ಬಿಗ್ ಬಾಸ್ ಗೆ ಸಮಯ ನೀಡಲು 2 ಧಾರವಾಹಿ ಮುಗಿಸುವ ಷಾಕಿಂಗ್ ನಿರ್ಧಾರ ತೆಗೆದುಕೊಂಡ ಕಲರ್ಸ್ ಕನ್ನಡ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಬಿಗ್ ಬಾಸ್ ಕಾರ್ಯಕ್ರಮ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಇದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇಂದಿನ ಟ್ರೆಂಡ್ ಪ್ರಕಾರ ನಾವು ಗಮನಿಸುವುದಾದರೆ ಖಂಡಿತ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿಯೂ ಕೂಡ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂಬುದು ತೋರುತ್ತಿದೆ.

ಅಂತಹ ಸಂದರ್ಭದಲ್ಲಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುತ್ತಿರುವ ಕಾರಣ ಈಗಾಗಲೇ ನಡೆಯುತ್ತಿರುವ ಧಾರವಾಹಿಗಳು ಅಥವಾ ಕಾರ್ಯಕ್ರಮಗಳು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮಯ ಮಾಡಿಕೊಡಲು ಪಕ್ಕಕ್ಕೆ ಸರಿಯಬೇಕಾಗುತ್ತದೆ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರತಿ ದಿನವೂ ಸಂಜೆ ಎಂಟರಿಂದ ಒಂಬತ್ತು ಗಂಟೆಯವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

ಇನ್ನು ಶನಿವಾರ ವಾರದ ಜೊತೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಯಲಿದ್ದು ಭಾನುವಾರ ಕಾರ್ಯಕ್ರಮ ವಿವಿಧ ಆಯಾಮಗಳಲ್ಲಿ ಪ್ರಸಾರವಾಗಲಿದೆ. ಹಾಗಿದ್ದರೆ ಸೋಮವಾರದಿಂದ ಶುಕ್ರವಾರದವರೆಗೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂದಾದರೇ, ಈಗಾಗಲೇ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಕಥೆ ಏನಾಗುತ್ತದೆ ಎಂಬ ಅನುಮಾನ ನಿಮ್ಮೆಲ್ಲರಲ್ಲೂ ಮೂಡಿರಬಹುದು. ನಿಮಗೂ ಒಂದು ವೇಳೆ ಈ ಪ್ರಶ್ನೆ ಎದುರಾಗಿದ್ದರೆ ನಾವು ಇಂದು ಉತ್ತರ ನೀಡುತ್ತೇವೆ ಕೇಳಿ.

ಸಾಮಾನ್ಯವಾಗಿ ಕಲರ್ಸ್ ಕನ್ನಡ ಈ ರೀತಿಯ ಪರಿಸ್ಥಿತಿ ಎದುರಾದಾಗ ಸಾಧ್ಯವಾದಲ್ಲಿ ಧಾರವಾಹಿಗಳನ್ನು ಮುಗಿಸುತ್ತದೆ ಅಥವಾ ಬಿಗ್ ಬಾಸ್ ಕಾರ್ಯಕ್ರಮ ಅಥವಾ ಇನ್ಯಾವುದೋ ಧಾರವಾಹಿಗಳನ್ನು ಇತರ ವಾಹಿನಿಗಳಲ್ಲಿ ಪ್ರಸಾರ ಮಾಡುವ ಆಲೋಚನೆ ಮಾಡುತ್ತದೆ. ಈ ಬಾರಿ ಯಾವ ರೀತಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂಬುದನ್ನು ನಾವು ಗಮನಿಸುವುದಾದರೆ ಕಿರುತೆರೆಯ ಅಧಿಕೃತ ಮೂಲಗಳ ಪ್ರಕಾರ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಒಂದು ಧಾರವಾಹಿ ಸೇರಿದಂತೆ ಎರಡು ಧಾರವಾಹಿಗಳನ್ನು ಕಲರ್ಸ್ ಕನ್ನಡ ವಾಹಿನಿಯ ಮುಕ್ತಾಯಗೊಳಿಸಲು ನಿರ್ಧಾರ ಮಾಡಿದೆ

ಹೌದು ಸ್ನೇಹಿತರೇ ಇದೀಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮಯವಕಾಶ ನೀಡಲು ಮುಗಿಯುತ್ತಿರುವ ಧಾರವಾಹಿ ಎಂದರೇ ಹಲವಾರು ತಿಂಗಳುಗಾಲ ಕಾಲ ಟಿಆರ್ಪಿ ಲಿಸ್ಟಿನಲ್ಲಿ ಮೊದಲ ಸ್ಥಾನದಲ್ಲಿ ಪಡೆದುಕೊಂಡು ತಡ ನಂತರ ಇತ್ತೀಚಿಗೆ ಕಳೆದ ಕೆಲವು ತಿಂಗಳುಗಳಿಂದ ಆರನೇ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡು ಅಚ್ಚರಿ ಟಿಆರ್ಪಿ ಪಡೆದು ಕೊಳ್ಳುತ್ತಿರುವ ಮಂಗಳ ಗೌರಿ ಧಾರಾವಾಹಿ ಯನ್ನು ಮುಗಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧಾರ ಮಾಡಿದೆ.

ಇನ್ನುಳಿದಂತೆ ಇತ್ತೀಚೆಗೆ ಪ್ರಮುಖ ತಿರುವುಗಳನ್ನು ಪಡೆದುಕೊಂಡು ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿರುವ ಮಿಥುನ ರಾಶಿ ಧಾರಾವಾಹಿ ಯನ್ನು ಕಲರ್ಸ್ ಕನ್ನಡ ವಾಹಿನಿಯ ಮುಗಿಸಲು ನಿರ್ಧಾರ ಮಾಡಿದ್ದು ಕೊನೆಯ ಕ್ಷಣಗಳಲ್ಲಿ ನಾಯಕ ನಟ ಸಮರ್ಥ ರವರು ತನ್ನ ತಮ್ಮನ ತಪ್ಪನ್ನು ಮರೆತು ತಮ್ಮನ ಜೊತೆ ಒಂದಾಗಿ ಇಡೀ ಕುಟುಂಬ ಒಂದಾಗಲಿದೆ, ಎಂಬುದು ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Facebook Comments

Post Author: Ravi Yadav