ಹದವಾದ ಬಿಸಿ ಬೇಳೆ ಬಾತ್ ಸುಲಭವಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ಹದವಾದ ಬಿಸಿ ಬೇಳೆ ಬಾತ್ ಸುಲಭವಾಗಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಬಿಸಿಬೇಳೆಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಬಿಸಿಬೇಳೆ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು: 1 ಲೋಟ ತೊಗರಿಬೇಳೆ, 2 ಲೋಟ ಅಕ್ಕಿ, ಕಾಲು ಬಟ್ಟಲು ಹಸಿ ಬಟಾಣಿ, 1 ಬಟ್ಟಲು ತರಕಾರಿ (ಸಣ್ಣಗೆ ಹಚ್ಚಿದ ಆಲೂಗೆಡ್ಡೆ, ಹುರುಳಿಕಾಯಿ ಹಾಗೂ ಕ್ಯಾರೆಟ್), ಕಾಲು ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 5 ಲೋಟ ನೀರು, 3 ಚಮಚದಷ್ಟು ಎಣ್ಣೆ, ಎರಡುವರೆ ಚಮಚ ಕಡಲೆ ಬೀಜ, ಕಾಲು ಚಮಚ ಸಾಸಿವೆ, 5 – 6 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಕಾಲು ಚಮಚ ಇಂಗು, 20ರಿಂದ 25 ಸಾಂಬಾರ್ ಈರುಳ್ಳಿ, 1 ಸಾಮಾನ್ಯ ಈರುಳ್ಳಿ, 3 ಟೊಮೇಟೊ, 1 ಚಮಚ ಅಚ್ಚ ಖಾರದ ಪುಡಿ, 2 ಚಮಚ ಬಿಸಿಬೇಳೆಬಾತ್ ಪುಡಿ, ಅರ್ಧ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು.

ಬಿಸಿಬೇಳೆ ಬಾತ್ ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರ್ ನನ್ನು ತೆಗೆದುಕೊಂಡು ಅದಕ್ಕೆ 1 ಲೋಟ ತೊಗರಿಬೇಳೆ ಹಾಗೂ 2 ಲೋಟ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕುಕ್ಕರ್ ಗೆ ಹಸಿಬಟಾಣಿ, ಸಣ್ಣಗೆ ಹಚ್ಚಿದ ಆಲೂಗಡ್ಡೆ, ಸಣ್ಣಗೆ ಹಚ್ಚಿದ ಹುರುಳಿಕಾಯಿ, ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 5 ಲೋಟ ನೀರನ್ನು ಹಾಕಿ ಚೆನ್ನಾಗಿ ಒಂದು ಬಾರಿ ಮಿಕ್ಸ್ ಮಾಡಿ 2 – 3 ವಿಷಲ್ ಹಾಕಿಸಿಕೊಳ್ಳಿ.ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2ರಿಂದ 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾದ ನಂತರ ಕಡಲೆ ಬೀಜವನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಅದೇ ಬಾಣಲೆಗೆ ಸಾಸಿವೆ, 5 – 6 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಕಾಲು ಚಮಚದಷ್ಟು ಇಂಗು,20 – 25 ಸಾಂಬಾರ್ ಈರುಳ್ಳಿ, ಸಣ್ಣಗೆ ಹಚ್ಚಿದ ಒಂದು ಸಾಮಾನ್ಯ ಈರುಳ್ಳಿ ಹಾಗೂ ಸಣ್ಣಗೆ ಹಚ್ಚಿದ ಟೊಮೆಟೊವನ್ನು ಹಾಕಿ ಟೊಮೊಟೊ ಬೇಯುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅಚ್ಚಖಾರದ ಪುಡಿ, 2 ಚಮಚದಷ್ಟು ಬಿಸಿಬೇಳೆಬಾತ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣಿನ ರಸ ವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡ ಅನ್ನವನ್ನು ಹಾಕಿ ಮಿಕ್ಸ್ ಮಾಡಿ ಒಂದು ಕುದಿ ಬರುವವರೆಗೂ ಕುದಿಸಿಕೊಂಡರೆ ಬಿಸಿಬೇಳೆ ಬಾತ್ ಸವಿಯಲು ಸಿದ್ಧ.