ಕಿರುತೆರೆಯಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಮುಂದಾದ ಅಗ್ನಿಸಾಕ್ಷಿ ಅಂಜಲಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಯಲ್ಲಿ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿ ಅಭಿಮಾನಿಗಳ ಫೇವರೆಟ್ ಆಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ನಟ ಸಿದ್ದಾರ್ಥ್ ರವರ ತಂಗಿ ಅಂಜಲಿಯ ಪಾತ್ರದಲ್ಲಿ ನಟನೆ ಮಾಡಿದ್ದ ಸುಕೃತ ನಾಗ್ ರವರು ಕಿರುತೆರೆಯಲ್ಲಿ ಅಗ್ನಿಸಾಕ್ಷಿಯ ಮೂಲಕ ಮನೆಮಾತಾಗಿದ್ದರು.

ಬಹಳ ಉತ್ತಮವಾಗಿ ಮೂಡಿ ಬಂದಿದ್ದ ಪಾತ್ರದಲ್ಲಿ ನಟನೆ ಮಾಡಿದ್ದ ಸುಕೃತ ನಾಗ್ ರವರು ತದ ನಂತರ ಇನ್ಯಾವುದೇ ಇತರ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಮೊದಲ ಬಾರಿಗೆ ಉದಯ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಕಾದಂಬರಿ ಧಾರವಾಹಿ ಯಲ್ಲಿ ಬಾಲ ನಟಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸುಕೃತ ನಾಗ್ ರವರು ಒಟ್ಟು 20ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನು ಅಗ್ನಿಸಾಕ್ಷಿಯ ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧ ಪಡೆದುಕೊಂಡ ಇವರು ಧಾರವಾಹಿ ಮುಗಿದ ಮೇಲೆ ಕಿರುತೆರೆಯಿಂದ ಅಂತರ ಕಾಯ್ದುಕೊಂಡಿದ್ದರು.

ಆದರೆ ಇದೀಗ ಸುಕೃತ ನಾಗ್ ರವರು ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಕುರಿತು ಮಾಹಿತಿ ಕೇಳಿ ಬಂದಿದೆ. ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗುತ್ತಿರುವ ಕನ್ನಡ ಕಿರುತೆರೆಯ ಪ್ರಖ್ಯಾತ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸುಕೃತ ನಾಗರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಇವರ ಜೊತೆಗೆ ರವಿಶಂಕರ್, ಸುನಿಲ್, ಗೀತಾ ಭಾರತಿ, ಹೀಗೆ ವಿವಿಧ ಕಲಾವಿದರ ಹೆಸರು ಕೇಳಿ ಬರುತ್ತಿದ್ದು ಸುಕೃತ ನಾಗ್ ಅವರ ಹೆಸರು ಕೂಡ ಈ ಪಟ್ಟಿಗೆ ಸೇರಿಕೊಂಡಿದೆ.

Post Author: Ravi Yadav