ಬಹಳ ಸುಲಭವಾಗಿ ಶೀತಕ್ಕೆ ರಾಮಬಾಣದಂತಹ ಶುಂಠಿ ಮೆಣಸು ರಸಂ ಮಾಡುವುದು ಹೇಗೆ ಗೊತ್ತೇ?

ಬಹಳ ಸುಲಭವಾಗಿ ಶೀತಕ್ಕೆ ರಾಮಬಾಣದಂತಹ ಶುಂಠಿ ಮೆಣಸು ರಸಂ ಮಾಡುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂದು ನಾವು ಶುಂಠಿ ಮೆಣಸು ರಸಂ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಶುಂಠಿ ಮೆಣಸು ರಸಂ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ತೊಗರಿಬೇಳೆ, ಸ್ವಲ್ಪ ಕರಿಬೇವು, ಸ್ವಲ್ಪ ಅರಿಶಿನ ಪುಡಿ,ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, 2 ಟೊಮೇಟೊ, 1 ಇಂಚು ಶುಂಠಿ, 2 ಒಣಮೆಣಸಿನಕಾಯಿ, 3 ಹಸಿಮೆಣಸಿನಕಾಯಿ, ಅರ್ಧ ಚಮಚ ಕಾಳುಮೆಣಸಿನ ಪುಡಿ, ಅರ್ಧ ಚಮಚ ಜೀರಿಗೆ, ಸ್ವಲ್ಪ ಸಾಸಿವೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆಹಣ್ಣು, ಸ್ವಲ್ಪ ಇಂಗು.

ಶುಂಠಿ ಮೆಣಸು ರಸಂ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ ಬೇಳೆ, 6 ಬಟ್ಟಲು ನೀರು, ಸ್ವಲ್ಪ ಕರಿಬೇವು, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಎಣ್ಣೆ, ಸ್ವಲ್ಪ ಉಪ್ಪನ್ನು ಹಾಕಿ 4 ವಿಷಲ್ ನನ್ನು ಹಾಕಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, 1 ಚಿಟಿಕೆ ಇಂಗು, ಜೀರಿಗೆ, ಸ್ವಲ್ಪ ಕರಿಬೇವು, ಒಣಮೆಣಸಿನಕಾಯಿ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಹಚ್ಚಿದ ಟೊಮೇಟೊ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಉಪ್ಪನ್ನು ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಜಜ್ಜಿದ ಹಸಿಶುಂಠಿ, ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೇಯಿಸಿಕೊಂಡ ಬೇಳೆ, ಮತ್ತೆ 2 ಬಟ್ಟಲಿನಷ್ಟು ನೀರು, ಸ್ವಲ್ಪ ಉಪ್ಪನ್ನು ಹಾಕಿ 2 – 3 ನಿಮಿಷಗಳ ಕಾಲ ಕುದಿಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ಶುಂಠಿ ಮೆಣಸು ರಸಂ ಸವಿಯಲು ಸಿದ್ಧ.