ಹಳ್ಳಿ ಮೇಷ್ಟ್ರು ಸಿನಿಮಾದ ನಟಿ ಫರೀನಾ ಹೇಗಿದ್ದಾರೆ ಗೊತ್ತಾ ? ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದಾರೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಚಿತ್ರಗಳಲ್ಲಿ ಒಂದಾಗಿರುವ ಹಳ್ಳಿ ಮೇಷ್ಟ್ರು ಸಿನಿಮಾವನ್ನು ಖಂಡಿತ ನೀವೆಲ್ಲರೂ ಮರೆತಿರಲು ಸಾಧ್ಯವೇ ಇಲ್ಲ. ಬಹಳ ಅದ್ಭುತವಾಗಿ ಮೂಡಿ ಬಂದ ಹಳ್ಳಿ ಮೇಷ್ಟ್ರು ಅಂದಿನ ಕಾಲದಲ್ಲಿಯೂ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿ ಜನರನ್ನು ಥಿಯೇಟರ್ ಅಥವಾ ಟೆಂಟುಗಳ ಸೆಳೆದಿತ್ತು. ಈ ಚಿತ್ರದ ಮೂಲಕ ರವಿಚಂದ್ರನ್ ಅವರು ಮತ್ತೊಮ್ಮೆ ಯಶಸ್ಸಿನ ಹಾದಿಯಲ್ಲಿ ಮತ್ತಷ್ಟು ಮುಂದೆ ಹೋದರು. ಅದೇ ಕಾರಣಕ್ಕಾಗಿ ಹಳ್ಳಿಮೇಷ್ಟ್ರು ಕನ್ನಡದ ಯಶಸ್ಸಿನ ಚಿತ್ರಗಳಲ್ಲಿ ಒಂದಾಗಿದೆ.

ಇನ್ನು ಈ ಸಿನಿಮಾದಲ್ಲಿ ನಟನೆ ಮಾಡಿರುವ ನಟಿ ಫರೀನಾ ಅವರನ್ನು ಬಹುಶಹ ನೆನಪಿನಲ್ಲಿ ಇಟ್ಟು ಕೊಂಡಿರಬಹುದು, ಈ ಸಿನಿಮಾದಲ್ಲಿ ನಾಯಕಿನಟಿ ಪಾತ್ರವನ್ನು ನಿರ್ವಹಣೆ ಮಾಡಿರುವ ಫರೀನಾ ರವರು ಥೇಟ್ ಮಾಧುರಿ ದೀಕ್ಷಿತ್ ಅಂತ ಕಾಣುತ್ತಾರೆ ಎಂಬ ಕಾರಣಕ್ಕಾಗಿ ರವಿಚಂದ್ರನ್ ಸಿನಿಮಾ ಆಯ್ಕೆ ಮಾಡಿಕೊಂಡರು ಎಂದು ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಹಿಂದಿಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಫೇಮಸ್ ಆಗಿದ್ದ ಫರೀನಾ ಅವರು ಕನ್ನಡದಲ್ಲಿ ನೈಸರ್ಗಿಕವಾಗಿ ಹಳ್ಳಿ ಹುಡುಗಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಣೆ ಮಾಡಿದರು.

ಇದಾದ ಬಳಿಕ ಬಂಪರ್ ಆಫರ್ ಪಡೆದು ಕೊಂಡ ಫರೀನಾ ಅವರು ಹಳ್ಳಿಮೇಷ್ಟ್ರು ಚಿತ್ರದ ಬಳಿಕ ವಿಷ್ಣುವರ್ಧನ್ ರವರ ಜೊತೆ ರಾಯರು ಬಂದರು ಮಾವನ ಮನೆಗೆ ಎನ್ನುವ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಇನ್ನು ಇದಾದ ಬಳಿಕ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿಯು ಕೂಡ ನಟಿಸಿದ ಫರೀನಾ ರವರು ಒಟ್ಟಾರೆಯಾಗಿ ಹಿಂದಿ ತಮಿಳು ತೆಲುಗು ಕನ್ನಡ ಚಿತ್ರರಂಗದಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ, ಮೂಲತಹ ತಮಿಳಿ ನವರಾದ ಫರೀನಾ ರವರು ಭಾರತದ ಮಾಜಿ ಕ್ರಿಕೆಟರ್ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾಗಿ ಇದೀಗ ದೆಹಲಿಯಲ್ಲಿ ಕುಟುಂಬ ಸಮೇತ ಅಂದರೆ ಪತಿ ಹಾಗೂ ರಾಹುಲ್ ಮತ್ತು ಮಾನವಷ್ ಎಂಬ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದಾರೆ.

Facebook Comments

Post Author: Ravi Yadav