ಡ್ರೋನ್ ಇಲ್ಲಾ, ಸೋನು ಇಲ್ಲವೇ ಇಲ್ಲಾ, ಬಿಗ್ ಬಾಸ್ ಗೆ ತೆರಳುವವರ ಪಟ್ಟಿ ಹೀಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಎಲ್ಲರೂ ಕಾದು ಕುಳಿತಿರುವ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿದ್ದು ಯಾವ ಯಾವ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ತೆರಳಿ ಎಲ್ಲರನ್ನೂ ಮನರಂಜಿಸುತ್ತಾರೆ ಎಂಬುದರ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇನ್ನು ಈ ಬಾರಿಯೂ ಪ್ರತಿ ಬಾರಿಯಂತೆ ಹಲವಾರು ಹೆಸರುಗಳು ಹರಿದಾಡುತ್ತಿದ್ದು ಯಾರು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ ಕೆಲವೊಂದು ಜನರ ಹೆಸರನ್ನು ತೋರಿಸಿ ‌ಬಿಗ್ ಬಾಸ್ ಮನೆಗೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತ್ತಿದ್ದರೂ ಕೂಡ ಆ ಸಾಲಿನಲ್ಲಿ ಹಲವಾರು ಜನ ಬಿಗ್ ಬಾಸ್ ಮನೆಗೆ ಹೋಗುವ ಯಾವುದೇ ಅರ್ಹತೆಯನ್ನು ಪಡೆದುಕೊಂಡಿಲ್ಲ. ಆದರೆ ಇದೀಗ ಭಾರತದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ಐಬಿಟೈಂಸ್ ಸಂಸ್ಥೆಯು ಕನ್ನಡ ಬಿಗ್ ಬಾಸ್ ತೆರಳುತ್ತಿರುವ ಸಂಭಾವ್ಯ ಸೆಲೆಬ್ರೆಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿ ಈ ಕೆಳಗಿನಂತಿದೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಡಾಕ್ಟರ್ ವಿಠ್ಠಲ್ ರಾವ್ ಖ್ಯಾತಿಯ ರವಿಶಂಕರ್ ಗೌಡ, ನ್ಯೂಸ್ ರಿಪೋರ್ಟರ್ ರಾಧಾ ಹಿರೆಗೌಡರ್, ಎಸ್ಕ್ಯೂಮ್ ಮಿ ಸಿನಿಮಾ ಖ್ಯಾತಿಯ ಸುನಿಲ್ ರಾವ್, ಖ್ಯಾತ ಹಾಸ್ಯ ಕಲಾವಿದ ಟೆನಿಸ್ ಕೃಷ್ಣ, ನಿರ್ದೇಶಕ ರವಿ ಶ್ರೀವತ್ಸ, ತರಂಗ ವಿಶ್ವ, ಹಿರಿಯ ಕಲಾವಿದೆ ರೇಖಾ ದಾಸ್, ಸರಿಗಮಪ ಹನುಮಂತು, ಮಿಮಿಕ್ರಿ ಗೋಪಿ, ಆಲ್ ಓಕೇ ಅಲಿಯಾಸ್ ಅಲೋಕ್, ಅನುಷಾ, ಆರ್.ಜೆ.ರಾಜೇಶ್, ಐಶ್ವರ್ಯ ರಂಗರಾಜನ್, ವೈಷ್ಣವಿ, ರಜಿನಿ, ಶುಭ ಪೂಂಜ , ವಿನಯ ಪ್ರಸಾದ್, ವೀಣಾ ಪೊನ್ನಪ್ಪ, ಭಾವ ರಾಮಣ್ಣ, ರಾಜೇಶ್ ಗೌಡ, ಚಿದಂಬಾರ್, ನಯನ, ದನ್ಯಾ ದೀಪಿಕಾ, ಸುಕ್ರುಥು ನಾಗರಾಜ. ಇಷ್ಟು ಜನರ ಹೆಸರು ಕೇಳಿಬರುತ್ತಿದೆ.

Facebook Comments

Post Author: Ravi Yadav