ಹತ್ತೇ ಹತ್ತು ನಿಮಿಷದಲ್ಲಿ ಮನೆಯವರೆಲ್ಲರೂ ಇಷ್ಟ ಪಡುವ ಗೋಧಿ ರವಾ ದೋಸೆ ಹೇಗೆ ಮಾಡುವುದು ಗೊತ್ತೇ??

ಹತ್ತೇ ಹತ್ತು ನಿಮಿಷದಲ್ಲಿ ಮನೆಯವರೆಲ್ಲರೂ ಇಷ್ಟ ಪಡುವ ಗೋಧಿ ರವಾ ದೋಸೆ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಲವಾರು ಸಂದರ್ಭಗಳಲ್ಲಿ ನಾವು ಕೆಲವೇ ಕೆಲವು ನಿಮಿಷಗಳಲ್ಲಿ ತಿಂಡಿ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅದರಲ್ಲಿಯೂ ಮಧ್ಯಮ ವರ್ಗದ ಕುಟುಂಬದಲ್ಲಿ ಒಬ್ಬರು ಗೃಹಿಣಿಯೂ ಬೆಳಗ್ಗೆ ಎದ್ದು ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ತಿಂಡಿ ಮಾಡಿ ನಿರ್ವಹಣೆ ಮಾಡಬೇಕಾಗುತ್ತದೆ. ಇನ್ನೂ ಬಹುತೇಕರ ಮನೆಯಲ್ಲಿ ತಿಂಡಿ ಮಾಡುವುದಷ್ಟೇ ಅಲ್ಲದೆ ಕೂಡಲೇ ಕೆಲಸಕ್ಕೆ ಹೊರಡ ಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ನೀವು ಒಂದು ವೇಳೆ ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದರೆ ಬನ್ನಿ ಇಂದು ನಾವು ಕೇವಲ ಹತ್ತೆ ಹತ್ತು ನಿಮಿಷಗಳಲ್ಲಿ ನಿಮಗೆ ಗರಿಗರಿಯಾದ ಗೋಧಿ ರವೆ ದೋಸೆ ಹೇಗೆ ಮಾಡುವುದು ಎಂಬುದನ್ನು ಹೇಳಿಕೊಡುತ್ತೇವೆ. ನಿಮ್ಮ ಅನುಕೂಲತೆಗಾಗಿ ಕೆಳಗಡೆ ಯೂಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ನಿಮ್ಮ ಮನೆಯಲ್ಲಿಯೂ ಕೂಡ ಟ್ರೈ ಮಾಡಿ ಹೀಗೆ ಬಂದಿದೆ ಎಂದು ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ. ಗೋಧಿ ರವೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಗೋದಿ ಹಿಟ್ಟು, ಅರ್ಧ ಬಟ್ಟಲು ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಸಕ್ಕರೆ, ಸ್ವಲ್ಪ ಅಡುಗೆ ಸೋಡಾ, ಸ್ವಲ್ಪ ಎಣ್ಣೆ ಅಥವಾ ತುಪ್ಪ, ಕಾಲು ಬಟ್ಟಲು ಮೊಸರು.

ಗೋಧಿ ರವೆ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಗೋದಿಹಿಟ್ಟು, ರವೆ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ 10 ನಿಮಿಷಗಳ ಕಾಲ ನೆನೆಯಲು ಬಿಡಿ.10 ನಿಮಿಷಗಳ ನಂತರ ಇದಕ್ಕೆ ಕಾಲು ಬಟ್ಟಲು ಮೊಸರು ಹಾಗೂ ಸ್ವಲ್ಪ ಅಡುಗೆ ಸೋಡಾ ವನ್ನು ಹಾಕಿ 2 – 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಕೊನೆಯದಾಗಿ ಗ್ಯಾಸ್ ನ ಮೇಲೆ ತವಾವನ್ನು ಇಟ್ಟು ತೆಳುವಾದ ದೋಸೆ ಸವರಿ, ಸ್ವಲ್ಪ ಎಣ್ಣೆಯನ್ನು ಹಾಕಿ ಒಂದು ಬದಿಯಲ್ಲಿ ಬೇಯಿಸಿಕೊಂಡರೆ ಗರಿಗರಿಯಾದ ಗೋಧಿ ರವೆ ದೋಸೆ ಸವಿಯಲು ಸಿದ್ಧ.