ಮನೆಯಲ್ಲಿಯೇ ಸುಲಭವಾಗಿ ರುಮಾಲಿ ರೋಟಿ ಮಾಡುವುದು ಹೇಗೆ ಗೊತ್ತೇ??

ಮನೆಯಲ್ಲಿಯೇ ಸುಲಭವಾಗಿ ರುಮಾಲಿ ರೋಟಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ರುಮಾಲಿ ರೋಟಿ ಮಾಡುವ ಸರಳವಾದ ವಿಧಾನವನ್ನು ನಿಮಗೆ ತಿಳಿಸಕೊಡುತ್ತೇವೆ ಬನ್ನಿ, ನಿಮ್ಮ ಅನುಕೂಲತೆಗಾಗಿ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ಟ್ರೈ ಮಾಡಿ ಹೇಗೆ ಬಂದಿತು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ರುಮಾಲಿ ರೋಟಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಮೈದಾಹಿಟ್ಟು, 1 ಬಟ್ಟಲು ಗೋದಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, 1 ಬಟ್ಟಲು ಹಾಲು ಅಥವಾ ನೀರು.

ರುಮಾಲಿ ರೋಟಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಮೈದಾ ಹಿಟ್ಟು, ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ ಅಥವಾ ಹಾಲನ್ನು ಸಹ ಹಾಕಿ ಹಿಟ್ಟನ್ನು ಚಪಾತಿ ಹದಕ್ಕೆ ಕಲಸಿಕೊಳ್ಳಿ. ನಂತರ ಇದರ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ 10-15 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಬಟ್ಟಲಿಗೆ ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಉಪ್ಪಿನ ನೀರನ್ನು ತಯಾರಿಸಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಬಾಣಲೆಯನ್ನು ಉಲ್ಟಾ ಇಟ್ಟು ಕಡಿಮೆ ಉರಿಯಲ್ಲಿ ಕಾಯಲು ಬಿಡಿ. ನಂತರ ನೆನೆಸಿದ ಹಿಟ್ಟನ್ನು ಒಂದು ಬಾರಿ ನಾದಬೇಕು. ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಒಣ ಗೋಧಿಹಿಟ್ಟನ್ನು ಬಳಸಿಕೊಂಡು ಚಪಾತಿ ಲಟ್ಟಿಸಿದ ಹಾಗೆ ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ ಕೊಳ್ಳಬೇಕು. ಗ್ಯಾಸ್ ನ ಮೇಲೆ ಇಟ್ಟ ಉಲ್ಟಾ ಬಾಣಲೆಯ ಮೇಲೆ ಉಪ್ಪಿನ ನೀರನ್ನು ಹಾಕಿಕೊಳ್ಳಬೇಕು ನಂತರ ಲಟ್ಟಿಸಿದ ಹಿಟ್ಟನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸುವಾಗ ಒಂದು ಕಾಟನ್ ಬಟ್ಟೆಯಿಂದ ಹಿಟ್ಟನ್ನು ಹೊತ್ತಿಕೊಂಡು ಬೇಯಿಸಿದರೆ ರುಮಾಲಿ ರೋಟಿ ಸವಿಯಲು ಸಿದ್ಧ.