ಕೇವಲ ಒಂದು ಕಪ್ ಗೋದಿ ಹಿಟ್ಟಿನಲ್ಲಿಯೂ ತಯಾರು ಮಾಡಬಹುದಾದ ಮಸಾಲಾ ಚಪಾತಿ. ಹೇಗೆ ಗೊತ್ತೇ??

ಕೇವಲ ಒಂದು ಕಪ್ ಗೋದಿ ಹಿಟ್ಟಿನಲ್ಲಿಯೂ ತಯಾರು ಮಾಡಬಹುದಾದ ಮಸಾಲಾ ಚಪಾತಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಸಾಲ ಚಪಾತಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಸಾಲ ಚಪಾತಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಗೋದಿ ಹಿಟ್ಟು, 1 ಕ್ಯಾರೆಟ್, ಅರ್ಧ ಇಂಚು ಹಸಿಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ,4 – 5 ಹಸಿಮೆಣಸಿನಕಾಯಿ, ಬೇಯಿಸಿ ಸಿಪ್ಪೆ ತೆಗೆದ 2 ಸಣ್ಣ ಆಲೂಗೆಡ್ಡೆ, 1 ಈರುಳ್ಳಿ, 2 ಚಮಚ ಮೊಸರು, 1 ಚಮಚ ಜೀರಿಗೆ, ಅರ್ಧ ಚಮಚ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಬಿಳಿ ಎಳ್ಳು, ಅರ್ಧ ಚಮಚ ಅರಿಶಿನ ಪುಡಿ, ಅರ್ಧ ಚಮಚ ಗರಂ ಮಸಾಲ, ಸ್ವಲ್ಪ ಎಣ್ಣೆ.

ಮಸಾಲ ಚಪಾತಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲು ಗೋದಿ ಹಿಟ್ಟು, ತುರಿದ ಕ್ಯಾರೆಟ್, ಸಣ್ಣಗೆ ಹಚ್ಚಿದ ಶುಂಠಿ, ಸಣ್ಣಗೆ ಹಚ್ಚಿದ ಪುದೀನ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಸ್ಮ್ಯಾಶ್ ಮಾಡಿದ ಆಲೂಗೆಡ್ಡೆ, ಸಣ್ಣಗೆ ಹಚ್ಚಿದ ಈರುಳ್ಳಿ, 2 ಚಮಚ ಮೊಸರು,1 ಚಮಚ ಜೀರಿಗೆ, ಅರ್ಧ ಚಮಚ ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಬಿಳಿ ಎಳ್ಳು, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಗರಂ ಮಸಾಲ, 1 ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಹಿಟ್ಟಿನ ಮೇಲೆ 1 ಚಮಚದಷ್ಟು ಎಣ್ಣೆಯನ್ನು ಸವರಿ ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ. ಅರ್ಧ ಗಂಟೆಗಳ ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಣ ಗೋಧಿ ಹಿಟ್ಟನ್ನು ಬಳಸಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ. ನಂತರ ಮೇಲೆ ಹೆಂಚನ್ನು ಇಟ್ಟು ಕಾಯಲು ಬಿಡಿ. ಹೆಂಚು ಕಾದ ನಂತರ ಚಪಾತಿಯನ್ನು ಹಾಕಿಕೊಳ್ಳಿ. ಕೊನೆಯದಾಗಿ ಚಪಾತಿಗೆ ಎರಡು ಬದಿಯಲ್ಲಿ ಎಣ್ಣೆಯನ್ನು ಸವರಿ ಬೇಯಿಸಿಕೊಂಡರೆ ಮಸಾಲ ಚಪಾತಿ ಸವಿಯಲು ಸಿದ್ಧ.