಿಮಿಷಗಳ ಕಾಲ ಬೇಯಿಸಿಕೊಂಡರೆ ಮೃದುವಾದ ಇಡ್ಲಿ ಸವಿಯಲು ಸಿದ್ದ.